ಮನೆಯೊಳಗೆ ನಾಗರಹಾವು ಪ್ರತ್ಯಕ್ಷ; ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಡುಗಡೆ
ಆಪ್ತ ನ್ಯೂಸ್ ಮುಂಡಗೋಡ:
ತಾಲೂಕಿನ ಕಾತೂರ ವಲಯದ ರಾಮಾಪುರ ಶಾಖೆಯ ಸಿಂಗನಳ್ಳಿ ಗ್ರಾಮದಲ್ಲಿ ಮನೆಯೊಂದರ ಒಳಗೆ ನಾಗರಹಾವು ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸಿಂಗನಳ್ಳಿ ಗ್ರಾಮದ ರಾಮು ಗಣೇಶಗೌಡ ಪಾಟೀಲ್ ಅವರ ಮನೆಯೊಳಗೆ ನಾಗರಹಾವು ಸೇರಿಕೊಂಡಿರುವುದನ್ನು ಗಮನಿಸಿದ ಸಂತೋಷ ಸಿಂಗನಳ್ಳಿ ಅವರು ತಕ್ಷಣ ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.
ಮಾಹಿತಿ ದೊರೆತ ಕೂಡಲೇ ಪಾಳಾ ಉಪವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಸ್ಥಳಕ್ಕೆ ಆಗಮಿಸಿ, ಅಪಾಯಕಾರಿಯಾಗಿ ಮನೆಯೊಳಗೆ ಸೇರಿಕೊಂಡಿದ್ದ ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿದರು. ಬಳಿಕ ಹಾವನ್ನು ಯಾವುದೇ ರೀತಿಯ ಹಾನಿಯಾಗದಂತೆ ಸಮೀಪದ ಕಾಡು ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲಾಯಿತು.
ಅರಣ್ಯಾಧಿಕಾರಿಗಳ ಸಮಯೋಚಿತ ಕಾರ್ಯಾಚರಣೆಯಿಂದ ಮನೆಯವರು ಹಾಗೂ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ನಾಗರಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಡುವ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಾಚರಣೆಯಲ್ಲಿ ಗಸ್ತು ವನಪಾಲಕರಾದ ಎಚ್.ಡಿ. ದುಳಮ್ಮನವರ ಹಾಗೂ ವೀರೇಶ್ ಚಂದ್ರಾಪಟ್ಟಣ ಸೇರಿದಂತೆ ಗ್ರಾಮಸ್ಥರಾದ ಸಂತೋಷ ಸಿಂಗನಳ್ಳಿ, ಪರಶು ಅಲಳ್ಳಿ, ರಾಮು ಗಣೇಶ ಪಾಟೀಲ್, ರಾಜು ಶೇಟ್, ಶಂಭು ಪಾಟೀಲ್, ಶಿವಾಜಿ ಪಾಟೀಲ್, ವಿಠ್ಠಲ್ ಆಳಳಿ, ಮಾನತೇಶ್ ಪಾಟೀಲ್ ಹಾಗೂ ನಾಗರಾಜ ಖಂಡಪ ಪಾಟೀಲ್ ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0