ದೀಪಾವಳಿಯಲ್ಲಿ ಕೃತಕ ದೀಪಗಳ ಪ್ರಭಾವ

~ವಿನಯ್ ಹೊನ್ನಾವರ
*****
ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಬೆಳಕಿಗೆ ವಿಶೇಷ ಸ್ಥಾನವಿದೆ. ಭಾರತದ ಸಂಸ್ಕೃತಿಯಲ್ಲಿ ಬೆಳಕು ಅಂಧಕಾರದ ವಿರುದ್ಧದ ವಿಜಯದ ಪ್ರತೀಕವಾಗಿ ಬೆಳೆದು ಬಂದಿದೆ. ಹಾಗಾಗಿ ದೀಪಾವಳಿ ಬೆಳಕಿನ ಹಬ್ಬವೆಂದು ಕರೆಯುವುದೂ ಈ ಕಾರಣದಿಂದಲೇ. ಆದರೆ ಇತ್ತೀಚಿನ ದಶಕಗಳಲ್ಲಿ ದೀಪಾವಳಿ ದೀಪಗಳ ರೂಪದಲ್ಲಿ ತಾಂತ್ರಿಕತೆಯ ಸ್ಪರ್ಶ ಕಂಡು ಬರುತ್ತಿದೆ. ಇದಕ್ಕೆ ಕಾರಣ ತಾಂತ್ರಿಕ (ಟೆಕ್ನಾಲಜಿಕಲ್) ಕೃತಕಬೆಳಕು LED ದೀಪಗಳು, ಸ್ಮಾರ್ಟ್ ಲೈಟಿಂಗ್ ಸಿಸ್ಟಮ್‌ಗಳು, ಕರ್ಟನ್ ಲೈಟ್ ,ಬಾಟಲ್ ಲೈಟ್ಸ್,ಇವುಗಳಲ್ಲಿ ಮಲ್ಟಿ ಕಲರ್ ಲೈಟ್ ಹೀಗೆ ಇನ್ನೂ ಅನೇಕ ರೀತಿಯ ಮ್ಯೂಸಿಕ್ ಸಿಂಕ್ ಲೈಟಿಂಗ್ ಮುಂತಾದವುಗಳ ಪ್ರವೇಶ ಮಾಡಿವೆ.
ಪಾರಂಪರ್ಯ ದೀಪಗಳಿಂದ ಕೃತಕ ಬೆಳಕಿಗೆ ಒಂದು ಬದಲಾವಣೆಯ ದಾರಿ
ಸಾಮಾನ್ಯವಾಗಿ ಹಬ್ಬಗಳ ಸಂಭ್ರಮದಲ್ಲಿ
ಹೊಳಪಿನ ಮಣ್ಣಿನ ದೀಪಗಳಿಗೆ ತೆಂಗಿನೆಣ್ಣೆ ಹಾಕಿ ಹಚ್ಚುತ್ತಿದ್ದ ದೀಪಗಳು ಈಗ ತರುವಾಯ ವಿದ್ಯುತ್ ಚರಿತ್ರೆಯ ಬೆಳಕುಗಳಿಗೆ ಮಿಕ್ಕಿ ಹೋಗುತ್ತಿದ್ದಂತೆ ಕಾಣುತ್ತಿದೆ. ಈ ಬೆಳಕುಗಳು ಪಾರದರ್ಶಕ, ಬಣ್ಣ ಬದಲಾಯಿಸಬಲ್ಲ, ರಿಮೋಟ್ ಮೂಲಕ ಅಥವಾ ಸ್ಮಾರ್ಟ್‌ಫೋನ್ ಆ್ಯಪ್‌ಗಳಿಂದ ನಿಯಂತ್ರಿಸಬಹುದಾದಂತಿವೆ.
ತಾಂತ್ರಿಕ ಬೆಳಕುಗಳು ಮಾತ್ರವಲ್ಲದೇ, ಇಂದು ಜನ ವಾಯ್ಸ್ ಅಸಿಸ್ಟೆಂಟ್ ಮೂಲಕ "Alexa, turn on Diwali lights!" ಎನ್ನುವ ಮಟ್ಟಿಗೆ ತಾಂತ್ರಿಕವಾಗಿದ್ದಾರೆ. ಇದು ಹಬ್ಬದ ಅನುಭವವನ್ನು ಇನ್ನು ಹೆಚ್ಚು ನವೀನಮಾಡುತ್ತಿದೆ, ಅನುಕೂಲಕರವೂ ಆಗುತ್ತಿದೆ.
ಕೃತಕ ಬೆಳಕಿನ ದೀಪಗಳ ಪ್ರಯೋಜನಗಳು
1. ಶಕ್ತಿ ಉಳಿತಾಯ: LED ದೀಪಗಳು ಬಹಳ ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಹೆಚ್ಚು ಹೊಳೆಯುತ್ತವೆ.
2. ಪರಿಸರ ಸ್ನೇಹಿ: ಪಟಾಕಿಗಳ ಬದಲು ಬೆಳಕಿನ ಅಲಂಕಾರ ಬಳಕೆ ಹೆಚ್ಚಾಗುತ್ತಿರುವುದು ಶಬ್ದ ಮಾಲಿನ್ಯ, ವಾಯುಮಾಲಿನ್ಯ ಕಡಿಮೆ ಮಾಡುತ್ತದೆ.
3. ಸೌಂದರ್ಯ ಹಾಗೂ ವೈವಿಧ್ಯತೆ: ವಿಭಿನ್ನ ಥೀಮ್‌ಗಳಲ್ಲಿ, ಬಣ್ಣಗಳಲ್ಲಿ, ಆನಿಮೇಶನ್‌ಗಳಲ್ಲಿ ಲಭ್ಯವಿರುವ ದೀಪಗಳು ಮನೆಗೆ ಇನ್ನಷ್ಟು ಹಬ್ಬದ ಹೊಳಪಿನ ವಾತಾವರಣ ನೀಡುತ್ತವೆ.
4. ನಿಯಂತ್ರಣ ಸಾಧ್ಯತೆ: ಒಂದು ಬಟನ್ ಒತ್ತುವುದರಿಂದ ದೀಪಗಳನ್ನು ಆನ್/ಆಫ್ ಮಾಡಬಹುದಾದ ಸುಲಭ ಸೌಲಭ್ಯ ಇದರಲ್ಲಿದೆ.
ಆದರೆ, ಸವಾಲುಗಳು ಸಹ ಇವೆ...
ಕೃತಕ ಬೆಳಕಿನ ದೀಪಗಳ ಬಳಕೆ ಹೆಚ್ಚಿದಂತೆ, ನಾವೆಲ್ಲರೂ “ಪ್ಲಾಸ್ಟಿಕ್, ಚೈನೀಸ್ಸ್ ಉತ್ಪನ್ನ”ಗಳತ್ತ ಜಾರುವ ಅಪಾಯವಿದೆ. ಇದರೊಂದಿಗೆ ನಮ್ಮ ಸಾಂಸ್ಕೃತಿಕ ಮೌಲ್ಯಗಳು ಸ್ಥಳೀಯ ಉಳಿತಾಯದ ಕುಸಿತ ಇತ್ಯಾದಿ ಸಮಸ್ಯೆಗಳು ಹುಟ್ಟಿಕೊಂಡಿವೆ. ಮಣ್ಣಿನ ದೀಪಗಳು ಮಾಡುವ ಆತ್ಮೀಯತೆಯ ಅನುಭವವೊಂದು ತಾಂತ್ರಿಕ ಬೆಳಕುಗಳಲ್ಲಿ ಕಾಣಿಸುವುದಿಲ್ಲ ಎನ್ನುವುದನ್ನು ಹಲವರು ಒಪ್ಪುತ್ತಾರೆ.ಆದರೆ ಜನರು ಇವುಗಳನ್ನೇ ಹೆಚ್ಚಾಗಿ ಖರೀದಿಸಲು ಹಾತೊರೆಯುದರಿಂದ ಮಣ್ಣಿನ ದೀಪ ಮಾಡುವವರಿಗೆ ಹೊಡೆತ ಬೀಳುತ್ತದೆ.ಈಗಿನ ಆಧುನಿಕ ಕಾಲದಲ್ಲಿ ಜನರು ಸುಲಭ ರೀತಿ ಆರಾಮದಾಯಕ ಬದುಕು ಸಾಗಿಸುವ ಭರದಲ್ಲಿ ಹಿರಿಯರ ಸಂಸ್ಕೃತಿ ಮೂಲೆಗುಂಪು ಮಾಡಿದ್ದಾರೆ.
ದೀಪಾವಳಿಯ ಪವಿತ್ರತೆಯು ಕೇವಲ ಹೊಸ ತಂತ್ರಜ್ಞಾನ ಅಥವಾ ಪಟಾಕಿಗಳಲ್ಲ, ಅದು ಬೆಳಕಿನ ಅಂತರಂಗದಲ್ಲಿ ಇದೆ. ನಾವು ಪರಂಪರೆಯ ದೀಪಗಳ ಜೊತೆ ತಾಂತ್ರಿಕ ಬೆಳಕುಗಳನ್ನು ಸಂಯೋಜಿಸುವ ಮೂಲಕ ಹಬ್ಬವನ್ನು ಸಾರ್ಥಕಗೊಳಿಸಬಹುದು. ಉದಾಹರಣೆಗೆ, ಮಣ್ಣಿನ ದೀಪಗಳಲ್ಲಿ ಶುದ್ಧ ಎಣ್ಣೆ ಹಾಕಿ ಹಚ್ಚಿದ ದೀಪಗಳೊಂದಿಗೆ ಜೊತೆಗೆ ಕಲರ್ ಫುಲ್ LED ಲೈಟ್ಸ್ ಅಲಂಕಾರಕ್ಕೆ ಬಳಸಬಹುದು. ಸ್ಥಳೀಯವಾಗಿ ತಯಾರಿಸಿದ ದೀಪಗಳನ್ನು ಖರೀದಿಸುವ ಮೂಲಕ ಸ್ವದೇಶಿ ಉತ್ಪನ್ನಗಳಿಗೆ ಸಹ ಬೆಂಬಲ ನೀಡಬಹುದು
ದೀಪಾವಳಿಯ ಮುಖ್ಯ ಉದ್ದೇಶ ಅಂಧಕಾರವನ್ನು ದೂರಮಾಡುವುದು. ಅದು ಮನಸ್ಸಿನಲ್ಲಿರಲಿ ಅಥವಾ ಮನೆಗೆ ಸಂಬಂಧಪಟ್ಟಿರಲಿ. ತಾಂತ್ರಿಕ ಬೆಳಕುಗಳು ಈ ಹಬ್ಬವನ್ನು ಇನ್ನಷ್ಟು ವಿಜೃಂಭಿತಗೊಳಿಸುತ್ತಿರುವಾಗ, ನಾವು ಅದರ ಅರ್ಥವನ್ನೂ ಮರೆಯದೆ ಸಂಭ್ರಮಿಸಬೇಕು. ಈ ವರ್ಷ,ಹೆಚ್ಚು ನವೀನತೆಯೊಂದಿಗೆ ಪರಂಪರೆಯ ಬೆಳಕು ಮನೆ ಮನಗಳಲ್ಲಿ ಕೂಡಾ ಹೊಳೆಯಲಿ!
What's Your Reaction?






