ಚಾರ್ಟೆಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ರಶ್ಮಿ ಹೆಗಡೆ ಹಿತ್ಲಳ್ಳಿ ಉತ್ತೀರ್ಣ

Nov 4, 2025 - 13:42
 0  239
ಚಾರ್ಟೆಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ರಶ್ಮಿ ಹೆಗಡೆ ಹಿತ್ಲಳ್ಳಿ ಉತ್ತೀರ್ಣ

ಆಪ್ತ ನ್ಯೂಸ್ ಯಲ್ಲಾಪುರ:

ರಶ್ಮಿ ಹೆಗಡೆ ಹಿತ್ಲಳ್ಳಿ ಇವರು ಕಳೆದ ಸೆಪ್ಟೆಂಬರ 2025 ರಲ್ಲಿ ನಡೆದ  ಚಾರ್ಟೆಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರೌಢಶಾಲಾ ವಿದ್ಯಾರ್ಥಿ ಜೀವನದಿಂದಲೇ ಅಕೌಂಟೆನ್ಸಿ ಮತ್ತು ಫೈನಾನ್ಸ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದು ಸತತ ಕಠಿಣ ಪರಿಶ್ರಮದಿಂದ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ .
ಯಲ್ಲಾಪುರದ ಮದರ ತೆರೆಸಾ ಹಾಗೂ ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾರಂಭಿಕ ಶಿಕ್ಷಣ ಮುಗಿಸಿ, ಪಿ.ಯು ಮತ್ತು ಬಿ.ಕಾಂ ಪದವಿಯನ್ನು ಬೆಳಗಾವಿಯ ಕೆ. ಎಲ್. ಇ  ಶಿಕ್ಷಣ ಸಂಸ್ಥೆಯಲ್ಲಿ ಪಡೆದಿದ್ದಾರೆ. ಬೆಳಗಾವಿಯ ಖ್ಯಾತ CA ರಾಜೇಂದ್ರ ಮುಂದಡಾ, CA ಸಂಜೀವ ಅಧ್ಯಾಪಕ ಹಾಗೂ CA ವಸುಂಧರಾ ಭಾತಖಾಂಡೆ ಇವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆದಿದ್ದಾರೆ.
ಯಲ್ಲಾಪುರ ನಿವಾಸಿ ರವಿಂದ್ರ ಹೆಗಡೆ ಹಾಗೂ ರಚನಾ ಹೆಗಡೆ ಹಿತ್ಲಳ್ಳಿ ಇವರ ಪುತ್ರಿ.

What's Your Reaction?

Like Like 3
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 2