ಯಲ್ಲಾಪುರ ಜಾತ್ರೆಗೆ ಅದ್ಧೂರಿ ಚಾಲನೆ: ಗದ್ದುಗೆಗೆ ಬಂದ ಕಾಳಮ್ಮ‌ದುರ್ಗಮ್ಮಾ ದೇವಿಯರು

Feb 11, 2026 - 20:36
 0  59
ಯಲ್ಲಾಪುರ ಜಾತ್ರೆಗೆ ಅದ್ಧೂರಿ ಚಾಲನೆ: ಗದ್ದುಗೆಗೆ ಬಂದ ಕಾಳಮ್ಮ‌ದುರ್ಗಮ್ಮಾ ದೇವಿಯರು

ಆಪ್ತ ನ್ಯೂಸ್‌ ಯಲ್ಲಾಪುರ:

ಪ್ರಸಿಧ್ದ ಗ್ರಾಮದೇವಿ ಜಾತ್ರೆ ಕಾಳಮ್ಮ‌ದುರ್ಗಮ್ಮಾ ದೇವಿಯರ ಭವ್ಯ ಮೆರವಣಿಗೆ ನಡೆದು ಜಾತ್ರಾ ಮಂಟಪದ ಗದ್ದುಗೆಯಲ್ಲಿ ಆಸೀನರಾಗುವದರೊಂದಿಗೆ ಒಂಬತ್ತು ದಿನಗಳ ಜಾತ್ರೋತ್ಸವಕ್ಕೆ ಬುಧವಾರ ಚಾಲನೆಗೊಂಡಿತು.

ಬುಧವಾರದ ದಿನದ ಎಲ್ಲ ವಿಧವಾದ ಧಾರ್ಮಿಕ ವಿಧಿವಿಧಾನ ಮುಗಿದು ದೇವಿಯರು  ೪ ಗಂಟೆಯ ಸುಮಾರಿಗೆ ದೇವಾಲಯದಿಂದ ಹೊರಬಂದವು.
ಅಲ್ಲಿಂದ ಭಕ್ತರು ದೇವಿಯರನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.ಸಹಸ್ರಾರು ಭಕ್ತರ ಮುಗಿಲುಮುಟ್ಟಿದ ಜೈಘೋಷ, ಅತ್ತಿಂದತ್ತ ದೇವಿಯರು ಓಡಾಡುವ ದೃಶ್ಯ,ಜೊತೆಗೆ ಮುಖಾಮುಖಿಯಾಗುವ ಅಧ್ಭುತ ದೃಶ್ಯವನ್ನು ಭಕ್ತರು ಕಣ್ತುಂಬ ನೋಡಿದರು.

ಗ್ರಾಮದೇವಿ ರಸ್ತೆಯಲ್ಲಿ ಕೇಸರಿ ಪತಾಕೆ ತಳಿರು ತೋರಣ ರಸ್ತೆಯ ಮೇಲೆ ರಂಗವಲ್ಲಿ ಹಾಕಿ ಅಲಂಕರಿಸಿದ ಮಾರ್ಗದಲ್ಲಿ ದೇವಿಯರ  ಮೆರವಣಿಗೆ ಸಾಗಿತು.ಕಾಳಮ್ಮ ಮತ್ತು ದುರ್ಗಮ್ಮಾ ಮುಖಾಮುಖಿಯಾದಾಗ ಜನರ ಜಯಘೋಷ,ಕೇಕೆ ಮುಗಿಲುಮುಟ್ಟಿತ್ತು.ತಿಳಕ್ ಚೌಕ್,ಗಾಂಧಿ ಚೌಕ್, ಬಸವೇಶ್ವರ ವೃತ್ತ,ಗಳಲ್ಲಿ ಜನ ಕಿಕ್ಕಿರಿದು ಸೇರಿದ್ದರು.
 ಗ್ರಾಮದೇವಾಲಯದಿಂದ ಹೊರಟ ದೇವಿಯರು ಮೆರವಣಿಗೆಯಲ್ಲಿ ಸುಮಾರು ಒಂದುವರೆ ತಾಸು ಸಾಗಿದರು.ಕಾಳಮ್ಮ ದುರ್ಗಮ್ಮ  ಅಲಂಕಾರಗೊಂಡ ಅತ್ಯಂತ ವಿಶೇಷವಾದ ಹೋಯ್ಸಳ ಶಿಲ್ಪಕಲಾ ಶೈಲಿಯಲ್ಲಿ ನಿರ್ಮಿತವಾದ ಜಾತ್ರಾ ಮಂಟಪದ ಗದ್ದುಗೆಯಲ್ಲಿ ೫.೩೦ ಕ್ಕೆ ವಿರಾಜಮಾನಳಾಗುವ ಮೂಲಕ ಒಂಬತ್ತು ದಿನದ ಅಧ್ದೂರಿ ಜಾತ್ರೆಗೆ ನಾಂದಿ ಹಾಡಿದರು.
ಪೋಲಿಸರು ಮೆರವಣಿಗೆ ವೇಳೆ ಸೂಕ್ತ ಬಂದೋಬಸ್ತ ಏರ್ಪಡಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0