ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬೇಡವೇ ಬೇಡ: ಬಿ.ಟಿ.ಲಲಿತಾ ನಾಯಕ್

Oct 13, 2025 - 21:46
 0  10
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬೇಡವೇ ಬೇಡ: ಬಿ.ಟಿ.ಲಲಿತಾ ನಾಯಕ್

ಆಪ್ತ ನ್ಯೂಸ್ ಸಾಗರ:

ಶರಾವತಿ ಪಂಪ್ಡ್ ಸ್ಟೋರೇಜ್ ಆಘಾತಕಾರಿ ಯೋಜನೆ. ಇದರ ಶವ ದಹನವಾಗಲೇಬೇಕು. ಯೋಜನೆ ಬೇಡ ಎಂದು ಪ್ರತಿಯೊಂದು ಮನೆಯಿಂದಲೂ ಪ್ರತಿಭಟನೆ ಧ್ವನಿ ಬರಬೇಕು ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಕರೆ ನೀಡಿದ್ದಾರೆ.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಸೋಮವಾರ ಶಿವಮೊಗ್ಗ ಜಿಲ್ಲಾ ರೈತ ಸಂಘ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಹಮ್ಮಿಕೊಂಡಿರುವ ೧೦ನೇ ದಿನದ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಸುರಂಗ ಮಾರ್ಗ ತೋಡಿ ಯೋಜನೆ ಅನುಷ್ಟಾನಕ್ಕೆ ತಂದರೆ ಪರಿಸರದ ಮೇಲಾಗುವ ದುಷ್ಟರಿಣಾಮದ ಬಗ್ಗೆ ಸರ್ಕಾರ ಯೋಜನೆ ಮಾಡುತ್ತಿಲ್ಲ. ವಿದ್ಯುತ್ ದೊಡ್ಡದೋ, ಮನುಷ್ಯ, ಜೀವವೈವಿಧ್ಯದ ಬದುಕು ದೊಡ್ಡದೋ ಎನ್ನುವುದನ್ನು ಸರ್ಕಾರ ಮೊದಲು ನಿರ್ಧಾರ ಕೈಗೊಳ್ಳಬೇಕು. ಸಸ್ಯಸಂಪತ್ತು, ಪ್ರಾಣಿ ಪಕ್ಷಿ ಸಂಕುಲ. ಮನುಷ್ಯ ಬದುಕು ನಾಶ ಮಾಡುವ ಯೋಜನೆ ನಮಗೆ ಬೇಡ. ಪಶ್ಚಿಮಘಟ್ಟ ಇಷ್ಟು ದೊಡ್ಡ ಯೋಜನೆಯನ್ನು ಹೊರುವ ಶಕ್ತಿ ಹೊಂದಿಲ್ಲ. ಈ ನಿಟ್ಟಿನಲ್ಲಿ ರೈತ ಸಂಘ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಸಮಯೋಚಿತವಾಗಿದೆ. ಎಲ್ಲರೂ ಹೋರಾಟಕ್ಕೆ ಬೆಂಬಲ ನೀಡಬೇಕು. ಸ್ಥಳೀಯ ಶಾಸಕರು, ಸಂಸದರು ಯೋಜನೆ ವಿರೋಧಿಸಬೇಕು. ಯೋಜನೆ ವಿರೋಧಿಸುವಾಗ ಪಕ್ಷಪಾರ್ಟಿ ನೋಡಬೇಡಿ. ಜಿನಜೀವನದ ಬಗ್ಗೆ ಗಮನಿಸಿ. ತಕ್ಷಣ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಟಾನವನ್ನು ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದರು. 
ರಾಜ್ಯ ರೈತ ಮೋರ್ಚಾದ ಪ್ರಮುಖರಾದ ಪ್ರಸನ್ನ ಕೆರೆಕೈ ಮಾತನಾಡಿ, ಪಶ್ಚಿಮಘಟ್ಟ ಸುಸ್ಥಿರವಾಗಿದೆ ಪ್ರಪಂಚವೇ ಆರೋಗ್ಯಕರವಾಗಿರುತ್ತದೆ ಎಂದು ವೈಜ್ಞಾನಿಕ ವರದಿಗಳು ಹೇಳುತ್ತವೆ. ಆದರೆ ಪಶ್ಚಿಮಘಟ್ಟದ ಪರಿಸರದ ಅಸ್ತಿತ್ವವನ್ನೇ ನಾಶಪಡಿಸುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಯಾವುದೇ ಕಾರಣಕ್ಕೂ ಅನುಷ್ಟಾನಕ್ಕೆ ತರಬಾರದು. ಸ್ಥಳೀಯ ಶಾಸಕರು ಶಾಸನ ಸಭೆಯಲ್ಲಿ ಯೋಜನೆ ಪರವಾಗಿ ಮಾತನಾಡಿದ್ದು ಬೇಸರ ತರಿಸಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸಾಧಕ ಬಾಧಕಗಳ ಕುರಿತು ಸಾರ್ವಜನಿಕ ಚರ್ಚೆಯಾಗಬೇಕು. ರಾಜ್ಯ ಸರ್ಕಾರ ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ಅಖಿಲೇಶ್ ಚಿಪ್ಪಳಿ, ಮಲ್ಲಿಕಾರ್ಜುನ ಹಕ್ರೆ, ಗಣಪತಿ ಹೆನಗೆರೆ, ರಮೇಶ್ ಕೆಳದಿ, ಭದ್ರೇರ್ಶ ಬಾಳಗೋಡು, ಡಾ. ರಾಮಚಂದ್ರಪ್ಪ, ಕಬಸೆ ಅಶೋಕ ಮೂರ್ತಿ, ಸ್ವಾಮಿ ಗೌಡ ಇನ್ನಿತರರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0