ಬೇಡ್ತಿ ವಿರೋಧಿ ಚಳವಳಿಗೆ ಸುಂದರಲಾಲ್ ಬಹುಗುಣ ಬೆಂಬಲ ನೀಡಿದ್ದ ವಿಷಯ ನಿಮಗೆ ಗೊತ್ತೆ?
(ಈ ಲೇಖನವು 1980ರಲ್ಲಿ ಉತ್ತರ ಕನ್ನಡದ ಶಿರಸಿಯಲ್ಲಿ ನಡೆದ ಬೇಡ್ತಿ ನದಿ ಯೋಜನೆಯ ವಿರುದ್ಧದ ಹೋರಾಟಕ್ಕೆ ಪ್ರಸಿದ್ಧ ಪರಿಸರ ಹೋರಾಟಗಾರ ಸುಂದರಲಾಲ್ ಬಹುಗುಣ ಅವರು ನೀಡಿದ ಬೆಂಬಲ ಮತ್ತು ಅವರು ರೋಟರಿ ಕ್ಲಬ್‌ನಲ್ಲಿ ನೀಡಿದ ಉಪನ್ಯಾಸದ ಕುರಿತಾಗಿದೆ. ಅಂದು ಸುಂದರ್‌ಲಾಲ್ ಬಹುಗುಣ ಏನು ಮಾತಾಡಿದ್ದರು ಎನ್ನುವುದು ಇಲ್ಲಿದೆ ನೋಡಿ. ಉದಯವಾಣಿ ಪತ್ರಿಕೆಯಲ್ಲಿ ಬಂದ ವರದಿಯ ವಿವರ ಇಲ್ಲಿದೆ ನೋಡಿ)
ಇದು ಶಿರಸಿ (Sirsi) ಯಲ್ಲಿ ನಡೆದ ಬೇಡ್ತಿ ಯೋಜನೆಯ ವಿರೋಧಿ ಚಳವಳಿಯ ಕುರಿತಾದ ವರದಿ.
ದಿನಾಂಕ: 1/7/1980
ಪತ್ರಿಕೆ: ಉದಯವಾಣಿ
*******
"ಅರಣ್ಯ ಸಮೃದ್ಧವಾದ ನಮ್ಮ ದೇಶದಲ್ಲಿ ಸ್ವಾತಂತ್ರ್ಯಾನಂತರ ಅರಣ್ಯ ನಾಶ ಅವ್ಯಾಹತವಾಗಿ ಸಾಗುತ್ತಿದೆ. ಸ್ವಾತಂತ್ರ್ಯಾನಂತರ ಐವತ್ತು ಲಕ್ಷ ಎಕರೆ ಅರಣ್ಯ ನಾಶವಾಗಿದೆ. ಸ್ವಾತಂತ್ರ್ಯ ಪೂರ್ವ ಶೇಕಡ 33ರಷ್ಟು ಇದ್ದ ಅರಣ್ಯ ಈಗ ಶೇಕಡ 22ರ ಪ್ರಮಾಣಕ್ಕೆ ಇಳಿದಿದೆ. ಇದು ಹೀಗೆಯೇ ಸಾಗಿದಲ್ಲಿ ಹಲವು ಅಪರಿಹಾರ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅರಣ್ಯ ನಾಶ ಅನಾವೃಷ್ಟಿ ಉಂಟು ಮಾಡುತ್ತದೆ, ಭೂಸಾರ ಕುಸಿಯುತ್ತದೆ, ನಿಸರ್ಗ ನಾಶ ಮಾನವ ಕುಲದ ದುರಂತಕ್ಕೆ ಕಾರಣವಾಗುತ್ತದೆ. ಸಮಾಜ ಸ್ವಾಸ್ಥ್ಯಕ್ಕೆ ನಿಸರ್ಗದೊಂದಿಗೆ ಸ್ನೇಹ ಅತ್ಯಂತ ಅಗತ್ಯ."
ಈ ಬಗೆಯ ಸ್ಪಷ್ಟ ಅಭಿಪ್ರಾಯ ಮೂಡಿಸಿದವರು "ಚಿಪ್ಕೋ" ಚಳುವಳಿಯ ಸಂಘಟಕರಲ್ಲೊಬ್ಬರೂ, ಸರ್ವೋದಯ ನಾಯಕರಲ್ಲೊಬ್ಬರೂ ಆದ ಸುಂದರಲಾಲ್‌ಜೀ ಬಹುಗುಣ.
ಬೇಡ್ತಿ ಜಲವಿದ್ಯುತ್ ಯೋಜನೆಯನ್ನು ವಿರೋಧಿಸುವ ಚಳುವಳಿ ಕುರಿತ ವರದಿಯೊಂದನ್ನು ಪತ್ರಿಕೆಯಲ್ಲಿ ಓದಿದ ಬಹುಗುಣ ಸ್ವಯಂಪ್ರೇರಿತರಾಗಿ ಇಲ್ಲಿಗೆ ಬಂದರು. ಬೇಡ್ತಿ ವಿದ್ಯುತ್ ಯೋಜನೆಯ ವಿರೋಧಿ ಸಮಿತಿಯ ಸಂಘಟಕರೊಡನೆ ಇಲ್ಲಿಯ ಹಲವು ಪ್ರದೇಶಗಳನ್ನು ಸುತ್ತಿದರು. ಪರಿಸರವನ್ನು ವೀಕ್ಷಿಸಿ, ಸಮಸ್ಯೆಯನ್ನು ಅರ್ಥಮಾಡಿಕೊಂಡರು. ಮುಳುಗಡೆ ವಿರೋಧಿ ಸಮಿತಿಯ ಹಾಗೂ ರೋಟರಿ ಸಭೆಗಳಲ್ಲಿ ಮಾತನಾಡಿದರು. ಸಮಸ್ಯೆ ಹೊಳೆಯ ಅಥವಾ ವರ್ಗವೊಂದಕ್ಕೆ ಸೀಮಿತವಾದುದಲ್ಲ. ಇಡೀ ರಾಜ್ಯದ ಪ್ರಾಣವಾಯುವಿನ ಸಮಸ್ಯೆ ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡಲು ಯತ್ನಿಸಿದರು. ಬೇಡ್ತಿ ವಿರೋಧಿ ಸಮಿತಿ ಸಂಘಟಿಸಿದ್ದ ಸಭೆಯ ಅಧ್ಯಕ್ಷತೆಯನ್ನು ಶಾಸಕಿ ಅನಸೂಯಾ ಶರ್ಮಾ, ಕಪ್ಪಾಳೆ, ವಹಿಸಿದ್ದರು. ಶ್ರೀಗಳಾದ ಜೆ.ಆರ್. ಭಟ್ ಚೌಡ, ಜಿ. ಎನ್. ಹೆಗಡೆ ದೊಂಡ್ನನೆ, 'ಟಿ.ಸು' ಭರತನಹಳ್ಳಿ, ಜಿ. ಎಸ್. ಹೆಗಡೆ ಅಜ್ಜಿಬಳ, ಗಣಪತಿ ಹೆಗಡೆ ಕಡೇಕೋಡಿ, ವಿ.ಪಿ. ಪರಾಂಜಪೆ, ಆರ್. ಎನ್. ಹೆಗಡೆ ದೊಡ್ನಾಲ ಇನ್ನೂರು ಸಭೆಯಲ್ಲಿ ಭಾಗವಹಿಸಿದ್ದರು.
ರೋಟರಿ ಕ್ಲಬ್‌ನಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಶ್ರೀ ಡಿ.ಸಿ. ಭಟ್‌ರವರು, ಪತ್ರಕರ್ತ ಶ್ರೀ ಅಜ್ಜಿಬಳರಿಂದ ಅತಿಥಿಗಳ ಪರಿಚಯ. ಶ್ರೀ ಎ.ಕೆ. ಶಾಸ್ತ್ರಿಗಳಿಂದ ಅಭಿವಂದನೆ.
(ಈ ಮಾಹಿತಿಯನ್ನು ಕಿರಣ್ ಭಟ್ ಅವರು ಆಪ್ತ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಅವರಿಗೆ ಧನ್ಯವಾದಗಳು)
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



