ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಭಾಷಾ ಮತ್ತು ಸಾಹಿತ್ಯ ವಿಭಾಗದಲ್ಲಿ ಅರ್ಚನಾ ಹೆಗಡೆಗೆ  ಡಾಕ್ಟರೇಟ್ ಪದವಿ

Apr 9, 2026 - 11:31
 0  89
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಭಾಷಾ ಮತ್ತು ಸಾಹಿತ್ಯ ವಿಭಾಗದಲ್ಲಿ ಅರ್ಚನಾ ಹೆಗಡೆಗೆ  ಡಾಕ್ಟರೇಟ್ ಪದವಿ

ಆಪ್ತ ನ್ಯೂಸ್ ಶಿರಸಿ:

ತಾಲೂಕಿನ ಸೋಂದಾ ಮೂಲದ  ಅರ್ಚನಾ ಹೆಗಡೆ ಅವರಿಗೆ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಭಾಷಾ ಮತ್ತು ಸಾಹಿತ್ಯ ವಿಭಾಗದಲ್ಲಿ  ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ  ನಡೆದ ವಿಶ್ವವಿದ್ಯಾಲಯದ 12 ಮತ್ತು 13ನೇ ದೀಕ್ಷಾಂತ ಘಟಿಕೋತ್ಸವದ ಸಂದರ್ಭದಲ್ಲಿ ಈ ಪದವಿಯನ್ನು ಪ್ರದಾನ ಮಾಡಲಾಯಿತು. ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಅವರು ಅರ್ಚನಾ ಹೆಗಡೆ ಅವರಿಗೆ ಡಾಕ್ಟರೇಟ್ ಪದವಿ ನೀಡಿದರು.

ಡಾ.ಅರ್ಚನಾ ಹೆಗಡೆ ಅವರು "ಸಂಸ್ಕೃತ ಸಾಹಿತ್ಯಕ್ಕೆ ಕಾಶ್ಮೀರ ಕವಿಗಳ ಕೊಡುಗೆ ಮತ್ತು ಐತಿಹಾಸಿಕ ಅಧ್ಯಯನ" ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ಈ ಸಂಶೋಧನೆಯನ್ನು ವಿದ್ವಾನ್ ಗಂಗಾಧರ ಭಟ್ ಹಾಗೂ ಡಾ. ಕೃಷ್ಣ ಜೋಶಿ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಿದ್ದಾರೆ.

ಸೋಂದಾ ಗ್ರಾಮದ ಕಲಗದ್ದೆಯ ಗಂಗಾ ಮತ್ತು ಗಜಾನನ ಹೆಗಡೆ ಅವರ ಪುತ್ರಿಯಾಗಿರುವ ಅರ್ಚನಾ ಹೆಗಡೆ, ಪ್ರಸ್ತುತ ಬೆಂಗಳೂರಿನ ದೀಕ್ಷಾ ಕಾಲೇಜು, ಜೈನ್ ಕಾಲೇಜು ಹಾಗೂ ಎನ್‌.ಎಂ.ಕೆ.ಆರ್‌.ವಿ.  ಬಿ.ಎಡ್. ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹವ್ಯಾಸವಾಗಿ ಭರತನಾಟ್ಯ ಕಲೆಯಲ್ಲಿಯೂ ಆಸಕ್ತಿ ಹೊಂದಿದ್ದಾರೆ.

ಬೆಂಗಳೂರಿನ  ಶಶಿಧರ್ ಸಿ.ವಿ. ಅವರ ಪತ್ನಿಯಾಗಿರುವ ಇವರು, ಇಬ್ಬರು ಮಕ್ಕಳ ತಾಯಿಯಾಗಿದ್ದರೂ ವಿದ್ಯಾಭ್ಯಾಸವನ್ನು ಮುಂದುವರಿಸಿ, ಪತಿಯ ಸಹಕಾರದಿಂದ ಈ ಸಾಧನೆ ಮಾಡಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0