ಪತ್ರಕರ್ತನೊಳಗೊಬ್ಬ ಅದ್ಭುತ ಗಾಯಕ! ಒಂದೇ ಹಾಡಿನಿಂದ ಮನಗೆದ್ದ ಶಿರಸಿಯ ಜೆ.ಆರ್. ಸಂತೋಷ್‌ಕುಮಾರ್
ಆಪ್ತ ನ್ಯೂಸ್ ಶಿರಸಿ:
ಇಷ್ಟು ದಿನಗಳ ಕಾಲ ಅವರು ಒಬ್ಬ ಚುರುಕು ಪತ್ರಕರ್ತ ಎಂಬುದೇ ಜಿಲ್ಲೆಯ ಜನರಿಗೆ ಪರಿಚಯವಾಗಿತ್ತು. ಆದರೆ ಅವರೊಳಗೆ ಅಡಗಿದ್ದ ಪ್ರತಿಭಾವಂತ ಗಾಯಕನನ್ನು ಹೆಚ್ಚಿನವರು ಕಂಡಿರಲಿಲ್ಲ. ಇದೀಗ ಒಂದೇ ಒಂದು ಹಾಡಿನ ಮೂಲಕ ತಮ್ಮ ಸುಮಧುರ ಗಾಯನದಿಂದ ಎಲ್ಲರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ..
ಅವರೇ ಶಿರಸಿಯ ಹೆಮ್ಮೆಯ ಪತ್ರಕರ್ತ ಜೆ.ಆರ್. ಸಂತೋಷ್‌ಕುಮಾರ್.
'ರಾಜ್ ಬಿಗ್ ಬ್ರೇಕಿಂಗ್' ಮೂಲಕ ಜನರಿಗೆ ಚಿರಪರಿಚಿತರಾಗಿರುವ ಸಂತೋಷ್‌ಕುಮಾರ್, ಹಲವು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಶಿರಸಿಯ ವಿವಿಧ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಾವುದೇ ಭಾಗದಲ್ಲಿ ನಡೆದ ಘಟನೆಗಳ ಸುದ್ದಿಯನ್ನು ಕ್ಷಣಾರ್ಧದಲ್ಲಿ ಜನರಿಗೆ ತಲುಪಿಸುವ ವೇಗದ ವರದಿಗಾರರಾಗಿ ಅವರು ಹೆಸರುವಾಸಿಯಾಗಿದ್ದಾರೆ.
ಆದರೆ ಈಗ ಪತ್ರಕರ್ತನ ಗುರುತಿನ ಜೊತೆಗೆ ಗಾಯಕನಾಗಿಯೂ ಅವರು ಎಲ್ಲೆಡೆ ಮೆಚ್ಚುಗೆ ಗಳಿಸುತ್ತಿದ್ದಾರೆ.
ಇತ್ತೀಚೆಗೆ ಜನನಿ ಮ್ಯೂಸಿಕ್ ಅಂಗಳ ವೇದಿಕೆಯಲ್ಲಿ ಅವರು ವರನಟ, ಗಾನಗಂಧರ್ವ ಡಾ. ರಾಜ್‌ಕುಮಾರ್ ಅವರು ಅಮರಗೊಳಿಸಿದ "ಯಾವ ಕವಿಯೂ ಬರೆಯಲಾರ" ಎಂಬ ಮನಮೋಹಕ ಗೀತೆಯನ್ನು ಹಾಡಿದ್ದು, ಅವರ ಗಾಯನಕ್ಕೆ ಸಂಗೀತಾಸಕ್ತರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಸಂತೋಷ್‌ಕುಮಾರ್ ಅವರ ಸ್ಪಷ್ಟ ಉಚ್ಚಾರಣೆ, ಭಾವಪೂರ್ಣ ಗಾಯನ ಹಾಗೂ ಆತ್ಮೀಯ ನಿರೂಪಣೆ ಹಾಡಿಗೆ ಮತ್ತಷ್ಟು ಮೆರಗು ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ಹಾಡಿನ ವಿಡಿಯೊಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸುದ್ದಿಗಳ ಮೂಲಕ ಜನಮನ ಗೆದ್ದಿದ್ದ ಜೆ.ಆರ್. ಸಂತೋಷ್‌ಕುಮಾರ್, ಇದೀಗ ತಮ್ಮ ಗಾಯನದ ಮೂಲಕವೂ ಸಂಗೀತಪ್ರಿಯರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳುತ್ತಿರುವುದು ಗಮನಾರ್ಹವಾಗಿದೆ.
ಅವರ ಈ ಮಧುರ ಗಾಯನದ ವಿಡಿಯೊವನ್ನು ನೀವು ಕೂಡ ನೋಡಿ, ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.
ವೀಡಿಯೋ ಲಿಂಕ್
https://www.instagram.com/reel/DbSxi23KfA0/?utm_source=ig_web_copy_link&igsh=NTc4MTIwNjQ2YQ==
What's Your Reaction?
Like
0
Dislike
0
Love
0
Funny
0
Angry
0
Sad
1
Wow
1



