ದ್ವಿತೀಯ ಪಿಯುಸಿ: ಇಲ್ಲಿದೆ ಸಾಧಕ ವಿದ್ಯಾರ್ಥಿಗಳ ವಿವರ- ಯಾರೆಲ್ಲ ಇದ್ದಾರೆ ನೀವೂ ನೋಡಿ
ಆಪ್ತ ನ್ಯೂಸ್ ಶಿರಸಿ:
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಶಿರಸಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾಧನೆ ಮಾಡಿದ್ದಾರೆ. ಯಾರೆಲ್ಲ ಸಾಧನೆ ಮಾಡಿದ್ದಾರೆ? ಇಲ್ಲಿ ನೋಡಿ
****
ಚಂದನ ಪಿಯು ಶೇ 99 ರಷ್ಟು ಫಲಿತಾಂಶ
ಚಂದನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶವು ಶೇ 99 % ರಷ್ಟಾಗಿದ್ದು ಪರೀಕ್ಷೆಗೆ ಕುಳಿತ 130 ವಿದ್ಯಾರ್ಥಿಗಳಲ್ಲಿ 68 ವಿದ್ಯಾರ್ಥಿಗಳು ಶೇ 85% ಅಧಿಕ ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಶೇ 99% ರಷ್ಟು ಫಲಿತಾಂಶ ದಾಖಲಾಗಿದ್ದು ಪರೀಕ್ಷೆ ಬರೆದ 120 ವಿದ್ಯಾರ್ಥಿಗಳಲ್ಲಿ 65 ವಿದ್ಯಾರ್ಥಿಗಳು ಶೇ 85% ಅಧಿಕ ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿರುತ್ತಾರೆ.
ಕೃಷ್ಣ ರವಿ ನಾಯ್ಕ , ಹಾಗೂ ಶ್ರೀನಿಧಿ ಎಲ್ ಹೆಗಡೆ 583 ಅಂಕಗಳನ್ನು (ಶೇ 97.16 % ) ಪಡೆದು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು, ಮಾನವಿ ಹೆಗಡೆ 582 ( ಶೇ 97.% ) ಅಂಕಗಳನ್ನು ಪಡೆದು,ಕಾಲೇಜಿಗೆ ದ್ವಿತೀಯ ಸ್ಥಾನವನ್ನು, ಅಮೂಲ್ಯ ವಿ ಭಟ್ 581 ( ಶೇ 96.83 % ) ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಶೇಕಡಾ 100% ಫಲಿತಾಂಶ ದಾಖಲಾಗಿದ್ದು ಪರೀಕ್ಷೆ ಬರೆದ 10 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿ ಉತ್ತೀರ್ಣರಾಗಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಶಿವಾಲಿ ವಿದ್ಯಾಧರ ಗೌಡ 573 ( 95.5 % ) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು, ಶೇರವಾನ ಮ್ಯಾಥ್ಯೂ ಲೂಯಿಶ್ 535 (89.16 % )ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು , ಈಶಾನ್ ಭಾರ್ಕೇರ್ 504 ( 84 % ) ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ನೂರಕ್ಕೆ ನೂರೂ ಅಂಕ ಪಡೆದವರು : ಗಣಿತ ಶಾಸ್ತ್10, ಸಂಸ್ಕ್ರತ್ 19 ,ಕನ್ನಡ 2,ಕಂಪ್ಯೂಟರ್ ಸೈನ್ಸ್ 5, ಭೌತಶಾಸ್ತ್ರ 1
ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯರಾದ ಡಾ ಆರ್ ಎಂ ಭಟ್ , ಕಾರ್ಯದರ್ಶಿಗಳು ಹಾಗೂ ಸಂಸ್ಥಾಪಕರಾದ ಎಲ್ ಎಂ ಹೆಗಡೆ, ಅಧ್ಯಕ್ಷರಾದ ಎಸ್ ಆರ್ ಹೆಗಡೆ , ಉಪಾಧ್ಯಕ್ಷರಾದ ಡಾ ರಮೇಶ್ ಹೆಗಡೆ, ಕಾಲೇಜಿನ ಅಧ್ಯಕ್ಷರಾದ ವಿ. ಜಿ ಜೋಶಿ, ಸಿ.ಇ.ಓ ಆದ ಸಿ ಡಿ ನಾಯ್ಕ, ಸದಸ್ಯರಾದ ಡಾ ಶಿವರಾಂ ಕೆ ವಿ , ಶ್ರೀ ವಿನಯ ಜೋಶಿ , ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹರ್ಷವ್ಯಕ್ತ ಪಡಿಸಿ ಶುಭ ಕೋರಿದ್ದಾರೆ.
****
ವಾಣಿಜ್ಯ ವಿಭಾಗದಲ್ಲಿ ಶೇ 98.33 ಅಂಕ ಗಳಿಸಿ ಸಾಧನೆ ಮಾಡಿದ ಶಿರಸಿ ಲಯನ್ಸ್ ಕಾಲೇಜಿನ ಸೌಖ್ಯ ಹೆಗಡೆ
ಶಿರಸಿ: ಇಲ್ಲಿನ ಲಯನ್ಸ್ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಖ್ಯ ಹೆಗಡೆ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ 98.33 ಅಂಕ ದೊಂದಿಗೆ ಉತ್ತಮ ಸಾಧನೆ ಮಾಡಿದ್ದಾಳೆ. ತನ್ನ ಸಾಧನೆಗೆ ಕಾರಣರಾದ ಲಯನ್ಸ್ ಕಾಲೇಜು ಶಿಕ್ಷಕ ವೃಂದ, ಆಡಳಿತ ಮಂಡಳಿಗೆ ಹಾಗೂ ಪಾಲಕರಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾಳೆ. ಕುಮಾರಿ ಸೌಖ್ಯ ಅತಿ ಚಿಕ್ಕ ವಯಸ್ಸಿನಲ್ಲಿಯೇ ಕೇಂದ್ರ ಸರಕಾರ ಅಧೀನ ದಲ್ಲಿರುವ ಶಿರಸಿ ನವಿಲ್ಗಾರ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಪುಟ್ಟ ಹೆಜ್ಜೆ ಇಟ್ಟು ದೊಡ್ಡ ಸಾಧನೆಯತ್ತ ಸಾಗಬೇಕು ಎನ್ನುತ್ತಾಳೆ.
****
ಉಳ್ಳಾಗಡ್ಡಿ ವ್ಯಾಪಾರಿಯ ಮಗ ರಾಘವೇಂದ್ರ ಶೇ,94 ರಷ್ಟು ಸಾಧನೆ
ಶಿರಸಿಯ ಶ್ರೀ ಮಾರಿಕಾಂಬಾ ಸರಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ರಾಘವೇಂದ್ರ ಜಿ ಪ್ರಭು ಶೇ94 ರಷ್ಡು ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾನೆ.ಈತನು ಶಿರಸಿಯ ಉಳ್ಳಾಗಡ್ಡಿ ವ್ಯಾಪಾರಿ ಘಣು ಹಾಗು ಸ್ಮೀತಾ ದಂಪತಿಗಳ ಪುತ್ರನಾಗಿದ್ದಾನೆ.
****
ವಾಣಿಜ್ಯ ವಿಭಾಗದಲ್ಲಿ ಶೇ,95 ರಷ್ಟು ಅಂಕಗಳಿಸಿದ ಐಶ್ವರ್ಯ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶಿರಸಿಯ ಎಂಇಎಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು.ಐಶ್ವರ್ಯ ರಾಮಚಂದ್ರ ಶೇಟ್ ಶೇ95 ರಷ್ಟು ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.ಇವಳು ಕುಳವೆ ಪಂಚಾಯತಿಯ ತೆರಕನಳ್ಳಿ ಗ್ರಾಮದ ವಿದ್ಯಾರ್ಥಿಯಾಗಿದ್ದಾಳೆ.ಕು.ಐಶ್ವರ್ಯ ರಾಮಚಂದ್ರ ಮತ್ತು ಆಶಾ ಶೇಟ್ ದಂಪತಿಗಳ ಪುತ್ರಿಯಾಗಿದ್ದಾಳೆ.
****
ವಾಣಿಜ್ಯ ವಿಭಾಗದಲ್ಲಿ 97.33%ರಷ್ಟು ಅಂಕ ಗಳಿಸಿದ ಬಾಲಕೃಷ್ಣ
ಬಾಲಕೃಷ್ಣ ಎಸ್ ಬಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 97.33% ಫಲಿತಾಂಶವನ್ನು ಮಾಡಿ ಎಂಇಎಸ್ ಕಾಲೇಜಿಗೆ ಕೀರ್ತಿ ತಂದಿದ್ದಾನೆ. ಈ ವಿದ್ಯಾರ್ಥಿ ಸಿರ್ಸಿ ತಾಲೂಕಿನ ಬಾಸಿ ಗ್ರಾಮಸ್ಥನಾಗಿರುತ್ತಾನೆ.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0