ಬೇಡ್ತಿ-ವರದಾ ನದಿ ಜೋಡಣೆ: ಸುಳ್ಳು ಹೇಳಿದ್ರಾ ಕೇಂದ್ರ ಸಚಿವರು? ಇಲ್ಲಿದೆ ನೋಡಿ ಇಂಚಿಂಚಿನ ವಿವರ

Mar 18, 2026 - 18:57
 0  208
ಬೇಡ್ತಿ-ವರದಾ ನದಿ ಜೋಡಣೆ: ಸುಳ್ಳು ಹೇಳಿದ್ರಾ ಕೇಂದ್ರ ಸಚಿವರು? ಇಲ್ಲಿದೆ ನೋಡಿ ಇಂಚಿಂಚಿನ ವಿವರ

ಆಪ್ತ ವಿಶೇಷ

ಆಪ್ತ ನ್ಯೂಸ್‌ ಶಿರಸಿ:

ಬೇಡ್ತಿ ಹಾಗೂ ವರದಾ ನದಿ ಜೋಡಣೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರು ನೀಡಿದ ಉತ್ತರ ಹಾಗೂ ಕೇಂದ್ರ ಜಲ ಶಕ್ತಿ ಸಚಿವಾಲಯ ನೀಡಿರುವ ಉತ್ತರ ಒಂದಕ್ಕೊಂದು ಸಂಬಂಧವೇ ಇಲ್ಲದಂತಾಗಿದೆ. ಸದನದಲ್ಲಿ ಸಚಿವರು ಹೇಳಿದ್ದೊಂದು ಆದರೆ ಶಿರಸಿ ವೈದ್ಯ ಡಾ. ರವಿಕಿರಣ ಪಟವರ್ಧನ ಅವರಿಗೆ ಕೇಂದ್ರ ಜಲ ಶಕ್ತಿ ಸಚಿವಾಲಯ ನೀಡಿರುವ ಉತ್ತರ ಇನ್ನೊಂದಾಗಿದ್ದು, ಕೇಂದ್ರ ಸಚಿವ ರಾಜಭೂಷಣ ಚೌಧರಿ ಸುಳ್ಳು ಹೇಳಿ ಸದನದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ರಾ ಎನ್ನುವ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕೇಂದ್ರ ಸಚಿವ ರಾಜಭೂಷಣ ಚೌಧರಿ ಬೇಡ್ತಿ-ವರದಾ ನದಿ ಜೋಡಣೆಯ ಡಿಪಿಆರ್‌ ಸಿದ್ಧವಾಗಿದೆ ಎಂದು ಸಂಸತ್ತಿನಲ್ಲಿ ಹೇಳಿದ್ದಾರೆ. ಸಂಸದ ಡಾ. ಸುಧಾಕರ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಈ ಯೋಜನೆಯ ಡಿಪಿಆರ್‌ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಆದರೆ ಕೇಂದ್ರ ಜಲಶಕ್ತಿ ಸಚಿವಾಲಯ ಡಿಪಿಆರ್‌ ಸಿದ್ಧವೇ ಆಗಿಲ್ಲ ಎಂದು ಉತ್ತರಿಸಿದೆ.

ಕೇಂದ್ರ ಜಲ ಶಕ್ತಿ ಸಚಿವಾಲಯ ರವಿಕಿರಣ ಪಟವರ್ಧನ ಅವರ ಪತ್ರಕ್ಕೆ ಉತ್ತರವನ್ನು ನೀಡಿದ್ದು, ಅದರ ಪೂರ್ಣಪಾಠ ಇಲ್ಲಿದೆ ನೋಡಿ


ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ

ಜಲ ಶಕ್ತಿ ಸಚಿವಾಲಯ, ಭಾರತ ಸರ್ಕಾರ
(ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ)

National Water Development Agency
Ministry of Jal Shakti, Government of India
(Department of Water Resources, River Development and Ganga Rejuvenation)

NWDA/113/55(3)/Tech/2026/539-541

ಡಾ. ರವಿಕಿರಣ ಪಟವರ್ಧನ
59/1, ಹೊಸಪೇಟೆ ರಸ್ತೆ, ದೇವಿಕೆರೆ, ಶಿರಸಿ
ಇಮೇಲ್: [email protected]

18-03-2026

ವಿಷಯ: ನದೀ ಸಂಪರ್ಕ ಯೋಜನೆ – ಬೇಡ್ತಿ–ವರದಾ ಸಂಪರ್ಕ ಯೋಜನೆ – ಕುರಿತು.

ಮಹೋದಯರೇ,

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 12.03.2026 ರಂದು ಸಲ್ಲಿಸಲಾದ MINWR/E/2026/0000691 ಸಂಖ್ಯೆಯ ಮನವಿಯನ್ನು ಉಲ್ಲೇಖಿಸಲಾಗುತ್ತಿದೆ.

ಬೇಡ್ತಿ–ವರದಾ ಸಂಪರ್ಕ ಯೋಜನೆಯ ಸ್ಥಿತಿಗತಿ ಕುರಿತು ತಿಳಿಸಬೇಕಾದದ್ದು ಏನೆಂದರೆ, ಈ ಯೋಜನೆಯ *ವಿವರವಾದ ಯೋಜನಾ ವರದಿ (DPR)*ಯನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA) ತಯಾರಿಸಿ, 2022ರಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು.

ಅನಂತರ, ಕರ್ನಾಟಕ ಸರ್ಕಾರದ ವಿನಂತಿಯ ಮೇರೆಗೆ, *ಹಿರೇವಡ್ಡಟ್ಟಿ ಗ್ರಾಮದಲ್ಲಿ ಪ್ರಸ್ತಾವಿತ ಸಂಗ್ರಹಣಾ ಜಲಾಶಯವನ್ನು ಪರಿಗಣಿಸಿ ಪರಿಷ್ಕೃತ ಬೇಡ್ತಿ–ವರದಾ ಸಂಪರ್ಕ ಯೋಜನೆಯ ಪ್ರಾಥಮಿಕ ಕಾರ್ಯಸಾಧ್ಯತಾ ವರದಿ (PFR)*ಯನ್ನು NWDA ತಯಾರಿಸಿ, 12 ಆಗಸ್ಟ್ 2025ರಂದು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿತು. ಈ ವರದಿಯನ್ನು ರಾಜ್ಯ ಸರ್ಕಾರವು ಅನುಮೋದಿಸಿದೆ.

ಈಗ, ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯು ಪರಿಷ್ಕೃತ ಬೇಡ್ತಿ–ವರದಾ (ಹಿರೇವಡ್ಡಟ್ಟಿ) ಸಂಪರ್ಕ ಯೋಜನೆಯ DPR ತಯಾರಿಕೆಗೆ ತಾತ್ವಿಕ ಅನುಮೋದನೆ ನೀಡಿದೆ.

ಈ DPR ತಯಾರಿಕೆಗೆ ಸಂಬಂಧಿಸಿ, ರಾಜ್ಯ ಸರ್ಕಾರ ಮತ್ತು NWDA ನಡುವೆ 23.12.2025ರಂದು ಒಪ್ಪಂದ ಪತ್ರ (MoU)ಗೆ ಸಹಿ ಮಾಡಲಾಗಿದೆ.

ನಿಮ್ಮ ವಿಶ್ವಾಸಿ,

ಡಿಜಿಟಲ್ ಸಹಿಯೊಂದಿಗೆ,
ಶಾಜತ್ನನ್ ಕೆ.ಎಚ್.
ನಿರ್ದೇಶಕ (ತಾಂತ್ರಿಕ)
[email protected]

ಮಾಹಿತಿಗಾಗಿ ಪ್ರತಿಯನ್ನು ಕಳುಹಿಸಲಾಗಿದೆ:

1. ಹಿರಿಯ ಸಂಯುಕ್ತ ಆಯುಕ್ತರು (BM), ಕೊಠಡಿ ಸಂಖ್ಯೆ 207, ಬ್ಲಾಕ್–III, 2ನೇ ಮಹಡಿ, BM ವಿಭಾಗ, ಜಲ ಶಕ್ತಿ ಸಚಿವಾಲಯ, ಸಿಜಿಒ ಕಾಂಪ್ಲೆಕ್ಸ್, ನವದೆಹಲಿ.


2. ಅಂಡರ್ ಸೆಕ್ರಟರಿ (ಸಮನ್ವಯ), ಜಲ ಶಕ್ತಿ ಸಚಿವಾಲಯ, ಶ್ರಮ ಶಕ್ತಿ ಭವನ, ರಫಿ ಮಾರ್ಗ, ನವದೆಹಲಿ.


****
ಈ ಪತ್ರದ ಮೂಲಕ ಕೇಂದ್ರದ ಸಚಿವರು ಹಾಗೂ ಸಚಿವಾಲಯದ ನಡುವೆ ಸಮನ್ವಯವೇ ಇಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದರೂ, ಸಂಸತ್‌ ಕಲಾಪದಂತಹ ಗಂಭೀರ ಸಮಯದಲ್ಲಿಯೂ ಕೇಂದ್ರ ಸಚಿವರು ಯಾವುದೇ ಮಾಹಿತಿಯನ್ನು ತಿಳಿದುಕೊಳ್ಳದೇ ಬೇಕಾಬಿಟ್ಟಿಯಾಗಿ ಉತ್ತರ ನೀಡುವ ಮೂಲಕ ಸಂಸತ್ತಿಗೆ ಸುಳ್ಳು ಹೇಳಿದರು ಜೊತೆಗೆ ಜನರ ಎದುರು ತಪ್ಪು ಮಾಹಿತಿ ನೀಡಿದ್ದಾರೆ ಎನ್ನುವುದು ಸಾಬೀತಾದಂತಾಗಿದೆ.
ಇಂತಹ ಸಚಿವರು ಸಂಸತ್ತಿನಲ್ಲಿ ಉತ್ತರ ನೀಡುವ ಮೊದಲು ಸಂಪೂರ್ಣ ಮಾಹಿತಿಯನ್ನು ಪಡೆದು ನಂತರ ಉತ್ತರಿಸುವುದು ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0