ಶರಾವತಿ ಕಣಿವೆ ಉಳಿಸಿ ಚಳುವಳಿಗೆ ವೃಕ್ಷ ಲಕ್ಷ ಆಂದೋಲನದಿಂದ ಆಗ್ರಹ ಅಭಿಯಾನ

ಶರಾವತಿ ಕಣಿವೆ ಉಳಿಸಿ ಚಳುವಳಿಗೆ ಬಲ ಸಿಕ್ಕಿದೆ. ಪಂಪ್ ಸ್ಟೋರೇಜ್ ಯೋಜನೆಗೆ ಅರಣ್ಯ ಅನುಮತಿ ರದ್ದು ಮಾಡಲು ಭಾರತ ಸರ್ಕಾರಕ್ಕೆ ವೃಕ್ಷ ಲಕ್ಷ ಆಂದೋಲನದಿAದ ಆಗ್ರಹ ಅಭಿಯಾನ. ವಿವಿಧ ಸಂಘ ಸಂಸ್ಥೆಗಳಿAದ ಹೊನ್ನಾವರ ಶರಾವತಿ ಉಳಿಸಿ ಸಮಾವೇಶಕ್ಕೆ ಬೆಂಬಲ.

Mar 11, 2026 - 12:37
 0  32
ಶರಾವತಿ ಕಣಿವೆ ಉಳಿಸಿ ಚಳುವಳಿಗೆ ವೃಕ್ಷ ಲಕ್ಷ ಆಂದೋಲನದಿಂದ ಆಗ್ರಹ ಅಭಿಯಾನ
ಆಪ್ತ ನ್ಯೂಸ್‌ ಶಿರಸಿ:
೨೦೧೯ ರಲ್ಲಿ ಸಮೀಕ್ಷಾ ಹಂತದಲ್ಲೇ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಸ್ಥಳದಲ್ಲೇ ವಿರೋಧ ವ್ಯಕ್ತ ಪಡಿಸಿದ್ದೆವು. ಇದೀಗ ಕೇಂದ್ರ ವನ್ಯ ಜೀವ ಮಂಡಳಿ ತಜ್ಞ ಸಮೀತಿ ನೀಡಿದ ವಿಸ್ತೃತ ವರದಿ ರಾಜ್ಯ & ಕೇಂದ್ರ ಸರ್ಕಾರದ ಅರಣ್ಯ ಪರಿಸರ ಮಂತ್ರಾಲಯಗಳಿಗೆ ಎಚ್ಚರಿಕೆಯ ಘಂಟೆ ಆಗಿದೆ. ಇದೇ ಅಭಿಪ್ರಾಯಗಳನ್ನು ೧೦೦೦೦ ಜನರು, ವಿಜ್ಞಾನಿಗಳು, ಸಾರ್ವಜನಿಕ ಅಹವಾಲು ಸಭೆಯಲ್ಲಿ ನೀಡಿದ್ದರು. ಇದೀಗ ಕೇಂದ್ರ ಸರ್ಕಾರದ ತಜ್ಞರ ಸಮೀತಿ ನೀಡಿದ ವರದಿಯನ್ನು ಅರಣ್ಯ-ಪರಿಸರ ಮಂತ್ರಾಲಯ ಪುರಸ್ಕರಿಸಬೇಕು. ಪಶ್ಚಿಮ ಘಟ್ಟದ ಹೃದಯ ಭಾಗವಾದ ಶರಾವತಿ ಕಣಿವೆ ಉಳಿವಿಗೆ ಅರಣ್ಯ ಪರಿಸರ ಸಚಿವ ಶ್ರೀ ಭೂಪೇಂದ್ರ ಯಾದವ ಮುಂದಾಗಬೇಕು ಎಂದು ವೃಕ್ಷ ಲಕ್ಷ ಆಂದೋಲನ ಸೇರಿದಂತೆ ಹಲವು ಪರಿಸರ ಸಂಘ ಸಂಸ್ಥೆಗಳು, ವಿಜ್ಞಾನಿಗಳು, ಧಾರ್ಮಿಕ-ಸಾಮಾಜಿಕ ರಾಜಕೀಯ ಮುಖಂಡರು ಆಗ್ರಹ ಮಾಡಿದ್ದಾರೆ.
ಮಾಹಿತಿ ಹಕ್ಕಿನಡಿ ತಜ್ಞರ ವರದಿ ಪಡೆದು ಬಹಿರಂಗ ಪಡೆಸಿದ ವನ್ಯ ಜೀವಿ ಹೋರಾಟಗಾರರ ಗಿರಿಧರ ಕುಲಕರ್ಣಿ ಅವರನ್ನು ವನ್ಯ ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಶ್ಲಾಘಿಸಿದ್ದಾರೆ.
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣ ಸಮೀತಿ ನೇತೃತ್ವದಲ್ಲಿ ದೆಹಲಿಗೆ ಹೋಗಿ ಅರಣ್ಯ ಸಚಿವರನ್ನು ಭೇಟಿಮಾಡಿದ ಸಂದರ್ಭದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಸೇರಿದಂತೆ ಶಾಸಕರು,  ವನ್ಯಜೀವಿ-ಪರಿಸರ ತಜ್ಞರು ಶರಾವತಿ ಕಣಿವೆ & ಜನತೆ ಮೇಲೆ ಆಗಲಿರುವ ಗಂಭಿರ ದುಷ್ಪರಿಣಾಮಗಳ ಬಗ್ಗೆ ಗಮನ ಸೇಳೆಯಲಾಗಿತ್ತು ಎಂಬುದನ್ನು ಕೇಂದ್ರ ಸಚಿವರಿಗೆ ಪರಿಸರ ಕಾರ್ಯಕರ್ತರು ನೆನಪು ಮಾಡಿದ್ದಾರೆ.
ಭೂಕುಸಿದ, ವನ್ಯಜೀವಿ ಅತಂತ್ರ, ಬೃಹತ-ಯೋಜನೆಗಳ ಭಾರ, ಉಪ್ಪುನೀರು ನದಿಯಲ್ಲಿ ಮೇಲಕ್ಕೆ ನುಗ್ಗುವಿಕೆ, ಅಭಯಾರಣ್ಯ ಛಿದ್ರ ಹೀಗೆ ಹಲವು ಸಂಗತಿಗಳನ್ನು ಶರಾವತಿ ಕಣಿವೆ ಉಳಿಸಿ ಹೋರಾಟಗಾರರು ಪುನಃ ಎತ್ತಿ ಹೇಳಿದ್ದಾರೆ.
ರಾಜ್ಯ ಸರ್ಕಾರದ ಅರಣ್ಯ-ಪರಿಸರ ಸಚಿವ ಶ್ರೀ ಈಶ್ವರ ಖಂಡ್ರೆಯವರು ಶರಾವತಿ ಕಣಿವೆಗೆ ಭೇಟಿ ನೀಡಬೇಕು ೨೦೨೩ ರಲ್ಲೇ ಒತ್ತಾಯ ಮಾಡಿದ್ದೆವು ಎಂಬುದನ್ನು ನೆನಪಿಸಿ ಅವರಿಗೆ ಪ್ರೊ| ಬಿ.ಎಂ ಕುಮಾರ ಸ್ವಾಮಿ ಅಧ್ಯಕ್ಷರು ಪರ್ಯಾವರಣ ಶಿವಮೊಗ್ಗಾ ಅವರು ಪತ್ರ ಬರೆದಿದ್ದಾರೆ.
ಹಸಿರು ಸ್ವಾಮೀಜಿ ಎಂದೇ ಖ್ಯಾತರಾದ ಪೂಜ್ಯ ಸೋಂದಾ ಸ್ವರ್ಣವಲ್ಲಿ ಸ್ವಾಮೀಜಿ ಅವರು ರಾಜ್ಯ&ಕೇದ್ರ ಸರ್ಕಾರಗಳಿಗೆ ಪತ್ರ ಬರೆದು ತಜ್ಞರ ವರದಿಗೆ ಒಪ್ಪಿಗೆ ನೀಡಿ ಎಂದು ಅಗ್ರಹ ಮಾಡಿದ್ದಾರೆ.
ಕರ್ನಾಟಕ ಪವರ ಕಾರ್ಪೋರೇಶನ ಸತತವಾಗಿ ಅರಣ್ಯ ಕಾಯಿದೆಗಳನ್ನು ಉಲ್ಲಂಘೀಸುತ್ತದೆ. ಎಂಬುದನ್ನು ರಾಜ್ಞ ಅರಣ್ಯ ಇಲಾಖೆ ಗೊತ್ತಿದ್ದೂ ತಣ್ಣಗೆ ಕುಳಿತಿದೆ ಎಂದು ವೃಕ್ಷ ಆಂದೋಲನದ ಸಂಚಾಲಕರಾದ ಶ್ರೀಪಾದ ಬಿಚ್ಚುಗತ್ತಿ ಮತ್ತು ಕೆ.ವೆಂಕಟೇಶ್ ಎತ್ತಿ ಹೇಳಿದ್ದಾರೆ.
ವನ್ಯ ಜೀವಿ ತಜ್ಞ ಡಾ|| ಬಾಲಚಂದ್ರ ಸಾಯಿಮನೆ ಅವರು ಭಾರತ ಸರ್ಕಾರದ ಅರಣ್ಯ ಕಾರ್ಯದರ್ಶಿ ಮುಂದೆ ಶರಾವತಿ ಕಣಿವೆ ಬಗ್ಗೆ ಪವರ್ ಪಾಂಯಿAಟ್ ಮಂಡನೆ ಮಾಡಿದ್ದನ್ನು ನೆನಪಿಸಿ ಬೇಡ್ತಿ ಅಘನಾಶಿನಿ ಸಮಿತಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ಕೇಂದ್ರ ವನ್ಯಜೀವಿ ತಜ್ಞರ ಸಮೀತಿ ನೀಡಿದ ಸಮಗ್ರ ವರದಿ ಬಗ್ಗೆ ರಾಜ್ಯ ಅರಣ್ಯ ಇಲಾಖೆಯ ವನ್ಯ ಜೀವಿ ಮುಖ್ಯಸ್ಥರ ಗಮನ ಸೆಳೆದಿರುವ ಜೀವವೈವಿಧ್ಯ ತಜ್ಞ ಡಾ|| ಕೇಶವ ಕೂರ್ಸೆ ಅವರು ತುರ್ತಾಗಿ ರಾಜ್ಞ ವನ್ಯ ಜೀವಿ ಮಂಡಳಿ ಸಭೆ ಏರ್ಪಡಿಸಿ ಎಂದು ಅಗ್ರಹ ಮಾಡಿದ್ದಾರೆ.
ಉ.ಕ.ಜಿಲ್ಲಾ ಪರಿಸರ ಸಂರಕ್ಷಣಾ ಸಮೀತಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ, ವನವಾಸಿ ಮುಖಂಡ ಶಾತಾರಾಂ ಸಿಧ್ಧಿ, ಬೇಡ್ತಿ-ಅಘನಾಶಿನಿ ಸಮೀತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಸೇರಿದಂತೆ ಹಲವು ಪರಿಸರ ಸಂಘಟನೆಗಳ ಮುಂಖAಡರು ಹೊನ್ನಾವರದ ಶರಾವತಿ ಉಳಿಸಿ ಸಮಾವೇಶಕ್ಕೆ ಬೆಂಬಲ ವ್ಯಕ್ತಮಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0