ಹೆಗ್ಗಾರ ಶಾಲೆಯಲ್ಲಿ ನಾರಾಯಣ  ಭಟ್ಟರ ಸಾರ್ಥಕ ಸೇವೆಗೆ ಗೌರವ

Feb 17, 2026 - 22:51
 0  114
ಹೆಗ್ಗಾರ ಶಾಲೆಯಲ್ಲಿ ನಾರಾಯಣ  ಭಟ್ಟರ ಸಾರ್ಥಕ ಸೇವೆಗೆ ಗೌರವ

ಆಪ್ತ ನ್ಯೂಸ್‌ ಹೆಗ್ಗಾರ (ಅಂಕೋಲಾ):

ಅಂಕೋಲಾ ತಾಲೂಕಿನ ಡೊಂಗ್ರಿ ಗ್ರಾಮ ಪಂಚಾಯತಿಯಲ್ಲಿ ಐದು ವರ್ಷಗಳ ಕಾಲ ಸದಸ್ಯರಾಗಿ ಕಾರ್ಯನಿರ್ವಹಿಸಿ ಸಾರ್ಥಕ ಸೇವೆ ಸಲ್ಲಿಸಿ ಅವಧಿ ಪೂರೈಸಿದ ನಾರಾಯಣ ವೆಂ. ಭಟ್ಟ ಜಾಯಿಕಾಯಿಮನೆ ಅವರನ್ನು ಹೆಗ್ಗಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.
ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಶಾಲೆಗೆ ಬಾವಿ, ತೋಟಕ್ಕೆ ನೀರಿನ ಟ್ಯಾಂಕ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಪಂಚಾಯತ್ ಮುಖೇನ ಯಶಸ್ವಿಯಾಗಿ ಕಲ್ಪಿಸಿಕೊಡುವಲ್ಲಿ ನಾರಾಯಣ ಭಟ್ಟರು ಪ್ರಮುಖ ಪಾತ್ರವಹಿಸಿದ್ದರು. ಸದಾ ಚಟುವಟಿಕೆಯಿಂದ ಸಾರ್ವಜನಿಕ ಹಿತಾಸಕ್ತಿಗೆ ಸ್ಪಂದಿಸಿದ ಅವರು, ಯಶಸ್ವಿ ಹಾಗೂ ಜನಪರ ಪಂಚಾಯತ್ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ.
ಅವರ ಮುಂದಿನ ಜೀವನ ಮತ್ತಷ್ಟು ಉಜ್ವಲವಾಗಲಿ ಎಂದು ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಸ್ನೇಹಿತರು, ಶಿಕ್ಷಕ ವೃಂದ ಹಾಗೂ ಊರ ನಾಗರಿಕರು ಹಾರೈಸಿ ಅಭಿನಂದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೀತಾ ಗಣೇಶ ಭಟ್ಟ ವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0