ಶಿರಸಿ ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಂತರಜಿಲ್ಲಾ ಕಳ್ಳಿಯ ಬಂಧನ; ₹9 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಆಪ್ತ ನ್ಯೂಸ್ ಶಿರಸಿ:
ಶಿರಸಿ ನಗರ ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತರಜಿಲ್ಲಾ ಕಳ್ಳಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿತೆಯಿಂದ ಒಟ್ಟು ₹9 ಲಕ್ಷ ಮೌಲ್ಯದ ಸುಮಾರು 70 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಬೆಂಗಳೂರು ರಾಜಾಜಿನಗರ ನಿವಾಸಿ ಸಂಜನಾ ವೆಂಕಟೇಶ್ ಪಸುಪಲೇಟ್ (32) ಎಂದು ಗುರುತಿಸಲಾಗಿದೆ. ಶಿರಸಿ ಬಸ್ ನಿಲ್ದಾಣದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ತನಿಖೆ ವೇಳೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹರೀಶಿ ಕಲಗೋಡ ನಿವಾಸಿ ಸವಿತಾ ಆನಂದ ನಾಯ್ಕ್ ಅವರು ಶಿರಸಿ ಬಸ್ ನಿಲ್ದಾಣದಲ್ಲಿದ್ದ ವೇಳೆ ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ, ಮೊಬೈಲ್ ಹಾಗೂ ನಗದು ಕಳುವಾಗಿತ್ತು. ಈ ಸಂಬಂಧ ಅವರು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಳ್ಳತನಕ್ಕೊಳಗಾದ ವಸ್ತುಗಳಲ್ಲಿ:
-
₹1 ಲಕ್ಷ ಮೌಲ್ಯದ ಚಿನ್ನದ ಸರ
-
ಒಂದು ಕಿವಿಯೋಲೆ
-
ಒಂದು ಕೀಪ್ಯಾಡ್ ಮೊಬೈಲ್
-
₹8,000 ನಗದು
ಸೇರಿ ಒಟ್ಟು ₹1,59,000 ಮೌಲ್ಯದ ಆಸ್ತಿ ಕಳುವಾಗಿತ್ತು.
ಹಳೆಯ ಕಳ್ಳತನಗಳಿಗೂ ಬಯಲು
ಪ್ರಕರಣದ ತನಿಖೆ ವೇಳೆ ಬಂಧಿತ ಆರೋಪಿತೆ ಈ ಹಿಂದೆ ಕೂಡ ಶಿರಸಿ ಬಸ್ ನಿಲ್ದಾಣದಲ್ಲಿ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ವಿಚಾರಣೆ ಬಳಿಕ ಒಟ್ಟು ₹9 ಲಕ್ಷ ಮೌಲ್ಯದ ಸುಮಾರು 70 ಗ್ರಾಂ ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತನಿಖೆ ಮುಂದುವರಿಕೆ
ಈ ಪ್ರಕರಣದ ಸಂಬಂಧ ಶಿರಸಿ ನಗರ ಠಾಣೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಆರೋಪಿತೆಯ ವಿರುದ್ಧ ಇತರ ಜಿಲ್ಲೆಗಳಲ್ಲೂ ಇದೇ ರೀತಿಯ ಕಳ್ಳತನ ಪ್ರಕರಣಗಳಿವೆಯೇ ಎಂಬ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0



