ಸಂಸ್ಕೃತ ವಿಶ್ವವಿದ್ಯಾಲಯದಿಂದ ಗಣೇಶ ಹೆಗಡೆಗೆ ಪಿಎಚ್.ಡಿ ಮತ್ತು ಚಿನ್ನದ ಪದಕ
ಆಪ್ತ ನ್ಯೂಸ್ ಶಿರಸಿ:
ತಾಲೂಕಿನ ಹಾರೆಹುಲೇಕಲ್ ಗ್ರಾಮದ ಅಮಚಿಮನೆ ಮೂಲದ ಸಂಸ್ಕೃತ ವಿದ್ವಾಂಸ ಗಣೇಶ ಹೆಗಡೆ ಅವರು ಗುಜರಾತಿನ ಶ್ರೀ ಸೋಮನಾಥ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪ್ರತಿಷ್ಠಿತ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ.
ಗಣೇಶ ಹೆಗಡೆ ಅವರು "ನಾರಾಯಣತೀರ್ಥವಿರಚಿತ ಅದ್ವೈತರತ್ನಕರ ಗ್ರಂಥಸಂಪಾದನೆ ಮತ್ತು ಸಮೀಕ್ಷಾತ್ಮಕ ಅಧ್ಯಯನ" ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಈ ಡಾಕ್ಟರೇಟ್ ಪದವಿ ಲಭಿಸಿದೆ. ಗುಜರಾತ್ ನಲ್ಲಿ ನಡೆದ ವಿವಿಯ 18ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಆಚಾರ್ಯ ದೇವವ್ರತ ಅವರು ಪದವಿ ಪ್ರದಾನ ಮಾಡಿದರು.
ವಿಶೇಷವೆಂದರೆ, ಗಣೇಶ ಹೆಗಡೆ ಅವರ ಈ ಸಂಶೋಧನಾ ಕೃತಿಯು ಸಾಲಿನ ಅತ್ಯುತ್ತಮ ಪ್ರಬಂಧವಾಗಿ ಹೊರಹೊಮ್ಮಿದ್ದು, ಪ್ರತಿಷ್ಠಿತ "ಶೋಧವಿಭೂಷಣಮ್" ಪ್ರಶಸ್ತಿ ಹಾಗೂ ಸ್ವರ್ಗೀಯ ಮಣಿಶಂಕರ ಜೀವನರಾಮ ಪಾಂಡ್ಯಾ ಪ್ರಶಸ್ತಿಗಳಿಗೂ ಭಾಜನವಾಗಿದೆ.
ಲಲಿತಾ ಮತ್ತು ರಮೇಶ ಹೆಗಡೆ ದಂಪತಿಯ ಪುತ್ರರಾಗಿರುವ ಇವರು, ಪ್ರಸ್ತುತ ದೆಹಲಿಯಲ್ಲಿ ನೆಲೆಸಿದ್ದು ಸಂಸ್ಕೃತ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತಾ ವಾಚಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



