ಮಗನನ್ನು ಕಳೆದುಕೊಂಡ ಪುಟ್ಟಪ್ಪ ನಾಯ್ಕ ಕುಟುಂಬಕ್ಕೆ ೨೫ ಲಕ್ಷ ನೀಡಲು ಆಗ್ರಹ, 24/7 ಎಮರ್ಜೆನ್ಸಿ ಕೇರ್ ಪ್ರಾರಂಭಿಸಿ: ಅನಂತಮೂರ್ತಿ
ಆಪ್ತ ನ್ಯೂಸ್ ಶಿರಸಿ
ಮಿಥುನ್ ಎನ್ನುವ ಬಾಲಕನು ವೈದ್ಯರ ನಿರ್ಲಕ್ಷದಿಂದ ಸಾವನಪ್ಪಿದಕ್ಕೆ ಸರಕಾರಿ ಅಸ್ಪತ್ರೆ ಎಲ್ಲಾ ಸಿಬ್ಬಂದಿಗಳು ಸೇರಿ ಅಥವಾ ಸರಕಾರದಿಂದ ೨೫ ಲಕ್ಷವನ್ನು ನೀಡಬೇಕು ಎಂದು ಬನವಾಸಿ ಬಿಜೆಪಿ ಮಂಡಲದ ಅಧ್ಯಕ್ಷರಾದ ರಮೇಶ ನಾಯ್ಕ ಕುಪ್ಪಳ್ಳಿ ಅವರು ಹೇಳಿದರು.
ಅವರು ಬನವಾಸಿಯ ಸಹಸ್ರಳ್ಳಿಯ ಮಿಥುನ್ ಪುಟ್ಟಪ್ಪ ನಾಯ್ಕ ಎನ್ನುವ ಬಾಲಕನಿಗೆ ಹಾವು ಕಚ್ಚಿದ ವೇಳೆ ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ವೈದ್ಯರ ನಿರ್ಲಕ್ಷದಿಂದ ಸಾವನಪ್ಪಿದ್ದು, ಮೃತ ಬಾಲಕ ಸಾವಿಗೆ ನ್ಯಾಯಕ್ಕಾಗಿ ಬಿಜೆಪಿ ಬನವಾಸಿ ಮಂಡಲ ಹಾಗೂ ಬಿಜೆಪಿ ರೈತ ಮೋರ್ಚಾ ಉತ್ತರಕನ್ನಡದ ವತಿಯಿಂದ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆಯ ಉದ್ದೇಶಿಸಿ ಅವರು ಮಾತನಾಡಿದರು. ಕಳೆದ ೩ ವರ್ಷದಿಂದ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರಕಾರ ಅವೈಜ್ಞಾನಿಕವಾಗಿ ಗ್ಯಾರಂಟಿ ತರುವ ಮೂಲಕ ಉಳಿದ ಎಲ್ಲಾ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಆದರೆ ಅಲ್ಲಿನ ಸ್ಥಳಿಯ ಶಾಸಕರಾದ ಶಿವರಾಮ ಹೆಬ್ಬಾರ ಅವರು ಆಸ್ಪತ್ರೆಯ ಖರ್ಚು ನೀಡಿದರೆ ಆ ಮಗು ವಾಪಾಸ್ಸ್ ಹುಟ್ಟಿ ಬರುತ್ತದೆಯಾ ? ಈ ವ್ಯವಸ್ಥೆ ಸರಿ ಇದ್ದರೆ ಆ ಮಗುವು ಬದುಕುಳಿಯುತ್ತಿತ್ತಲ್ಲಾ, ರಾಜ್ಯ ಸರಕಾರ ಕೆವಲ ಹಣ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದೆ ಆರೋಪಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಅನಂತಮೂರ್ತಿ ಮಾತನಾಡಿ ಶಾಸಕರಾದ ಭೀಮಣ್ಣ ನಾಯ್ಕ ಅವರು ತಮ್ಮ ವ್ಯಾಪ್ತಿಯ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ಕಾರಣ ಮಿಥುನ್ ನಾಯ್ಕ ಎನ್ನುವ ಬಾಲಕನ ಸಾವು ಆದರೂ ಕೂಡಾ ಕನಿಷ್ಠ ಪಕ್ಷ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳುವ ಕೆಲಸ ಮಾಡಿಲ್ಲ, ಆಸ್ಪತ್ರೆಯಲ್ಲಿ ಈ ಘಟನೆಯ ಬಗ್ಗೆ ವಿಚಾರಿಸಿಲ್ಲ, ರಕ್ಷಾ ಸಭೆಯಲ್ಲಿಯೂ ಕೂಡಾ ಚಕಾರವೆತ್ತಿಲ್ಲ, ಜನರ ಸಾವಾದರೂ ಕೂಡಾ ತಾವು ಸ್ಪಂದಿಸುತ್ತಿಲ್ಲ ಅಂದರೆ ತಾವೆನು ದೇವರಾಗಿದ್ದಿರಾ? ಹಿಂದಿನ ಬಿಜೆಪಿ ಸರಕಾರದಲ್ಲಿ ಮೇಲ್ದರ್ಜೆಗೆ ಏರಿದ್ದ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ಮುಗಿದು ಒಂದು ವರ್ಷವಾಗಿದೆ ಯಂತ್ರೋಪಕರಣಗಳ ಖರೀದಿಗೆ ತಕ್ಷಣ ಟೆಂಡರ್ ಕರೆಯಬೇಕು, ೧೯೭ ವೈದ್ಯರು ಹಾಗೂ ಸಿಬ್ಬಂದಿಗಳ ನೇಮಕವಾಗಬೇಕು ಇದೆ ,ತಾವು ಯಾವುದಕ್ಕೂ ಸ್ಪಂದಿಸುವುದಿಲ್ಲ ಎನ್ನುವ ದುರಹಂಕಾರ ಧೋರಣೆ ಮುಂದುವರೆಸಿದರೆ ಹಳ್ಳಿ ಹಳ್ಳಿ ಕಡೆ ಪ್ರವಾಸ ಮಾಡಿ ಪ್ರತಿಭಟನೆ ನಡೆಸಿ ತಮಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಚಾಲೆಂಜ್ ಮಾಡುತ್ತೇನೆ. ಬಾಲಕನ ಸಾವಿಗೆ ಇಲ್ಲಿನ ವೈದ್ಯರು ಹಾಗೂ ಅವ್ಯವಸ್ಥೆ ಕಾರಣವಾಗಿದೆ. ಯಾವುದೇ ಜೀವಕ್ಕೆ ತುರ್ತು ಸಂದರ್ಭದಲ್ಲಿ ಗೋಲ್ಡನ್ ಹವರ್ ಅಂತ ಇರುತ್ತದೆ, ಡ್ರೀಪ್ಸ್ ಹಾಕಿದ ಮೇಲೆ ಬಾಲಕ ಸಾವನಪ್ಪಿದ್ದಾನೆ ಎಂದು ಹೇಳಲು ವೈದ್ಯರಿಗೆ ದೈರ್ಯವಿಲ್ಲದೇ ಕಾರವಾರಕ್ಕೆ ಕರೆದುಕೊಂಡು ಹೋಗಿ ಅಂತ ವೈದ್ಯರು ಯಾಕೆ ಹೇಳಿದ್ರು ? ಕಳೆದು ಹೋದ ಪ್ರಾಣ ಮತ್ತೆ ಬರುತ್ತದೆಯಾ ? ಬಡವರು ಹಾವು ಕಚ್ಚಿದಾಗ ಹಾಗೂ ತುರ್ತು ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಗೆ ಹೋಗುವುದೇ ಅಪಾಯವಾಗಿದೆ. ಇನ್ನು ಮುಂದೆ ಯಾರು ಕೂಡಾ ಹಾವು ಕಚ್ಚಿದಾಗ ಯಾರು ಸಾಯಬಾರದು ಎನ್ನುವುದು ನಮ್ಮ ಕಳಕಳಿಯಾಗಿದ್ದು ಕೂಡಲೇ ಮೃತನ ಕುಟುಂಬಕ್ಕೆ ೨೫ ಲಕ್ಷ ರೂಪಾಯಿ ಪರಿಹಾರ ನೀಡಬೇಕು ಆಗ್ರಹಿಸಿದರು.
ಸಿದ್ದಾಪುರ ಬಿಜೆಪಿ ಮಂಡಲಾಧ್ಯಕ್ಷರಾದ ತಿಮ್ಮಪ್ಪ ಎಂ.ಕೆ ಮಾತನಾಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಲಸಿಕೆ ಇತ್ತಾ ಅಥವಾ ಇಲ್ಲವಾ ? ಒಂದು ವೇಳೆ ಇಲ್ಲಾ ಅಂದಿದ್ರೆ, ಬೇರೆ ಖಾಸಗಿ ಆಸ್ಪತ್ರೆಗೆ ಅವರನ್ನು ಕಳುಹಿಸಬಹುದಾಗಿತ್ತು. ವೈದ್ಯರು ಕಾರವಾರಕ್ಕೆ ಯಾಕೆ ತೆಗೆದುಕೊಂಡು ಹೋಗಿ ಅಂತ ಹೇಳಿದ್ರಿ, ಅವರು ಬಹಳ ಬಡವರಾಗಿದ್ದರಿಂದ ಸರಕಾರಿ ಆಸ್ಪತ್ರೆಗೆ ಅವರು ಹೋಗಿದ್ದಾರೆ, ಅವರು ಸ್ಥಿತಿವಂತರಾಗಿದ್ದರೆ ಅವರು ಖಾಸಗಿ ಆಸ್ಪತ್ರೆ ಹೋಗಿ ಮಗನನ್ನು ಉಳಿಸಿಕೊಳ್ಳುತ್ತಿದ್ದರು, ಇನ್ನು ಮುಂದೆ ಇಂತಹ ಘಟನೆ ನಡೆಯಬಾರದು ಎಂದು ಹೇಳಿದರು.
ಸತ್ಯವತಿ ನಾಯ್ಕ ಮಾತನಾಡಿ ಸರಕಾರಿ ಅಸ್ಪತ್ರೆಗೆ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆಂದು ಹೋದಾಗ ವೈದ್ಯರು ಮೊಬೈಲ್ ನೋಡುತ್ತಾ ನಿರ್ಲಕ್ಷವನ್ನು ತೊರುತ್ತಿದ್ದಾರೆ ಇದು ಅಲ್ಲದೇ, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಬರುವಂತೆ ಹೇಳುತ್ತಾರೆ, ಖಾಸಗಿ ಆಸ್ಪತ್ರೆ ತೆರಬೇಕು ಎನ್ನುವ ಇಚ್ಚೆ ಇರುವಂತರು ದಯಾ ಮಾಡಿ ಇಲ್ಲಿಂದ ಬಿಟ್ಟು ಹೋಗಿ, ಇಲ್ಲಿ ಬರುವ ಬಡವರಿಗೆ ಅನ್ಯಾಯ ಮಾಡಬೇಡಿ ಎಂದು ಹೇಳಿದರು.
ದಿ. ಮಿಥುನ್ ನಾಯ್ಕ ಅವರ ತಂದೆ ಪುಟ್ಟಪ್ಪ ನಾಯ್ಕ ಮಾತನಾಡಿ ರಾತ್ರಿಯ ವೇಳೆ ಮಗ, ಹಾಗೂ ಮಗಳಿಗೆ ಏಕಾಏಕಿ ವಾಂತಿ ಜಾಸ್ತಿ ಆಯಿತು. ಕೆಲ ಸಮಯದ ನಂತರ ಮನೆಯ ಪಕ್ಕದಲ್ಲಿ ಹಾವು ಹರಿದುಹೋಗುತ್ತಿರುವುದನ್ನು ಗಮನಿಸಿದೆ. ವಾಂತಿ ಕಡಿಮೆ ಆಗದೆ ಇದ್ದಾಗ ಬೆಳಿಗ್ಗೆ ಜಾವ ೪:೪೫ ರ ಸುಮಾರಿಗೆ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಾಗ ಅರ್ಧಗಂಟೆಗಳ ಕಾಲ ತಡವಾಗಿ ಬಂದ ವೈದ್ಯರು,ಮಗನಿಗೆ ಹಾವು ಕಚ್ಚಿರಬಹುದು ಎಂದು ಹೇಳಿದರೂ ಕೂಡಾ ನಿರ್ಲಕ್ಷವನ್ನು ವಹಿಸಿ, ಡ್ರೀಪ್ಸ್ ಹಾಕಿರುತ್ತಾರೆ. ಹಾವು ಕಚ್ಚಿದಾಗ ಡ್ರೀಪ್ಸ್ ಹಾಕಿದಾಗ ಹಾವಿನ ವಿಷ ದೇಹಕ್ಕೆ ಬೇಗ ಸೇರಿ ಸಾವು ಸಂಭವಿಸಿದೆ ತಮ್ಮ ಅಳಲನ್ನು ತೋಡಿಕೊಂಡರು.
ಬನವಾಸಿ ಮುಖಂಡರಾದ ಯುವರಾಜ ಗೌಡ ಮಾತನಾಡಿ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಖಂಡಿಸಿದರು. ಯಾರನ್ನು ಪರಿಕ್ಷೀಸದೇ ಹುಬ್ಬಳ್ಳಿಗೆ ಕಳುಹಿಸುತ್ತಾರೆ ಎಂದರು,
ಎಸ್,ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ನಂದನ್ ಬೋರ್ಕರ್ ಮಾತನಾಡಿ, ಕಾಂಗ್ರೆಸ್ ಸರಕಾರದಲ್ಲಿ ಅಂಬ್ಯುಲೇಸ್ಸ್ ತಳ್ಳಿ ಚಾಲು ಮಾಡಬೇಕು ಎಂದರೆ ಎಂತ ಅವ್ಯವಸ್ಥೆ ಇದು, ಎಲ್ಲಾ ಆಸ್ಪತ್ರೆಗಳಲ್ಲಿ ಕೂಡಾ ಅವ್ಯವಸ್ಥೆಯಿಂದ ಕೂಡಿದೆ ತಕ್ಷಣ ಸರಿಪಡಿಸಬೇಕು ಎಂದರು.
ಈ ಸಂಧರ್ಭದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಅಧ್ಯಕ್ಷರಾದ ಪ್ರೇಮಕುಮಾರ ನಾಯ್ಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಎಲ್.ಟಿ.ಪಾಟೀಲ್, ಬನವಾಸಿ ಮಂಡಲದ ಉಪಾಧ್ಯಕ್ಷರಾದ ರಾಘವೇಂದ್ರ ನಾಯ್ಕ, ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಗೌಡ, ಮಂಜುನಾಥ ನಾಯ್ಕ, ಗಣಪತಿ ಹೆಗಡೆ ಕಬ್ಬಿನಮನೆ, ರಾಘವೇಂದ್ರ ದೇವಾಡಿಗ, ರೈತಮೋರ್ಚಾ ಉಪಾಧ್ಯಕ್ಷರಾದ ಸುರೇಶ ನಾಯ್ಕ ಕಾನಗೋಡ, ನಾರಾಯಣ ಹೆಗಡೆ ಮತ್ತಿಗಟ್ಟ, ರವಿ ಗಾಂವಕರ, ಲಕ್ಷಿö್ಮ ಕಾನಡೆ, ಮಣಿ ಪಾಟೀಲ್, ನಾರಾಯಣ ಗೌಡ, ವಸಂತ ಗೌಡ, ಮಹೇಂದ್ರ ಭಟ್ ಬಿಸಲಕೊಪ್ಪ, ಬನವಾಸಿ, ಶಿರಸಿ, ಸಿದ್ದಾಪುರದ ಹಲವಾರು ಬಿಜೆಪಿ ಕಾರ್ಯಕರ್ತರ ಇದ್ದರು, ವಿ.ಎಮ್ ಹೆಗಡೆ ಸ್ವಾಗತಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



