ಯಕ್ಷಗಾನ-ತಾಳಮದ್ದಲೆ ಕಲಾವಿದ ವಿ. ಗಣಪತಿ ಭಟ್‌ ಸಂಕದಗುಂಡಿಗೆ ಡಾಕ್ಟರೇಟ್ ಪದವಿ

Jul 24, 2026 - 19:30
 0  121
ಯಕ್ಷಗಾನ-ತಾಳಮದ್ದಲೆ ಕಲಾವಿದ ವಿ. ಗಣಪತಿ ಭಟ್‌ ಸಂಕದಗುಂಡಿಗೆ ಡಾಕ್ಟರೇಟ್ ಪದವಿ

ಆಪ್ತ ನ್ಯೂಸ್ ಶಿರಸಿ:

ಯಕ್ಷಗಾನ ತಾಳಮದ್ದಲೆ ಕ್ಷೇತ್ರದ ಯುವ ಹಾಗೂ ಪ್ರಸಿದ್ಧ ಕಲಾವಿದ ವಿ. ಗಣಪತಿ ಭಟ್ ಸಂಕದಗುಂಡಿ ಅವರು ಸಂಶೋಧನಾ ಕ್ಷೇತ್ರದಲ್ಲೂ ಮಹತ್ವದ ಸಾಧನೆ ಮಾಡಿ ಡಾಕ್ಟರೇಟ್ (ಪಿಎಚ್‌.ಡಿ.) ಪದವಿಗೆ ಭಾಜನರಾಗಿದ್ದಾರೆ.

ಅವರು ಮಂಡಿಸಿದ "ಶ್ರೀಮದ್ವಾಲ್ಮೀಕಿ ರಾಮಾಯಣದಲ್ಲಿನ ಧರ್ಮಶಾಸ್ತ್ರದ ಚಿಂತನೆ" ಎಂಬ ಸಂಸ್ಕೃತ ಮಹಾಪ್ರಬಂಧಕ್ಕೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಪಿಎಚ್‌.ಡಿ. ಪದವಿ ನೀಡಿ ಗೌರವಿಸಿದೆ. ಈ ಮಹಾಪ್ರಬಂಧವನ್ನು ಡಾ. ಎಂ. ಎ. ಶೃತಿಕೀರ್ತಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾಗಿತ್ತು.

ಯಕ್ಷಗಾನ ತಾಳಮದ್ದಲೆ ಕಲಾವಿದರಾಗಿ ಈಗಾಗಲೇ ವಿಶಿಷ್ಟ ಗುರುತನ್ನು ಗಳಿಸಿರುವ ವಿ. ಗಣಪತಿ ಭಟ್ ಅವರು, ಸಂಶೋಧನಾ ಕ್ಷೇತ್ರದಲ್ಲಿಯೂ ಸಾಧನೆ ಮಾಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಅವರ ಈ ಸಾಧನೆಗೆ ಯಕ್ಷಗಾನ ಅಭಿಮಾನಿಗಳು, ಸಾಹಿತ್ಯಾಸಕ್ತರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

ಅಭಿನಂದನೆಗಳ ಮಹಾಪೂರ

ವಿ. ಗಣಪತಿ ಭಟ್ ಸಂಕದಗುಂಡಿ ಅವರ ಈ ಅಪೂರ್ವ ಸಾಧನೆಗೆ ಯಕ್ಷ ಸಂಭ್ರಮ ಟ್ರಸ್ಟ್‌ನ ಸೀತಾರಾಮ ಚಂದು, ಇಂದಿರಾ ಹೆಗಡೆ ಹಾಗೂ ಟ್ರಸ್ಟ್‌ನ ಸದಸ್ಯರು ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಅವರಿಂದ ಇನ್ನಷ್ಟು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಾಧನೆಗಳು ಮೂಡಿಬರಲಿ ಎಂದು ಶುಭ ಹಾರೈಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0