ಫೆ.೧೧ ರಂದು ಬೃಹತ್ ರ‍್ಯಾಲಿ ಮತ್ತು ಪಾದಯಾತ್ರೆ ಅಘನಾಶಿನಿ ನದಿ ಜೋಡಣೆ ಯೋಜನೆಗೆ ವ್ಯಾಪಕ ವಿರೋಧ: ಹಳ್ಳಿ, ಹಳ್ಳಿಗಳಲ್ಲಿ ಜನಜಾಗೃತ ಸಭೆಗೆ ನಿರ್ಣಯ
ಆಪ್ತ ನ್ಯೂಸ್ ಸಿದ್ದಾಪುರ :
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ನಿಯೋಜನೆಗೊಳ್ಳುವ ಏತ ನೀರಾವರಿ ಯೋಜನೆಗೆ ವ್ಯಾಪಕವಾಗಿ ಸಾರ್ವಜನಿಕವಾಗಿ ವಿರೋಧ ವ್ಯಕ್ತಪಡಿಸುವ ಮತ್ತು ತಾಲೂಕಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಜಾಗೃತ ಸಭೆ ಫೇಬ್ರವರಿ ೧ ರಿಂದ ಪ್ರಮುಖ ೧೨೩ ಗ್ರಾಮಗಳಲ್ಲಿ ಸಂಘಟಿಸಲು ಹಾಗೂ ಫೇಭ್ರವರಿ ೧೧ ರಂದು ಬೃಹತ್ ರ‍್ಯಾಲಿ ಮತ್ತು ಪಾದಯತ್ರೆ ಸಂಘಟಿಸಲು ನಿರ್ಣಯಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅಧ್ಯಕ್ಷತೆಯಲ್ಲಿ ಇಂದು ಸಿದ್ದಾಪುರ ತಾಲೂಕಿನ ರಾಘವೇಂದ್ರ ಮಠ ಸಭಾ ಮಂಟಪದಲ್ಲಿ ಜರುಗಿದ ಬೃಹತ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜನವಿರೋಧಿ ಸರ್ಕಾರದ ನೀತಿಗೆ ತಾಲೂಕಾದ್ಯಂತ ವ್ಯಾಪಕವಾದ ಸಂಘಟನೆ ಕಾರ್ಯ ಜರುಗಿಸುವುದು, ನದಿ ಜೋಡಣೆಯ ನೂನ್ಯತೆಯನ್ನು ಜನಸಾಮನ್ಯರಲ್ಲಿ ಬಿಂಬಿಸುವುದು, ಮುದ್ರಿತ ಸಾಮಗ್ರಿಗಳ ಮೂಲಕ ಮನೆ ಮನೆಗೆ ಮಾಹಿತಿ ನೀಡುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಯೋಜನೆ ಸ್ಥಗಿತಕ್ಕೆ ಒತ್ತಾಯಿಸುವುದು, ಬೃಹತ್ ವಿರೋಧ ರ‍್ಯಾಲಿ ಸಮಾವೇಶ ಮತ್ತು ಲಿಖಿತ ಆಕ್ಷೇಪಣೆ ಸಲ್ಲಿಸುವ ಕಾರ್ಯಕ್ರಮ ಸಂಘಟಿಸಲು ಜರುಗಿದ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ತೀರ್ಮಾನಗಳು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿರೋಧಕ್ಕೆ ಕಾರಣಗಳು:
ಅಘನಾಶಿನಿ ನದಿ ನೀರು ಎತ್ತುವಿಕೆ ಯೋಜನೆಯಲ್ಲಿ ಒಂದು ಲಕ್ಷದ ಇಪ್ಪತ್ತು ಸಾವಿರ ಗಿಡ ನಾಶಗೊಳ್ಳುವುದಲ್ಲದೇ ಸುಮಾರು ಆರು ನೂರು ಎಕರೆ ಅಘನಾಶಿನಿ ಕಣಿವೆಯ ಮೌಲ್ಯಯುತ ಜೀವ ವೈವಿಧ್ಯಕ್ಕೆ ಹಾನಿ ಉಂಟಾಗುವುದು, ಅಲ್ಲದೇ ಪಶ್ಚಿಮ ಘಟ್ಟ ಪ್ರದೇಶದ ಜನ ಜೀವನ, ಪ್ರಾಣಿ, ಪಕ್ಷಿಗಳ ಹಾಗೂ ಅತ್ಯಮೂಲ್ಯ ಗಿಡ ಸಸ್ಯಗಳ ಮೇಲೆ ಪರಿಣಾಮ ಬೀಳುವುದರಿಂದ ನೈಸರ್ಗಿಕ ಅಸಮತೋಲನಕ್ಕೆ ಯೋಜನೆಯು ಕಾರಣವಾಗುವುದೆಂಬ ಅಭಿಪ್ರಾಯವನ್ನು ಸಭೆಯಲ್ಲಿ ಪ್ರಮುಖರು ವ್ಯಕ್ತಪಡಿಸಿದರು.
ಯೋಜನೆಯ ವೆಚ್ಚ ೨೩ ಸಾವಿರ ಕೋಟಿ:
ಸುಮಾರು ಇಪ್ತೂö್ಮರು ಸಾವಿರ ಕೋಟಿ ವೆಚ್ಚದಲ್ಲಿ ಮೂವತ್ತೆöÊದು ಟಿ,ಎಂ,ಸಿ ನೀರನ್ನು ಅಘನಾಶಿನಿಯಿಂದ ವಾಣಿವಿಲಾಸ ಜಲಾಶಯಕ್ಕೆ ಸುಮಾರು ನೂರಾ ತೊಂಭತ್ನಾಲ್ಕು ಕಿಲೋಮೀಟರ್ ಪೈಪ್ ಲೈನ್ ಮೂಲಕ ಸಿದ್ದಾಪುರ ಮತ್ತು ಸಾಗರ ಮೂಲಕ ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ ಮುಂತಾದ ಜಿಲ್ಲೆಗಳಿಗೆ ಪೈಪ್ ಲೈನ್ ಕಾಲುವೆ ಮೂಲಕ ನೀರು ಒಯ್ಯುವ ಯೋಜನೆಯಿಂದ ಅಘನಾಶಿನಿಯ ಪರಿಸರದಲ್ಲಿ ನೀರಿನ ಸಂಕಟಕ್ಕೆ ಕಾರಣವಾಗುವುದಲ್ಲದೇ, ಸಮುದ್ರದಲ್ಲಿನ ಉಪ್ಪು ನೀರು ಕರಾವಳಿ ಭಾಗದ ಕೃಷಿ ಚಟುವಟಿಕೆ ಮತ್ತು ಸಾಗುವಳಿ ಕ್ಷೇತ್ರಕ್ಕೆ ಆತಂಕ ಉಂಟಾಗುವುದೆAಬ ಆತಂಕವು ಸಭೆಯಲ್ಲಿ ವ್ಯಕ್ತವಾದವು.
ವಿಶೇಷ ಸಭೆ:
ಅಘನಾಶಿನಿ ಏತ ನೀರಾವರಿ ಯೋಜನೆಯ ಚಿಂತನ ಸಭೆಯಲ್ಲಿ ಚಿಂತಕರು, ಪರಿಸರ ಜ್ಞಾನಿಗಳು, ವಿದ್ಯಾರ್ಥೀಗಳು, ವೃದ್ದರು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ವಿವಿಧ ಸಂಘಟನೆಯ ಪ್ರಮುಖರು ಹಾಜರಿದ್ದು, ಹೋರಾಟದ ಅಭಿಪ್ರಾಯ ವ್ಯಕ್ತಪಡಿಸಿರುವುದು ಸಭೆಯ ವಿಶೇಷವಾಗಿದ್ದು ಇರುತ್ತದೆ.
ಸಭೆಯನ್ನೂದ್ದೇಶಿಸಿ ಪ್ರಮುಖರಾದ ಮಂಜುನಾಥ ಆರ್ ಹೆಗಡೆ, ಎನ್ ಬಿ ನಾಯ್ಕ ಕಡಕೇರಿ ಪರಿಸರ ತಜ್ಞರು, ಶ್ಯಾಮಲ ಗೌಡ ಬಿದ್ರಖಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ, ಚಂದ್ರ ಶೇಖರ ಸೀತಾರಾಮ ಹೆಗಡೆ ಸೋವಿನಕೊಪ್ಪ, ಸುಬಾಷ ನಾಯ್ಕ ವಂದಾನೆ, ಶಿವಾನಂದ ನಾಯ್ಕ ಹೊಸುರು, ದಿವಾಕರ ಕ್ಯಾದಗಿ, ಹರಿ ನಾಯ್ಕ ಓಂಕಾರ , ನಾಗರಾಜ ಹಲಸಿನ ಮನೆ ಸೊವಿನಕೊಪ್ಪ ಸೀತಾರಾಮ ಗೌಡ ಹುಕ್ಕಳ್ಳಿ, ಧನಂಜಯ ಕೊಡಿಗದ್ದೆ , ಪರಿಸರ ಪ್ರೇಮಿ ವಾಸುದೇವ ಬಿಳಗಿ, ಆದರ್ಶï ಭಟ್ ಮತ್ತಿಗದ್ದೆ, ಬಿಂದು ಪ್ರಸನ್ನ ಹೆಗಡೆ ಸೊವಿನಕೊಪ್ಪ, ಸಂತೋಷ ನಾಯ್ಕ ಕ್ಯಾದಗಿ, ಕಾರ್ತಿಕ ಕೊರ್ಲಕೈ, ರಾಘು ನಾಯ್ಕ ಕ್ಯಾದಗಿ, ಗಣಪತಿ ನಾಯ್ಕ, ಬಿ ಎನ್ ನಾಯ್ಕ ಶಿರೂರು, ಯುವ ನಾಯಕ ಮಾಬ್ಲೇಶ್ವರ ಬೇಡ್ಕಣಿÀ, ಮಂಜುಳಾ ನಾಯ್ಕ ಬಿಳಗಿ, ಬಾಲಕೃಷ್ಣ ಹೆಗ್ಗೇರಿ ಮುಂತಾದವರು ಸಲಹೆ ಸೂಚನೆ, ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ಪ್ರಸ್ತಾವನೆ ಹೋರಾಟಗಾರರ ಜಿಲ್ಲಾ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಜರುಗಿಸಿದರು. ವಂದನಾರ್ಪಣೆ ಸೀತಾರಾಮ ಗೌಡ ಹುಕ್ಕಳ್ಳಿ ನಿರ್ವಹಿಸಿದರು.
ತಿರಸ್ಕಾರಕ್ಕೆ ನಿರ್ಣಯ:
ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ಅಘನಾಷಿನಿ ಏತ ನೀರಾವರಿ ಯೋಜನೆಯು ಪರಿಸರ ಮತ್ತು ಜನ ವಿರೋಧಿ ಯೋಜನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಲು ಸರ್ವಾನುಮತದಿಂದ ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ಅಧ್ಯಕ್ಷ ರವಿಂದ್ರ ನಾಯ್ಕ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆ.ಟಿ ನಾಯ್ಕ ಕ್ಯಾದಗಿ, ಬಿ.ಡಿ ನಾಯ್ಕ, ಗೋವಿಂದ ಗೌಡ ಕಿಲವಳ್ಳಿ, ಅಬ್ದುಲ್ ಸುಬಾನ್ ಸಾಬ, ದಿನೇಶ್ ನಾಯ್ಕ ಬೇಡ್ಕಣಿ, ಜಗದೀಶ್ ನಾಯ್ಕ ಶಿರಳಗಿ, ಹಾಜೀರಾ ಬೇಗಂ, ಜಯಾ ಬಿ ನಾಯ್ಕ, ಆರ್ ಟಿ ನಾಯ್ಕ , ರಾಮಚಂದ್ರ ತ್ಯಾಗಲಿ ಮನೆ, ಉಮೇಶ ಶೇಲೂರು, ಯೋಗೇಂದ್ರ ಬೇಡ್ಕಣಿ, ಶ್ರೀಪಾದ ನಾಯ್ಕ, ಮಂಜುನಾಥ ಮಡಿವಾಳ, ವಿನಾಯಕ ಹೆಗ್ಗೆರಿ, ಸಂಕೇತ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



