RSS ಎಂಬ ಎಲೆಮರೆಕಾಯಿ: ಪಶ್ಚಿಮ ಬಂಗಾಳದ ರಿಯಲ್ ಇಂಪ್ಯಾಕ್ಟ್ ಪ್ಲೇಯರ್...

May 5, 2026 - 12:16
 0  89
RSS ಎಂಬ ಎಲೆಮರೆಕಾಯಿ: ಪಶ್ಚಿಮ ಬಂಗಾಳದ ರಿಯಲ್ ಇಂಪ್ಯಾಕ್ಟ್ ಪ್ಲೇಯರ್...
ಬರಹ : ಸುಧೀರ್ ಸಾಗರ್

*****

ಒಂದು ರೇಸ್ ಪಂದ್ಯಾವಳಿ ನಡೀತಾ ಇದೆ...
ನೂರು ಮೀಟರ್ ಓಟದ ಸ್ಪರ್ಧೆ ಅದು.

ಒಬ್ಬಾತ ಪ್ರಾರಂಭದ ಗೆರೆಯಲ್ಲಿ ನಿಂತಿದ್ರೆ, ಅವನ ಎದುರಾಳಿ ಸ್ಪರ್ಧಿ ನೋಡಿದ್ರೆ, ಫೈನಲ್ ಗೆರೆಯಿಂದ ಜಸ್ಟ್ 15ಮೀಟರ್ ಹಿಂದೆ ನಿಂತಿದಾನೆ. ಈಗ ಹೇಳಿ ನೋಡೋಣ, ಈ ರೇಸ್ ಯಾರು ಗೆಲ್ಲಬಹುದು?

ರೇಸ್ ಶುರುವಾಗೋ ಮೊದಲೇ....

ಪಲಿತಾಂಶ ಆಲ್ರೆಡೀ ನಿರ್ಧಾರವೇ ಆಗೋಗಿರುವಂತಾ ಇಂತಾದ್ದೊಂದು ರೇಸಲ್ಲೂ ಕೂಡಾ,

ಎದುರಾಳಿಯನ್ನು ಹಿಂದಿಕ್ಕಿ ಮಣ್ಣುಮುಕ್ಕಿಸಿ ಗೆದ್ದು ಕಪ್ ಎತ್ತೋದಿದ್ಯಲ್ಲಾ? ಅದು ಶತಮಾನಕ್ಕೊಮ್ಮೆ ನಡೆಯೋ ವಿಸ್ಮಯ. ಇಂತಾದ್ದೊಂದು ವಿಸ್ಮಯವೊಂದು ಈ ಸಲದ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿಯೂ ನಡೆದುಹೋಗಿದೆ...

ಯಾಕೆ ಹೇಳ್ತಿದೀನಿ ಅಂದ್ರೆ...

ಪಶ್ಚಿಮಬಂಗಾಳದಲ್ಲಿ 50%ಗಿಂತಲೂ ಅಧಿಕ ಮುಸ್ಲಿಂ ಮತದಾರರೇ ಇರೋ ಮಿನಿ ಬಾಂಗ್ಲಾದೇಶದಂತಾ ಸುಮಾರು ಜಿಲ್ಲೆಗಳಿವೆ. ಅದರಲ್ಲೂ,
ಮುರ್ಷಿದಾಬಾದ್ (66%+), ಮಾಲ್ಡಾ(51%+), ಉತ್ತರ ದಿನಜಪುರ್(50%+), ದಕ್ಷಿಣ 24 ಪರಗಣ(36%+) ಹಾಗೂ ಬಿರ್ಬಮ್(37%+), ಈ ಐದು ಜಿಲ್ಲೆಗಳಲ್ಲೇ ಬರೋಬ್ಬರಿ 89 ಕ್ಷೇತ್ರಗಳಿವೆ, ಇದರಲ್ಲಿ ಮಿನಿಮಮ್ 85ಸೀಟು TMCಗೇ ಫಿಕ್ಸು, ಹಾಗಾಗಿ ಚುನಾವಣೆಯಲ್ಲಿ TMCಯ ಕೌಂಟಿಂಗ್ ಶುರುವಾಗ್ತಿದ್ದಿದ್ದೇ 85ರಿಂದ...
ಇಂತಾದ್ದೊಂದು....
50-60% ಮುಸ್ಲಿಮ್ ಮತದಾರರಿರೋ ಮಿನಿ ಬಾಂಗ್ಲಾದೇಶಗಳಲ್ಲೂ ಕೂಡಾ,
ಬಿಜೆಪಿಗೆ ಅದ್ಯಾವ್ ರೇಂಜಿಗೆ, SC ST, ಮತುವಾ ಸೇರಿದಂತೆ ಅಷ್ಟೂ ಹಿಂದೂಗಳ ಮತಗಳು ಧ್ರುವೀಕರಣ ಆಗೋಗಿದೆ ಅಂದ್ರೆ,
ಬರೋಬ್ಬರಿ 66%+ ಮುಸ್ಲಿಂ ಮತದಾರರೇ ಇರೋ ಮುರ್ಷಿದಾಬಾದ್ ಜಿಲ್ಲೆಯಲ್ಲಿಯೂ ಕೂಡಾ 22ಕ್ಷೇತ್ರಗಳಲ್ಲಿ 8ಕ್ಷೇತ್ರ ಬಿಜೆಪಿ ಗೆದ್ದು ಬೀಗಿದೆ. ಇದೊಂದೇ ಅಲ್ಲ...
51%+ ಇರೋ ಮಾಲ್ಡಾದಲ್ಲಿ 12ರಲ್ಲಿ 6 ಕ್ಷೇತ್ರ,
50%+ ಇರೋ ಉತ್ತರ ದಿನಜಪುರದಲ್ಲಿ 9ಕ್ಕೆ ನಾಲ್ಕು, 37%+ ಇರೋ ಬಿರ್ಬಮಲ್ಲಿ 11ರಲ್ಲಿ 6 ಹಾಗೂ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿಯೂ 31ರಲ್ಲಿ ಬರೋಬ್ಬರಿ 11 ಕ್ಷೇತ್ರ ತನ್ನದಾಗಿಸಿಕೊಂಡಿದೆ.
ಮತ್ತೊಂದ್ ಮಜಾ ಏನ್ ಗೊತ್ತಾ?
ಈ ಜಿಲ್ಲೆಯೊಳಗೇ ಮಮತಾ ಬ್ಯಾನರ್ಜಿಯ ಅಳಿಯ ಅಭಿಷೇಕ್ ಬ್ಯಾನರ್ಜಿಯ ( ಓಪನ್ನಾಗೇ ಧಮಕೀ ಹಾಕ್ತಿದ್ನಲ ಅವನೇ) ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರವಿರೋದು & ಇದರಲ್ಲೇ 7 ವಿಧಾನಸಭಾ ಕ್ಷೇತ್ರಗಳಿವೆ,ಇದರಲ್ಲೂ ಮೂರು ಕ್ಷೇತ್ರ ಗೆಲ್ಲುವಂತಹಾ...
ನ ಭೂತೋ ನ ಭವಿಷ್ಯತಿ..
ಅನ್ನುವಂತಾ ನಂಬಲಸಾಧ್ಯವಾದ ಇಂತಾದ್ದೊಂದು ಶತಮಾನದ ವಿಸ್ಮಯವೊಂದಕ್ಕೆ ಕಾರಣವಾಗಿದ್ದೇ ಹೆಸರಿನ ಹಂಗಿಲ್ಲದ ನಿಸ್ವಾರ್ಥ ಸೇವೆಯ ಸಾವಿರಾರು RSS ಕಾರ್ಯಕರ್ತರು...
ತಿಂಗಳುಗಟ್ಲೇ ಇವರೆಲ್ಲಾ...
ಪಶ್ಚಿಮ ಬಂಗಾಳದ ಉದ್ದಗಲಕ್ಕೂ ಇಂಚಿಂಚೂ ಬಿಡದಂತೆ, ಸರಿಯಾದ್ದೊಂದು ರಸ್ತೆ ಸಂಪರ್ಕವೂ ಇಲ್ಲದಂತಹ, ಊರು ಕೇರಿ ಹಳ್ಳಿ ದ್ವೀಪಗಳನ್ನೂ ತಲುಪಿ, ಸಿಕ್ಕ ಹತ್ತಿಪ್ಪತ್ತು ಜನರನ್ನೂ ಒಗ್ಗೂಡಿಸಿ ಎಂತೆಂತಾ ದೌರ್ಜನ್ಯಗಳಾಗ್ತಿವೆ, ನಮ್ಮ ವಿಭಜನೆಯಿಂದ ಏನೆಲ್ಲಾ ಅತ್ಯಾಚಾರ ಅನಾಚಾರಗಳಾಗ್ತಿವೆ ಅನ್ನೋದನ್ನು ಸಾಕ್ಷಿ ಸಮೇತ ವಿವರಿಸುತ್ತಾ,‌
ಹೋದವರು ಮರಳಿ ಬರೋದೂ ನಂಬಿಕೆಯಿಲ್ಲದಂತಹಾ ಜಾಗಗಳಲ್ಲೂ ಕೂಡಾ ಅನ್ನ ನೀರೂ ಮರೆತು ಜೀವದ ಹಂಗುತೊರೆದು ಜನರನ್ನು ಒಗ್ಗೂಡಿಸೋ, ಜಾಗೃತಿ ಮೂಡಿಸೋ ಕಾರ್ಯವನ್ನು ಅದೆಷ್ಟು ಆಸ್ಥೆ ನಿಷ್ಠೆಯಿಂದ ಮಾಡಿಬಿಟ್ರು ಅಂದ್ರೆ,
ಈ ಚುನಾವಣೆಯ ಪ್ರಯುಕ್ತ ಕಾರ್ಯಕರ್ತರು ನಡೆಸಿದ ಇಂತಾ ಸಭೆಗಳ ಸಂಖ್ಯೆಯೇ ಹತ್ರತ್ರ ಬರೋಬ್ಬರಿ ಎರಡು ಲಕ್ಷಗಳಷ್ಟು ಅಂದ್ರೆ ಇದರ ಅಗಾಧತೆ ಎಂತದ್ದೋ ಜಸ್ಟ್ ಇಮ್ಯಾಜಿನ್...
ಅದರ ಪರಿಣಾಮವೇ...
30%+ ಮುಸ್ಲಿಂ ಮತದಾರರಿರೋ ಉತ್ತರ 24 ಪರಗಣ ಜಿಲ್ಲೆಯ 33ಕ್ಷೇತ್ರದಲ್ಲಿಯೂ ಕೂಡಾ ಬರೊಬ್ಬರಿ 22ಕ್ಷೇತ್ರ ಗೆಲ್ಲೋ ಮುಖಾಂತರ, ಜಾತಿಗಳ ನಡುವೆ ಮತ ವಿಭಜನೆಯಾಗದೆ ಧರ್ಮದ ಅಡಿಯಲ್ಲಿ ಹಿಂದೂ ಒಂದಾದಲ್ಲಿ, ಸಾಮಾನ್ಯ ಕಾರ್ಯಕರ್ತನೂ ಮನಸ್ಸು ಮಾಡಿದಲ್ಲಿ ಎಂತಹ ಕ್ಷೇತ್ರಗಳನ್ನೂ ಗೆಲ್ಲಿಸಿಬಿಡಬಹುದು ಅನ್ನೋದಕ್ಕೊಂದು ಉದಾಹರಣೆ ಪಶ್ಚಿಮ ಬಂಗಾಳದ ಚುನಾವಣೆ..
ಇಂತಾದ್ದೊಂದು ಗೆಲುವಷ್ಟೇ ಅಲ್ಲ...
ದಶಕಗಳಿಂದ ಸಾವಿನ ಭಯದಲ್ಲೇ ನರಳುತ್ತಿದ್ದ ಪಶ್ಚಿಮ ಬಂಗಾಳದ ಹಿಂದೂಗಳು ನಿರಾಳತೆಯ ನಿಟ್ಟುಸಿರು ಬಿಡುವಂತೆ ಮಾಡಿದ, ಸಂಘದ ಅಷ್ಟೂ ಎಲೆಮರೆಕಾಯಿಯಂತಿರೋ ಸಾವಿರಾರು ಸ್ವಯಂ ಸೇವಕರಿಗೂ ಶಿರಸಾಷ್ಟಾಂಗ ಪ್ರಣಾಮಗಳು. 🙏
ಇಂತಾದ್ದೊಂದು ಮಹಾಕಾರ್ಯದಲ್ಲಿ ನಮ್ಮ ಕರ್ನಾಟಕದ ಹುಡುಗರೂ ಇದ್ರೂ ಅನ್ನೋದು ಮತ್ತೂ ಹೆಮ್ಮೆಯ ಸಂಗತಿ ನಂಗಂತೂ...❤
ಸಂಘೇ ಶಕ್ತಿಃ ಕಲಿಯುಗೇ
ಸಂಗತಂ ಶಕ್ತಿಃ ❤

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0