ಅಘನಾಶಿನಿ ನದಿಗೆ ಇಳಿದು ಹೋರಾಟಗಾರರ ಪ್ರತಿಜ್ಷೇ: ಪರಿಸರ ಮತ್ತು ಜನವಿರೋಧಿ ಯೋಜನೆ ತಡೆಯಲು ಸನ್ನಧ್ಧ - ರವೀಂದ್ರ ನಾಯ್ಕ

Jan 20, 2026 - 21:44
 0  51
ಅಘನಾಶಿನಿ ನದಿಗೆ ಇಳಿದು ಹೋರಾಟಗಾರರ ಪ್ರತಿಜ್ಷೇ: ಪರಿಸರ ಮತ್ತು ಜನವಿರೋಧಿ ಯೋಜನೆ ತಡೆಯಲು ಸನ್ನಧ್ಧ - ರವೀಂದ್ರ ನಾಯ್ಕ

ಆಪ್ತ ನ್ಯೂಸ್‌ ಸಿದ್ದಾಪುರ:

ಅವೈಜ್ಞಾನಿಕ ಜನ ಮತ್ತು ಪರಿಸರ ವಿರೋಧಿ ಅಘನಾಶಿನಿ ನದಿ ಜೋಡಣೆಯ ಯೋಜನೆಯನ್ನು ಸ್ಥಗಿತಗೊಳಿಸಬೆಕೆಂದು ಅಘನಾಶಿನಿ ಹೋರಾಟಗಾರರು ನದಿಗೆ ಇಳಿದು ಪ್ರತಿಜ್ಞೇ ಮಾಡುವದೊಂದಿಗೆ, ಯೋಜನೆ ಸಂಪೂರ್ಣ ಸ್ಥಗಿತಗೊಳಿಸಲು ಸನ್ನಧ್ದಗೊಂಡಿರುವುದಾಗಿ ಹೋರಾಟಗಾರ ರವೀಂದ್ರ ನಾಯ್ಕ ತಿಳಿಸಿದರು.
     ಅಘನಾಶಿನಿ ನದಿ ಆಣೆಕಟ್ಟು ಕಟ್ಟುವ ಸ್ಥಳವಾದ  ಬಾಳೆಕೊಪ್ಪ ಗ್ರಾಮದ ಗೆಜಕಟ್ಟ ಸ್ಥಳದಲ್ಲಿನ ಅಘನಾಶಿನಿ ನದಿಯಲ್ಲಿ  ನಿನ್ನೇ ಸಾಯಂಕಾಲ ಹೋರಾಟಗಾರರ ನಿಯೋಗವು ಸ್ಥಳ ಪರಿಶೀಲಿಸಿ, ನೀರಿಗಿಳಿದು ಹೋರಾಟಗಾರರು ಪ್ರತಿಜ್ಷೇ ಮಾಡಿದ ನಂತರ ಅವರು ಮೇಲಿನಂತೆ ಮಾತನಾಡುತ್ತಾ ಹೇಳಿದರು.
     ಈಗಾಗಲೇ ಅಘನಾಶಿನಿ ನದಿ ಜೋಡಣೆಗೆ ವ್ಯಾಪಕವಾದ ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಹಾಗೂ ಫೇಬ್ರವರಿ ೧ ರಿಂದ ವಿರೋಧ ಜಾಗೃತ ಕಾರ್ಯಕ್ರಮ ಹಮ್ಮೀಕೊಂಡಿರುವುದರಿAದ ಆಣೆಕಟ್ಟು ಕಟ್ಟುವ ಸ್ಥಳದಲ್ಲಿ ಹೋರಾಟಗಾರರು ಭೇಟಿ ಕೊಟ್ಟು ಹೋರಾಟದ ರೂಪು ರೇಷೆಯನ್ನು ನದಿಯ ದಡದಲ್ಲಿ ರಚಿಸಿದರು.
     ಚಳಿಗಾಲದ ನಂತರ ನೀರು ಹರಿಯುವ ಪ್ರಮಾಣ ಕ್ಷೀಣಿಸಿರುವುದು, ದಟ್ಟವಾಗಿರುವ ಅರಣ್ಯ ನಾಶವಾಗುವ ಗಿಡ ಮರಗಳನ್ನ ಪರಿಕ್ಷೀಸಿದಲ್ಲದೇ, ನದಿಯ ಅಕ್ಕಪಕ್ಕದ ಮಣ್ಣಿನ ಗುಣವನ್ನ ನಿಯೋಗವು ವಿಕ್ಷೀಸಿತು. ಯೋಜನೆಯಲ್ಲಿ ಪ್ರಸ್ತಾಪಿಸಿದಂತೆ ಕೇವಲ ೧.೨ ಲಕ್ಷ ಗಿಡ ನಾಶವಾಗುವುದೆಂದು ಉಲ್ಲೇಖಿಸುವುದು ಅವೈಜ್ಞಾನಿಕ. ಅಲ್ಲದೇ, ಪಶ್ಚಿಮ ಘಟ್ಟ ಅತೀ ಸೂಕ್ಷö್ಮ ಮತ್ತು ಅಭಿಯಾರಣ್ಯ ವ್ಯಾಪ್ತಿಯಲ್ಲಿ ನಿಯೋಜಿಸದ ಯೋಜನೆಯು ಅವೈಜ್ಞಾನಿಕವೆಂದು ನಿಯೋಗವು ತೀರ್ಮಾನಿಸಿತು. ಅಲ್ಲದೇ, ಸೂಕ್ಷö್ಮ ಮತ್ತು ವಿಶಿಷ್ಟವಾದ ವನ್ಯ ಪ್ರಾಣಿ ಮತ್ತು ಸಸ್ಯಗಳ ಸಂತತಿ ನಾಶಕ್ಕೆ ನದಿ ಜೋಡಣೆ ಯೋಜನೆಯು ಕಾರಣವಾಗುವುದು ಎಂದು ನಿಯೋಗವು ಅಭಿಪ್ರಾಯ ವ್ಯಕ್ತಪಡಿಸಿತ್ತು.
      ಅಘನಾಶಿನಿ ನದಿಯು ವಿಶಿಷ್ಟ ಹಾಗೂ ಶಾಸ್ತç ಮತ್ತು ಪುರಾವೆಯಲ್ಲಿ ಕಂಡು ಬರುತ್ತದೆ. ನದಿ ಜೋಡಣೆಯಿಂದ ನದಿಯ ಪಾವಿತ್ರತೆ ಮತ್ತು ಜನ ಸಾಮಾನ್ಯರ ಜೀವನಕ್ಕೆ ಆತಂಕವಾಗುದಲ್ಲದೇ, ಪರಿಸರ ನಾಶಕ್ಕೆ ಕಾರಣವಾಗುವುದರಿಂದ ಸರ್ವರೂ ಹೋರಾಟಕ್ಕೆ ಧುಮಕಬೇಕೆಂದು ಸುರೇಶ ಹೆಗಡೆ ಹಸಗೆ ಅವರು ಹೇಳಿದರು.
      ಹೋರಾಟಗಾರರಾದ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಹರಿ ನಾಯ್ಕ ಓಂಕಾರ, ಸೀತಾರಾಮ ಗೌಡ ಹುಕ್ಕಳ್ಳಿ, ನಾಗರಾಜ ಹಲಸಿನಮನೆ, ಅಭೀಪ್ರಾಯವನ್ನು ಮಂಡಿಸಿದರು.  
     ಜನಾಭಿಪ್ರಾಯ ಸಂಗ್ರಹಿಸದೇ ಪಶ್ಚಿಮದಿಂದ ಪೂರ್ವಕ್ಕೆ ಹರಿಯುವ ನೀರು ಅವೈಜ್ಞಾನಿಕ. ಪ್ರಭಲ ಹೋರಾಟಕ್ಕೆ ಸನ್ನಧ್ದ ರಾಗುವ ಎಂದು ಹೋರಾಟಗಾರ ನಾಗಪತಿ ಗೌಡ ಹುಕ್ಕಳ್ಳಿ ಅವರು ಹೇಳದರು.
   
      ಕೆ.ಟಿ ನಾಯ್ಕ , ಎಮ್ ಪಿ ಗೌಡ, ರಾಜೇಶ್ ಭಟ್ಟ ಮಕ್ಕಿಗದ್ದೆ, ರಫೀಕ ಗೌಡಳ್ಳಿ, ಅಶೋಕ ನಾಯ್ಕ ಇಟಗಿ, ರಮೇಶ್ ನಾಯ್ಕ, ಮಧುಕೇಶ್ವರ, ವಿನಯ ನಾಯ್ಕ, ಮಾಬ್ಲೇಶ್ವರ ಕೃಷ್ಣಪ್ಪ ನಾಯ್ಕ, ವಿನಯ ತಿಮ್ಮಪ್ಪ ನಾಯ್ಕ, ಮಾದೇವ ನಾಯ್ಕ, ಭದ್ರ ಗೌಡ, ವಿನೋದ ಗೌಡ ಹುಕ್ಕಳ್ಳಿ, ಮಂಜುನಾಥ ನಾಯ್ಕ ಹುತ್ಗಾರ, ಮಾಬ್ಲೇಶ್ವರ ಗೌಡ ಸುಳಗಾರ, ನಾರಾಯಣ ಗೌಡ, ಈಶ್ವರ ನಾಯ್ಕ,  ರಾಜು ನಾಯ್ಕ, ಶಿವಾನಂದ, ದಿವಾಕರ್ ಬಾಳೆಜಡ್ಡಿ, ಚರ್ಚೆಯಲ್ಲಿ ಮುಂತಾದವರು ಭಾಗವಹಿಸಿದರು.

ಫೇಬ್ರವರಿ ೨ ರಂದು ಗೋಳಿಮಕ್ಕಿಯಲ್ಲಿ ಬೃಹತ್ ಸಭೆ:

     ಅಘನಾಶಿನಿ ನದಿ ಜೋಡಣೆ ವಿರೋಧವಾಗಿ ಜಾಗೃತೆ ಮೂಡಿಸುವ ಉದ್ದೇಶದಿಂದ ಫೇಬ್ರವರಿ ೨ ಸೋಮವಾರದಂದು ಗೋಳಿಮಕ್ಕಿಯಲ್ಲಿ ಚಾಲನೆ ನೀಡಿ ಪ್ರಥಮ ಹಂತದ ಪಾದಯಾತ್ರೆಯನ್ನು ಗೋಳಿಮಕ್ಕಿಯಿಂದ ಆಣೆಕಟ್ಟು ಕಟ್ಟುವ ಗೆಜಕಟ್ಟಾಗೆ ಪಾದಯಾತ್ರೆ ಸಂಘಟಿಸಲು ಅಘನಾಶಿನಿ ನದಿಯ ದಡದಲ್ಲಿ ಜರುಗಿಸಿದ ಸಮಾಲೋಚನೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು  ಎಂದು ಹೋರಾಟಗಾರ ರವೀಂದ್ರ ನಾಯ್ಕ ಹೇಳಿದರು. 

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0