ಅಘನಾಶಿನಿ ನದಿ ಜೋಡಣೆ ಯೋಜನೆಗೆ  ೨೫ ಸಾವಿರಕ್ಕೂ ಮಿಕ್ಕ ಕುಟುಂಬಗಳಿ೦ದ ಆಕ್ಷೇಪ ಪತ್ರ ಸಲ್ಲಿಸಲು ನೀರ್ಧಾರ

ಹೋರಾಟದ ನಡೆ: • ಫೇ.೨ ಗೋಳಿಮಕ್ಕಿಯಲ್ಲಿ ಬೃಹತ್ ಸಭೆ ಮತ್ತು ಪಾದಯಾತ್ರೆ . • ಫೇ.೨ ರಿಂದ ೧೦ - ೧೨೩ ಗ್ರಾಮಗಳಲ್ಲಿ ಜಾಗೃತ  ಸಭೆ • ಫೇ.೧೧ ಕ್ಕೆ - ಮುಂಜಾನೆ ೮ ರಿಂದ ಬಿಳಗಿಯಿಂದ ಪಾದಯಾತ್ರೆ ಪ್ರಾರಂಭಗೊAಡು ೧೦.೩೦ ಕ್ಕೆ ನೆಹರು ಮೈದಾನದಲ್ಲಿ ಬಹಿರಂಗ ಸಭೆ.

Jan 29, 2026 - 13:22
 0  107
ಅಘನಾಶಿನಿ ನದಿ ಜೋಡಣೆ ಯೋಜನೆಗೆ  ೨೫ ಸಾವಿರಕ್ಕೂ ಮಿಕ್ಕ ಕುಟುಂಬಗಳಿ೦ದ ಆಕ್ಷೇಪ ಪತ್ರ ಸಲ್ಲಿಸಲು ನೀರ್ಧಾರ

ಆಪ್ತ ನ್ಯೂಸ್‌ ಸಿದ್ದಾಪುರ:

ಜನ ಮತ್ತು ಪರಿಸರ ವಿರೋಧಿ ಯೋಜನೆಯಾದ ಕೇಂದ್ರ ಸರ್ಕಾರದಿಂದ ಪ್ರಸ್ತುತ ಪಡಿಸಲ್ಪಟ್ಟ ಅಘನಾಶಿನಿ ಎತ ನೀರಾವರಿ ಯೋಜನೆಯನ್ನು ಆಕ್ಷೇಪಿಸಿ ಪ್ರಥಮ ಹಂತದಲ್ಲಿ ೨೫ ಸಾವಿರಕ್ಕೂ ಮಿಕ್ಕ ಕುಟುಂಬಗಳಿAದ ಆಕ್ಷೇಪ ಪತ್ರ ಸಲ್ಲಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ತೀರ್ಮಾನಿಸಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

ಅಘನಾಶಿನಿ ನದಿ ಜೋಡಣೆ ಯೋಜನೆಗೆ ಜನಜಾಗೃತೆ ಮೂಡಿಸುವ ಅಂಗವಾಗಿ ಅಣಲೇಬೈಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಳಿಮಕ್ಕಿಯಲ್ಲಿ ಫೇ.೨ ರಂದು ಜರುಗಲಿರುವ ಸಾರ್ವಜನಿಕ ಸಭೆ ಮತ್ತು ಪಾದಯಾತ್ರೆ ಅಂಗವಾಗಿ ಇಂದು ಸ್ಥಳೀಯ ಬಾಲ ಮಂದಿರ ಸಭಾಂಗಣದಲ್ಲಿ ಜರುಗಿದ ಹೋರಾಟದ ರೂಪು ರೇಷೆ ಸಭೆಯಲ್ಲಿ ಸಭೆಯ ನಿರ್ಣಯವನ್ನು ಮೇಲಿನಂತೆ ಪ್ರಕಟಿಸಿದರು.

ಕಳೆದ ವರ್ಷದ ಅಕ್ಟೋಬರ್‌ದಲ್ಲಿ ರಾಷ್ಟ್ರೀಯ ಜಲ ಅಭೀವೃದ್ದಿ ಸಂಸ್ಥೆ ಯೋಜನೆಯ ಪೂರ್ವಕಾರ್ಯ ಸಾಧ್ಯತಾ ಕರಡು ವರದಿ ಸಿದ್ದ ಪಡಿಸಿದ್ದು, ಪರಿಶೀಲನ ಪೂರ್ಣಗೊಂಡ ನಂತರ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದರಿಂದ ಆಕ್ಷೇಪಣೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಅರಣ್ಯ ಪ್ರಮಾಣ ಕಡಿಮೆ ಆಗಿದ್ದಾಗ್ಯೂ, ಬೇಡ್ತಿ ಯೋಜನೆ, ಶರಾವತಿ ನದಿಯೆ ಪಂಪ್ ಸ್ಟೋರೇಜ್ ಅಘನಾಶಿನಿ ನದಿ ಜೋಡಣೆ ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ನಿಯೋಜನೆ ಮೇರೆಗೆ ರಾಜ್ಯ ಸರ್ಕಾರ ಕಾರ್ಯ ಪ್ರವ್ರತ್ತರಾಗುತ್ತೀರುವುದು ವಿಷಾಧಕರ. ಈ ಹಿನ್ನಲೆಯಲ್ಲಿ ೧.೨೦ ಲಕ್ಷ ಗಿಡ ನಾಶ ಮಾಡಿ ೬೦೦ ಎಕರೆ ಪ್ರದೇಶ  ಮುಳುಗಡೆಯೊಂದು ಕೇಂದ್ರ ಸರ್ಕಾರದ ಡಿಪಿಆರ್ ನಲ್ಲಿ ಪ್ರಸ್ತಾಪವಾಗಿರುವುದು ಅವೈಜ್ಞಾನಿಕವೆಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಅಲ್ಲದೇ, ೧೯೪ ಕಿ.ಮಿ ಸುರಂಗ ಮಾರ್ಗದಿಂದ ೩೫ ಟಿ ಎಮ್ ಸಿ ಅಘನಾಶಿನಿ ನದಿ ನೀರನ್ನು  ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗೆ ೨೩ ಸಾವಿರ ಕೋಟಿ ವೆಚ್ಚದಿಂದ ಪ್ರಸ್ತಾಪಿಸಲಾದ ಯೋಜನೆಯು ವಾಸ್ತವಿಕತೆಯಿಂದ ಕೊಡಿದ್ದು ಇರುವುದಿಲ್ಲ. ಎಂದು ಸಭೆಯಲ್ಲಿ ಪ್ರಸ್ತಾಪವಾದವು.

ದಾರಾಳವಾಗಿ ಜಿಲ್ಲೆಯ ಅರಣ್ಯ ಭೂಮಿಯನ್ನ ಅರಣ್ಯೇತರ ಚಟುವಟಿಕೆಗೆ ನೀಡಿರುವುದರಿಂದ ೧೯೭೩ ರಲ್ಲಿ ಇರುವಂತ  ಅರಣ್ಯ ಪ್ರಮಾಣ ಶೇ.೭೨.೨೬ ರಿಂದ  ೨೦೧೩ ರಲ್ಲಿ ಜಿಲ್ಲೆಯ ಅರಣ್ಯ ಪ್ರಮಾಣ ಶೆ.೫೯.೭೦ ರಷ್ಟು ಕಡಿಮೆಯಾಗಿರುವುದು ವಿಷಾಧಕರ.
    ಮುಂಡಗೋಡ ತಾಲೂಕಿನಲ್ಲಿ ೧೬೦೦ ಹೆಕ್ಟರ್ ಭೂಮಿಯನ್ನ ಟೀಬೇಟಿಯನ್ ಕಾಲೋನಿಗೆ ನೀಡುವ ಸರ್ಕಾರ, ಜಿಲ್ಲೆಯ ೮೦ ಸಾವಿರ ಅರಣ್ಯವಾಸಿ ಕುಟುಂಬಗಳಿಗೆ ಕೇವಲ ೫೩ ಸಾವಿರ ಎಕರೆ ಭೂಮಿ ನೀಡಲು ಹಿಂದೇಟು ಹಾಕುವುದು ಖೇದಕರ.
ಹೋರಾಟಗಾರರ ಸಭೆಯಲ್ಲಿ ಜಿಲ್ಲಾ ಸಂಚಾಲಕ ಮಾಬ್ಲೇಶ್ವರ ನಾಯ್ಕ ಸ್ವಾಗತಿಸಿದರು. ಅಭಿಪ್ರಾಯವನ್ನು ಹಿರಿಯ ಹೋರಾಟಗಾರರಾದ ಎನ್ ವಿ ಹೆಗಡೆ ಮುತ್ತಿಗೆ, ಕೆಟಿ ನಾಯ್ಕ ಹೇಗ್ಗೆರಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮಕೃಷ್ಣ ನಾಯ್ಕ ಶಿರೂರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್ ಆರ್ ಹೆಗಡೆ ಕುಂಬಾರಕುಳಿ, ಲೋಹಿತ್ ಆರ್ ನಾಯ್ಕ ಬಿಳ್ಳುಮನೆ, ಮಂಜುನಾಥ ಹೆಗಡೆ ಗುಂಜಗೋಡ, ಗೋವಿಂದ ಗೌಡ ಕಿಲವಳಳ್ಳಿ  ಮಂಡಿಸಿದರು. ಎನ್ ಎಸ್ ನಾಯ್ಕ ನರಮುಂಡಗಿ ವಂದಿಸಿದರು. ಬಿ ಡಿ ನಾಯ್ಕ ಕುರಗೆತೋಟ, ದಿನೇಶ್ ನಾಯ್ಕ ಬೆಡ್ಕಣಿ, ದಿವಾಕರ್ ಕ್ಯಾದಗಿ, ನಾಗರಾಜ ಮರಾಠಿ, ಹೇಮಂತ ಹುಕ್ಕಳೆಗದ್ದೆ, ದಿನೇಶ್ ನಾಯ್ಕ ಹಾರ್ಸಿಕಟ್ಟ, ರಾಮಚಂದ್ರ ನಾಯ್ಕ ತ್ಯಾಗಲಮನೆ, ಚಂದ್ರಕಾಂತ ನಾಯ್ಕ ಗುಳ್ಳುಮನೆ, ಉಮೇಶ್ ನಾಯ್ಕ ಶೇಲೂರು, ಹಾಜೀರಾ ಬೇಗಂ ಕಾನಗೋಡ, ಶಿವಾನಂದ ನಾಯ್ಕ, ಅಬ್ದುಲ್ ಸುಭಾನ, ಸುಭಾಷ್ ನಾಯ್ಕ ಹೊಸಗದ್ದೆ ಚರ್ಚೆಯಲ್ಲಿ ಭಾಗವಹಿಸಿದರು.
 

ಫೇಬ್ರವರಿ ೨ ಕ್ಕೆ ಚಾಲನೆ:
   ಸಮಗ್ರವಾಗಿ ಅಘನಾಶಿನಿ ಏತ ನೀರಾವರಿ ಯೋಜನೆ ಸ್ಥಗಿತಗೊಳಿಸಲು ವ್ಯಾಪಕ ಹೋರಾಟದ ರೂಪು ರೇಷೆಗಳನ್ನು ನಿರ್ಧರಿಸಲಾಗಿದ್ದು, ಯೋಜನೆಗೆ ವಿರೋಧ ಫೇ.೨ ರಂದು ಅನಲೇಬೈಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಳಿಮಕ್ಕಿ ಬೈಲು ಮಂದಿರದಲ್ಲಿ ಸಭೆ ಹಾಗೂ ತದನಂತರ ಬಾಳೆಕೊಪ್ಪ ಗ್ರಾಮದ ಅಘನಾಶಿನಿ ನದಿಯವರೆಗೂ ಪಾದಯಾತ್ರೆ ಹಮ್ಮೀಕೊಳ್ಳಲಾಗಿದೆ ಎಂದು ಅದ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.  


What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0