ಆಡಳಿತಾಧಿಕಾರಿ ದಮನಕಾರಿ ನೀತಿ ಖಂಡಿಸಿ ಟಿಎಂಎಸ್ ಉಳಿಸಿ ಹೋರಾಟ ಸಮಿತಿಯಿಂದ ರಸ್ತೆ ತಡೆ

Mar 12, 2026 - 22:00
 0  47
ಆಡಳಿತಾಧಿಕಾರಿ ದಮನಕಾರಿ ನೀತಿ ಖಂಡಿಸಿ ಟಿಎಂಎಸ್ ಉಳಿಸಿ ಹೋರಾಟ ಸಮಿತಿಯಿಂದ ರಸ್ತೆ ತಡೆ

ಆಪ್ತ ನ್ಯೂಸ್ ಯಲ್ಲಾಪುರ:

ಇಲ್ಲಿಯ ಮಾರ್ಕೆಟಿಂಗ್ ಸೊಸೈಟಿಯಲ್ಲಿ ಆಡಳಿತಾಧಿಕಾರಿ ದಮನಕಾರಿ ನೀತಿಯನ್ನು ಖಂಡಿಸಿ ಟಿಎಂಎಸ್ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ರಸ್ತೆ ತಡೆ‌ನಡೆಸಿ ಪ್ರತಿಭಟನೆ ನಡೆಸಿ ಸಹಕಾರ ಇಲಾಖೆಯ ಅಧಿಕಾರಿ ಗೆ ಮನವಿ ಸಲ್ಲಿಸಲಾಯಿತು.

ಬೆಳಿಗ್ಗೆ ೧೧ ಗಂಟೆಗೆ ಬಸ್ ನಿಲ್ದಾಣ ವೃತ್ತದಲ್ಲಿ ರೈತರು ಜಮಾಯಿಸಿ ರಸ್ತೆಯಲ್ಲಿ ಪ್ರತಿಭಟನೆಗೆ ಕುಳಿತರು. ಆಡಳಿತಾಧಿಕಾರಿಯ ಕಾರ್ಯವೈಖರಿ ವಿರುಧ್ದ ಜಮಾಯಿಸಿದ್ದ ಸದಸ್ಯರು ಹಲವರು ಆಕ್ರೋಶವ್ಯಕ್ತಪಡಿಸಿದರು.


ಟಿಎಂಎಸ್ ಮಾಜಿ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಸಿಕುಂಬ್ರಿ ಮಾತನಾಡಿ,ರೈತರು ಕಟ್ಟಿಕೊಂಡ ಸಂಸ್ಥೆಯನ್ನು ತಮ್ಮ ಕೈಗೊಂಬೆಯಾಗಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಟಿಎಂಎಸ್ ಜಾಗವನ್ನು ನುಂಗ ಹೊರಟವರು ಈಗ ಟಿಎಂಎಸ್ ವ್ಯವಸ್ಥೆ ಹದಗೆಡಿಸಲು ಸಂಚು ರೂಪಿಸಿದ್ದಾರೆ ಎಂದು ಪರೋಕ್ಷವಾಗಿ ಶಾಸಕರ ಮೇಲೆ ಹರಿಹಾಯ್ದರು. 

ನಿರ್ದೇಶಕ ವೆಂಕಟ್ರಮಣ ಬೆಳ್ಳಿ ಮಾತನಾಡಿ ಈ ರೀತಿ ಸೊಸೈಟಿ ಮೇಲೆ ಆಡಳಿತಾಧಿಕಾರಿ ಮೂಲಕ ದರಬಾರು ನಡೆಸಲು ಹೊರಟಿದ್ದಾರೆ.ಇವರಿಗೆ ನಾಚಿಕೆಯಾಗಬೇಕು.ಎಲ್ಲವೂ ತನ್ನ‌ ಕಪಿಮುಷ್ಠಿಯಲ್ಲಿ ಬರಬೇಕೆನ್ನುವ ದುರಹಂಕಾರದಿಂದ ಉತ್ತಮ ಸಹಕಾರಿ ಸಂಘಗಳು ಹಾಳಾಗುವಂತಾಗಿದೆ.ಜನ ಗೊಂದಲದಲ್ಲಿ ಬೀಳುವಂತಾಗಿದೆ ಎಂದರು.ಜಿ.ಪಂ.ಮಾಜಿ ಸದಸ್ಯ ರಾಘವ ಭಟ್ಟ ಮಾತನಾಡಿ ಠರಾವು ನಿರ್ಣಯಿಸುವ ಅಧಿಕಾರ ಆಡಳಿತಾಧಿಕಾರಿಗೆ ಕೊಟ್ಟವರಾರು? ಠರಾವು ಪುಸ್ತಕ ಹೇಗೆ ಹೊರಗೆ ಹೋಯಿತು? ಇದಕ್ಕೆ ಅವಕಾಶ ವಿದೆಯೇ ಎಂದು ಪ್ರಶ್ನಿಸಿದರು.

ಪ್ರಸಾದ ಹೆಗಡೆ ಮಾತನಾಡಿ ಈ ಷಡ್ಯಂತ್ರದ ಹಿಂದೆ ಶಾಸಕರ ಮುಖ್ಯ ಪಾತ್ರವಿದೆ ಎಂದು ಆರೋಪಿಸಿದರು.

ಹಿರಿಯ ಸಹಕಾರಿ ಪ್ರಮೋದ ಹೆಗಡೆ ಮಾತನಾಡಿ ರೈತರ ಜೀವ ಹಿಂಡುವ ಕೆಲಸ ಆಗಬಾರದು. ಕಾನೂನು ಮೀರಿ ಆಡಳಿತಾಧಿಕಾರಿ ನಡೆದುಕೊಂಡಿದ್ದು ತಪ್ಪು.ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು.ಮಾರ್ಚ ಬಂತೆಂದರೆ ರೈತರು ಸಾಲ ಇನ್ನಿತರ ಸಮಸ್ಯೆಯಲ್ಲಿ ಇರುತ್ತಾರೆ.ಅದನ್ನು ಬಗೆಹರಿಸುವವರು ಯಾರು? ಎಂದು ಪ್ರಶ್ನಿಸಿದರು.ಮನವಿ ಸ್ವೀಕರಿಸಿದಸಹಕಾರಿ ಇಲಾಖೆಯ ಉಪ ನಿಬಂಧಕರು ಸಂಜೆಯೊಳಗೆ ಆಡಳಿತಾಧಿಕಾರಿ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಅದಕ್ಕೂ ಪೂರ್ವದಲ್ಲಿ ಅವರ ವರ್ಗಾವಣೆ ತನ್ನ ವ್ಯಾಪ್ತಿಯದಲ್ಲ ಎಂದಾಗ ಸೇರಿದ್ದ ರೈತರು ತಾವು ತಮ್ಮನ್ನು ಇಲ್ಲಿಮದ ಹೋಗಲೂ ಬಿಡುವುದಿಲ್ಲ.ನಮ್ಮ ಬೇಡಿಕೆ ಈಡೇರಿಸಲೇಬೇಕು ಎಂದು ಪಟ್ಟು ಹಿಡಿದರು. ನಂತರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಧರಣಿಯಲ್ಲಿ ಪ್ರಸಾದ ಹೆಗಡೆ,ವೆಂಕಟ್ರಮಣ ಓಂಕಾರ ಭಟ್ಟ,ಸುಬ್ಬಣ್ಣ ದಾನ್ಯಾಕೊಪ್ಪ ನಾಗರಾಜ ಕವಡಿಕೇರಿ,ಗೋಪಾಲಕೃಷ್ಣ ಗಾಂವ್ಕಾರ್,ಸುಬ್ವಣ್ಣ ಉದ್ದಾಬೈಲ್,ಕೆ.ಟಿ.ಹೆಗಡೆ,ರಾಮಕೃಷ್ಣ ಅಳವೆಗದ್ದೆ,ನಟರಾಜ ಗೌಡರ್,ಅಪ್ಪು ಆಚಾರಿ,ರವಿ ಕೈಟಕರ್,ಮಹೇಶ ಗಾಂವ್ಕಾರ್,ಭಾಗಿನಕಟ್ಟಾ .ವೃತ್ತದಲ್ಲಿ ಸುಮಾರು ಒಂದುವರೆ ತಾಸುಕಾಲ ರಸ್ತೆ ತಡೆ ನಡೆಸಿದರು.ಸಿಪಿಐ ರಮೇಶ ಹಾನಾಪುರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ ಏರ್ಪಡಿಸಲಾಗಿತ್ತು.
ಸಂಜೆಯೊಳಗೆ ಕ್ರಮವಾಗದಿದ್ದಲ್ಲಿ ಶುಕ್ರವಾರ ಪುನಃ ಪ್ರತಿಭಟನೆಗೆ ಇಳಿಯುವದಾಗಿ  ಸಮಿತಿಯವರುತಿಳಿಸಿದ್ದಾರೆ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0