ಭಾರಿ ಮಳೆಗೆ ಭೂಕುಸಿತ: ಶಿರಸಿ ನೆಗ್ಗು ಗ್ರಾಮ ಪಂಚಾಯತ್ ತಟ್ಟಗುಣಿ ಸೇತುವೆ ಸಮೀಪ ರಸ್ತೆ ಕುಸಿತ – ಹತ್ತಾರು ಗ್ರಾಮಗಳ ಸಂಪರ್ಕಕ್ಕೆ ಅಡಚಣೆ

Jul 23, 2026 - 13:59
 0  252
ಭಾರಿ ಮಳೆಗೆ ಭೂಕುಸಿತ: ಶಿರಸಿ ನೆಗ್ಗು ಗ್ರಾಮ ಪಂಚಾಯತ್ ತಟ್ಟಗುಣಿ ಸೇತುವೆ ಸಮೀಪ ರಸ್ತೆ ಕುಸಿತ – ಹತ್ತಾರು ಗ್ರಾಮಗಳ ಸಂಪರ್ಕಕ್ಕೆ ಅಡಚಣೆ

ಆಪ್ತ ನ್ಯೂಸ್ ಶಿರಸಿ:

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಭೂಕುಸಿತ ಸಂಭವಿಸಿದ್ದು, ನೆಗ್ಗು ಗ್ರಾಮ ಪಂಚಾಯತ್ ವ್ಯಾಪ್ತಿಯ ತಟ್ಟಗುಣಿ ಸೇತುವೆ ಸಮೀಪ ರಸ್ತೆ ಕುಸಿದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಕಳೆದ ವರ್ಷ ಭತ್ತಗುತ್ತಿಗೆ ಹೊಳೆ ಮೇಲೆ ನಿರ್ಮಿಸಲಾಗಿದ್ದ ಈ ಹೊಸ ಸೇತುವೆ ಮೂಲಕ ತಟ್ಟಗುಣಿ, ಹಲಸಗಿ, ಹೊಸಬಾಳೆ, ಅಜ್ಜಿಬಳ ಸೇರಿದಂತೆ ಹತ್ತಾರು ಗ್ರಾಮಗಳ ಜನರು ಸಂಚಾರ ನಡೆಸುತ್ತಿದ್ದರು. ಆದರೆ ನಿರಂತರ ಮಳೆಯಿಂದಾಗಿ ಸೇತುವೆ ಸಮೀಪದ ರಸ್ತೆ ಭಾಗದಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು ಹಾಗೂ ಗ್ರಾಮಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅಗತ್ಯ ಕೆಲಸಗಳಿಗೆ ತೆರಳಲು ಪರ್ಯಾಯ ಮಾರ್ಗಗಳನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಭೂಕುಸಿತ ಪ್ರದೇಶದಲ್ಲಿ ಮತ್ತಷ್ಟು ಮಣ್ಣು ಜಾರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅನಗತ್ಯವಾಗಿ ಆ ಮಾರ್ಗದಲ್ಲಿ ಸಂಚರಿಸದಂತೆ ಹಾಗೂ ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿರುವ ಹಿನ್ನೆಲೆಯಲ್ಲಿ ಗುಡ್ಡ ಪ್ರದೇಶಗಳ ಜನರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0