ದಾಂಡೇಲಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮಿಂಚು: ಮಕ್ಕಳೊಂದಿಗೆ ಹಾಡಿ-ಕುಣಿದು ಸಂಭ್ರಮ!

Jun 16, 2026 - 22:02
 0  96
ದಾಂಡೇಲಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮಿಂಚು: ಮಕ್ಕಳೊಂದಿಗೆ ಹಾಡಿ-ಕುಣಿದು ಸಂಭ್ರಮ!

ಆಪ್ತ ನ್ಯೂಸ್ ದಾಂಡೇಲಿ:

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ,‌ ಗೋಲ್ಡನ್‌ ಸ್ಟಾರ್ ಗಣೇಶ್ ಅವರು ದಾಂಡೇಲಿಗೆ ಆಗಮಿಸಿ ವನ್ಯಜೀವಿ ಸಂರಕ್ಷಣಾ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಅಭಿಮಾನಿಗಳ ಮನಗೆದ್ದರು. ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಬೆರೆತು ಹಾಡಿ-ಕುಣಿದು ಸಂಭ್ರಮಿಸಿದ ಗಣೇಶ್, ಎಲ್ಲರ ಗಮನ ಸೆಳೆದರು.

'ಮುಂಗಾರು ಮಳೆ' ನಾಯಕ ನಟ, ತಮ್ಮ ಜನಪ್ರಿಯ "ಜೇನ ದನಿಯೋಳೆ..." ಹಾಡಿಗೆ ಮಕ್ಕಳೊಂದಿಗೆ ಹೆಜ್ಜೆ ಹಾಕಿ ಕಾರ್ಯಕ್ರಮದ ರಂಗು ಹೆಚ್ಚಿಸಿದರು. ಅವರ ಸರಳತೆ ಹಾಗೂ ಆತ್ಮೀಯ ನಡೆಗೆ ಮಕ್ಕಳು ಮತ್ತು ಸಾರ್ವಜನಿಕರು ಫಿದಾ ಆದರು.

ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ವನ ಪರಿಪಾಲಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಈ ವೇಳೆ ಗಣೇಶ್ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಸಂದೇಶ ನೀಡಿದರು.

ಕಾರ್ಯಕ್ರಮದ ವಿಶೇಷತೆ ಎಂದರೆ, ಗಣೇಶ್ ಯಾವುದೇ ತಾರಾ ಹಂಗಿಲ್ಲದೆ ಮಕ್ಕಳೊಂದಿಗೆ ಬೆರೆತು, ಅವರೊಂದಿಗೆ ಮಾತುಕತೆ ನಡೆಸಿ, ಹಾಡು-ನೃತ್ಯದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದು. ಇದರಿಂದ ಕಾರ್ಯಕ್ರಮದಲ್ಲಿ ಹಾಜರಿದ್ದವರಲ್ಲಿ ಹೊಸ ಉತ್ಸಾಹ ಮೂಡಿತು.

ದಾಂಡೇಲಿಯಲ್ಲಿ ನಡೆದ ಈ ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಉಪಸ್ಥಿತಿ ಮತ್ತಷ್ಟು ಮೆರುಗು ತಂದಿದ್ದು, ಪರಿಸರ ಸಂರಕ್ಷಣೆಯ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0