ಆಪ್ತ ನ್ಯೂಸ್ ಶಿರಸಿ:
ಆಭರಣ ಮಳಿಗೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಿ ಮಾನಹಾನಿ ಮಾಡಿದ ಆರೋಪದ ಮೇಲೆ ಪ್ರದೀಪ ಕೃಷ್ಣ ಎಲ್ಲನಕರ ಅವರು ರವೀಶ ವೆಂಕಟ್ರಮಣ ಹೆಗಡೆ ಕಾನಗೋಡ ಅವರ ವಿರುದ್ಧ ಶಿರಸಿಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ೫೦ ಲಕ್ಷ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಶಿರಸಿಯ ಇ ಪ್ರದೀಪ್ ಜ್ಯುವೆಲರ್ಸ್ ಸರಾಫ್ ಬಜಾರ್‌ನ ಸಿಂಪಿಗಲ್ಲಿ ಮಾಲೀಕ ಪ್ರದೀಪ ಅವರು ಈ ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆ ಈ ಮಳಿಗೆಯಲ್ಲಿ ಖರೀದಿಸಿದ ಚಿನ್ನ ಕಳಪೆಯಾಗಿದೆ ಎಂದು ರವೀಶ ಹೆಗಡೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿ ಅಂಗಡಿಯ ಘನತೆಗೆ ಕುಂದು ತರಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನ್ಯಾಯಾಲಯದಲ್ಲಿ O.S/9/2026 ಸಂಖ್ಯೆಯಡಿ ಪ್ರಕರಣ ದಾಖಲಾಗಿದ್ದು, ವೃತ್ತಿಪರ ಮರ್ಯಾದೆಗೆ ಧಕ್ಕೆ ತಂದಿರುವುದಕ್ಕೆ ಪರಿಹಾರವಾಗಿ ೫೦ ಲಕ್ಷ ರೂ. ನೀಡುವಂತೆ ಕೋರಲಾಗಿದೆ.