ಶಿರಸಿಯಲ್ಲಿ ಯುವಕರ ಪರಸ್ಪರ ಹೊಡೆದಾಟ: 8 ಮಂದಿಯ ವಿರುದ್ಧ ಪೊಲೀಸ್ ಪ್ರಕರಣ ದಾಖಲು

Aug 2, 2026 - 19:54
 0  338
ಶಿರಸಿಯಲ್ಲಿ ಯುವಕರ ಪರಸ್ಪರ ಹೊಡೆದಾಟ: 8 ಮಂದಿಯ ವಿರುದ್ಧ ಪೊಲೀಸ್ ಪ್ರಕರಣ ದಾಖಲು

ಆಪ್ತ ನ್ಯೂಸ್ ಶಿರಸಿ:

ನಗರದ ಸಾರ್ವಜನಿಕ ಸ್ಥಳದಲ್ಲಿ ಯುವಕರ ಗುಂಪೊಂದು ಪರಸ್ಪರ ಬಡಿದಾಡಿಕೊಂಡ ಘಟನೆ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ 8 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿ ಮಂಜುನಾಥ ಬಸವರಾಜ ಜಗ್ಲೇರ, ಗಿರೀಶ ಚಂದ್ರಶೇಖರ ದೇವಾಡಿಗ, ಗಣೇಶ ಯೋಗೇಂದ್ರ ಮಡಿವಾಳ, ನಾಗರಾಜ ಪರಶುರಾಮ ತಳವಾರ, ಮಾರುತಿ ಪರಶುರಾಮ ತಳವಾರ, ಮಯೂರ ಶೇಖರ ಉಪ್ಪಾರ, ವಿನಾಯಕ ನರಸಿಂಹ ದೇವಾಡಿಗ ಹಾಗೂ ಚರಣ ವಿನೋದ ಭಂಡಾರಿ ವಿರುದ್ಧ ದೂರು ದಾಖಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ನಗರದ ಬಿಡಕಿ ಬೈಲ್ ಸಮೀಪದ ಸರ್ಕಲ್‌ನಲ್ಲಿ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದರು. ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ಸರ್ಕಾರದ ಪರವಾಗಿ ಶಿರಸಿ ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ (ಎಎಸ್‌ಐ) ನೆಲ್ಸನ್ ಆರ್. ಮೆಂಟೆರೊ ಅವರು ದೂರು ದಾಖಲಿಸಿದ್ದು, ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0