ರೇಡಿಯೇಷನ್ ಪ್ರೊಟೆಕ್ಷನ್ ಇನ್ ಡೈಯಾಗ್ನಾಸ್ಟಿಕ್ ರೇಡಿಯಾಲಜಿ ಕುರಿತ ವೈಜ್ಞಾನಿಕ ಕಾರ್ಯಾಗಾರ

ಆಪ್ತ ನ್ಯೂಸ್ ಸಾಗರ:
ರೇಡಿಯೇಷನ್ ಪ್ರೊಟೆಕ್ಷನ್ ಇನ್ ಡೈಯಾಗ್ನಾಸ್ಟಿಕ್ ರೇಡಿಯಾಲಜಿ ಕುರಿತ ವೈಜ್ಞಾನಿಕ ಕಾರ್ಯಾಗಾರ ಸೆ. 28ರ ಬೆಐಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಶೃಂಗೇರಿ ಶಂಕರಮಠದಲ್ಲಿ ನಡೆಯಲಿದೆ ಎಂದು ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಹಿರಿಯ ಸಲಹೆಗಾರ ಮಾ.ಸ. ನಂಜುಂಡಸ್ವಾಮಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸಕಾರಿ ರೇಡಿಯಾಲಜಿ ಆಫೀಸರ್ಸ್ ಅಸೋಶಿಯೇಷನ್, ಹೊನ್ನಾವರ ರಾಂಟ್ಜನ್ ಪ್ಯಾರಾಮೆಡಿಕಲ್ ಸೈನ್ಸ್ ಮತ್ತು ಶಿವಮೊಗ್ಗ ರೇಡಿಯಾಲಜಿ ಇಮೇಜಿಂಗ್ ಅಸೋಶಿಯೇಷನ್ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹೊನ್ನಾವರ ರಾಂಜ್ಟನ್ ಇನ್ಸಿಟ್ಯೂಟ್ ಮುಖ್ಯಸ್ಥ ಟಿ. ಸುರೇಶ್ ಕಾರ್ಯಾಗಾರ ಉದ್ಘಾಟಿಸಲಿದ್ದು, ಶಂಕರಯ್ಯ ವಿ. ಗುರುವಿನ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಶೋಕ್ ಎಸ್. ವಾಲ್ಮೀಕಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
ಈ ಸಮಾರಂಭದಲ್ಲಿ ಡಾ. ಎಚ್.ಎಂ. ಚಂದ್ರಶೇಖರ್, ಡಾ. ಕಿಶನ್ ಆರ್. ಭಾಗವತ್, ಡಾ. ಎಂ.ಬಿ. ನವೀನ್ ರಾಜ್‌ರನ್ನು ಸನ್ಮಾನಿಸಲಾಗುತ್ತದೆ. ಪ್ರಮುಖರಾದ ಮಾ.ಸ.ನಂಜುAಡಸ್ವಾಮಿ, ಅಶ್ವಿನಿಕುಮಾರ್, ಡಾ. ಕೆ.ಎಸ್. ನಟರಾಜ್, ಡಾ. ಎಲ್. ಸುರೇಶ್, ಡಾ. ಎಸ್.ಎ. ಶ್ರೀನಿವಾಸ್, ಸಿದ್ದಾಚಾರಿ ಉಪಸ್ಥಿತರಿರುತ್ತಾರೆ ಎಂದು ಮಾಹಿತಿ ನೀಡಿದರು.
ರಾಜ್ಯದ ಬಹುತೇಕ ಆಸ್ಪತ್ರೆಗಳಲ್ಲಿ ರೇಡಿಯಾಜಿಸ್ಟ್ಗಳ ಕೊರತೆಯಿದೆ. ಒತ್ತಡದ ನಡುವೆ ಎಕ್ಸರೆ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಇದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶ ಹೊಂದಿದ್ದೇವೆ. ಮಧ್ಯಾಹ್ನ ೨ಕ್ಕೆ ಸರ್ವಸದಸ್ಯರ ಸಭೆ ನಡೆಯಲಿದ್ದು, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಉದ್ಘಾಟಿಸಲಿದ್ದಾರೆ. ಕ್ಷಕಿರಣ ತಂತ್ರಜ್ಞರ ರಾಜ್ಯಾಧ್ಯಕ್ಷ ಅಶೋಕ್ ಸೋಮಪ್ಪ ವಾಲ್ಮೀಕಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಗೋಷ್ಟಿಯಲ್ಲಿ ಆರ್.ಎನ್. ರವಿ, ಸತೀಶ್ ಕುಮಾರ್, ರಾಜಶೇಖರ್ ಎಚ್. ಇಳಿಗೇರ್ ಉಪಸ್ಥಿತರಿದ್ದರು.
What's Your Reaction?






