ಶತಾವರಿ: ಆಯುರ್ವೇದದ ಅಮೃತ.

Feb 17, 2026 - 22:09
 0  70
ಶತಾವರಿ: ಆಯುರ್ವೇದದ ಅಮೃತ.

~ಡಾ. ಸಾಕ್ಷಿ ರವಿಕಿರಣ ಪಟವರ್ಧನ್

~~~~~~~~~~~~~~~~~~~~~~~~~~


ಆಯುರ್ವೇದದಲ್ಲಿ ಶತಾವರಿಯನ್ನು ‘ಗಿಡಮೂಲಿಕೆಗಳ ರಾಣಿ’ ಎಂದು ಕರೆಯಲಾಗುತ್ತದೆ.ಕನ್ನಡದಲ್ಲಿ ಹಲವು ಮಕ್ಕಳಗಡ್ಡೆ ಎಂದು ಕರೆಯಲ್ಪಡುತ್ತದೆ.

 ಇದರ ವೈಜ್ಞಾನಿಕ ಹೆಸರು Asparagus racemosus. ಶತಾವರಿ ತನ್ನ ವಿಶಿಷ್ಟ ಔಷಧೀಯ ಗುಣಗಳಿಂದ ದೇಹದ ದೋಷಗಳನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿದೆ.

 ಮುಖ್ಯವಾಗಿ ವಾತ ಮತ್ತು ಪಿತ್ತ ದೋಷಗಳನ್ನು ಶಮನಗೊಳಿಸುತ್ತದೆ (ಅತಿಯಾಗಿ ಸೇವಿಸಿದರೆ ಕಫವನ್ನು ಹೆಚ್ಚಿಸಬಹುದು)

ಶತಾವರಿಯು ಬಹುಮುಖ ಪ್ರಯೋಜನಗಳನ್ನು ಹೊಂದಿದೆ:
ಸ್ತನ್ಯವರ್ಧಕ 🍼 🥛 (Galactagogue):
Prolactin modulation ನಿಂದ ಬಾಣಂತಿಯರಲ್ಲಿ ಎದೆಹಾಲಿನ ಉತ್ಪತ್ತಿಯನ್ನು ಹೆಚ್ಚಿಸಲು ಅತ್ಯುತ್ತಮ ಔಷಧ. ಹಾಲಿನೊಂದಿಗೆ ಶತಾವರಿ ಚೂರ್ಣ ಸೇವಿಸುವುದು ಹೆಚ್ಚು ಪರಿಣಾಮಕಾರಿಯಾಗಿದೆ.

ರಸಾಯನ: ದೇಹಕ್ಕೆ ನವಚೈತನ್ಯ ನೀಡುತ್ತದೆ ಹಾಗೂ ವಯೋವೃದ್ಧಿ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಕಾರಿ.
Antioxidant effect  ನೋಡಬಹುದು .
ನೇತ್ರ್ಯ (Netrya): ಕಣ್ಣಿನ ಆರೋಗ್ಯ ಹಾಗೂ ದೃಷ್ಟಿ ಶಕ್ತಿಗೆ ಪೂರಕ.
ಮೇಧ್ಯ: ಸ್ಮರಣಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯಕ.
ಸ್ವರಭೇದ: ಜೇನುತುಪ್ಪ ಹಾಗೂ ತುಪ್ಪದೊಂದಿಗೆ ಶತಾವರಿ ಚೂರ್ಣ ಸೇವಿಸಿದರೆ ಪರಿಣಾಮ.

ಆಯುರ್ವೇದದಲ್ಲಿ ಶತಾವರಿಯನ್ನು ಈ ರೂಪಗಳಲ್ಲಿ ಬಳಸಲಾಗುತ್ತದೆ:
ಸೇವನೆಯ ಪ್ರಮಾಣ (Dosage):
ಚೂರ್ಣ: 3–6 ಗ್ರಾಂ
ರಸ: 10–20 ಮಿ.ಲಿ.

ಶತಾವರಿಯನ್ನು ಆಕಳುಗಳಿಗೂ ಕೂಡುತ್ತಾರೆ. ರಾಸಾಯನಿಕ ರಹಿತ ದುಗ್ದವರ್ಧಕವಾಗಿ ಉಪಯೋಗ.
⚠️ ಮುಖ್ಯ ಜಾಗೃತೆ

ಔಷಧೀಯ ಸಸ್ಯಗಳನ್ನು ಇತಿಮಿತಿಯಲ್ಲಿ ಮತ್ತು ಅಗತ್ಯವಿದ್ದಾಗ ಮಾತ್ರ ಬಳಸಿ.
ಯಾವುದೇ ಚಿಕಿತ್ಸೆಗೆ ಮೊದಲು ನೋಂದಾಯಿತ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.
ದೇಹದ ಪ್ರಕೃತಿ (ದೋಷಗಳು) ವಿಭಿನ್ನವಾಗಿರುವುದರಿಂದ ಔಷಧ ಪ್ರಮಾಣವೂ ಬದಲಾಗಬಹುದು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0