ಮೋದಿ ಜನ್ಮ ದಿನದ ಅಂಗವಾಗಿ ರಕ್ತದಾನ ಶಿಬಿರ

ಆಪ್ತ ನ್ಯೂಸ್ ಸಾಗರ:
ದೇಶದೆಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಬಿಜೆಪಿ ವತಿಯಿಂದ ಸೇವಾ ಪಾಕ್ಷಿಕ ನಡೆಯುತ್ತಿದೆ. ಇದರ ಅಂಗವಾಗಿ ಸಾಗರ ಮಂಡಲದ ಯುವಮೋರ್ಚಾ ವತಿಯಿಂದ ರೋಟರಿ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಶುಕ್ರವಾರ ಆಯೋಜಿಸಲಾಗಿತ್ತು.
ಈ ವೇಳೆ ಜಿಲ್ಲಾ ಅಧ್ಯಕ್ಷ ಕೆ.ಎನ್. ಜಗದೀಶ್, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟಿಲ್, ಯುವ ಮೋರ್ಚಾ ಅಧ್ಯಕ್ಷ ಪರಶುರಾಮ್, ಮಾತನಾಡಿ ಪಕ್ಷದ ವತಿಯಿಂದ ನಡೆಯುತ್ತಿರುವ ಸೇವಾ ಪಾಕ್ಷಿಕದ ಮಹತ್ವ ಹಾಗೂ ರಕ್ತದಾನ ಮಾಡುವುದರಿಂದ ಆಗುವ ಲಾಭದ ಬಗ್ಗೆ ತಿಳಿಸಿದರು.
ಮಂಡಲದ ಯುವಮೋರ್ಚಾ ಅಧ್ಯಕ್ಷರಾದ ಪರಶುರಾಮ್, ಹರೀಶ್ ಮೂಡಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಗರ ರೋಟರಿ ಅಧ್ಯಕ್ಷ ಗೌತಮ್ ಸೇರಿದಂತೆ ೧೧೩ ಜನ ರಕ್ತದಾನ ಮಾಡಿದರು.
ನಗರಸಭಾ ಉಪಾಧ್ಯಕ್ಷೆ ಸವಿತಾ ವಾಸು, ನಗರ ಅಧ್ಯಕ್ಷರಾದ ಗಣೇಶ್ ಪ್ರಸಾದ್ ಕೆ.ಆರ್, ಗ್ರಾಮಾಂತರ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ಸೇರಿದಂತೆ ಪ್ರಮುಖರಾದ ರಾಜನಂದಿನಿ ಕಾಗೋಡು, ಪ್ರಶಾಂತ್ ಕುಕ್ಕೆ, ಸಂತೋಷ್ ಆರ್. ಶೇಟ್, ಅರುಣ್ ಕುಗ್ವೆ, ದರ್ಶನ್, ಸತೀಶ್ ಮೊಗವೀರ್, ಸಂತೋಷ್ ರಾಯಲ್, ವಿನಯ್ ಪೂಜಾರಿ, ಗುರುಪ್ರಸಾದ್, ಮುರಳಿ ಮಂಕಳಲೆ, ಮಧುರ ಶಿವಾನಂದ್, ಮಲ್ಲಿಕಾರ್ಜುನ್ ಹಕ್ರೆ, ಆರ್. ಶ್ರೀನಿವಾಸ್, ಪ್ರೇಮಾ ಕಿರಣ್ ಸಿಂಗ್, ಬಿ.ಟಿ. ರವಿ, ನಿತಿನ್, ಮಹೇಶ್, ಚೇತನ್ ಸೇರಿದಂತೆ ನೂರಾರು ಯುವಮೋರ್ಚಾ ಪದಾಧಿಕಾರಿಗಳು, ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
What's Your Reaction?






