ಆನಗೋಡಿನ ಗೋಪಾಲಕೃಷ್ಣ ದೇವಸ್ಥಾನದ ಅಷ್ಟಬಂಧ ಮಹೊತ್ಸವ ಆರಂಭ
ಆಪ್ತ ನ್ಯೂಸ್ ಯಲ್ಲಾಪುರ:
ಆನಗೋಡಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಷ್ಟಬಂಧ ಮಹೊತ್ಸವ ಬುಧವಾರದಿಂದ ವಿದ್ಯಕ್ತವಾಗಿ ಆರಂಭವಾಗಿದೆ.
ಗೋಕರ್ಣದ ತಾಂತ್ರಿಕ ವಿದ್ವಾನ್ ಗಣಪತಿ ಗಜಾನನ ಹಿರೇ ವೈದಿಕತ್ವದ ನೇತೃತ್ವದಲ್ಲಿ ಬ್ರಹ್ಮಕೂರ್ಚ ಹವನ, ಮಹಾಸಂಕಲ್ಪ, ಗಣಪತಿ ಪೂಜೆ, ನಾದಿ-ಪುಣ್ಯಾಹ, ಕೌತುಕಪೂಜೆ ಕೃಚ್ಛಾಚರಣೆ, ಋತ್ವಗ್ವರಣ,ಮಧುಪರ್ಕ, ಕೌತುಕಬಂಧನ, ಅಷ್ಟಮೂರ್ತಿ ಪ್ರಾರ್ಥನೆ, ಜಲಾಧಿವಾಸ,ಯಾಗಶಾಲಾ ಪ್ರವೇಶ, ಸಪ್ತಶುದ್ದಿ, ಪ್ರಾಸಾದ ಶುದ್ದಿ, ಮಂಟಪ ಸಂಸ್ಕಾರ ಮಂಡಲ ದರ್ಶನ, ರಾಕ್ಷಘ್ನ, ವಾಸ್ತುಶಾಂತಿ, ಅಧಿವಾಸ, ಉದಕಶಾಂತಿ,ವಾಸ್ತುಬಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ರಂಜಿಸಿದ ಭಕ್ತಿಸಂಗೀತ:
ಅಷ್ಡಬಂಧ ಮಹೋತ್ಸವದ ಪ್ರಯುಕ್ತ ಸುದರ್ಶನ ಸಭಾಭವನದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.
ಹಿಂದುಸ್ಥಾನಿ ಗಾಯಕರಾದ ವಾಣಿ ರಮೇಶ ಹೆಗಡೆ,ಗಣೇಶ ಹೆಗಡೆ ನೆರ್ಲೆಮನೆ,ವಿದ್ವಾನ್ ಗಣಪತಿ ಹೆಗಡೆ ಯಲ್ಲಾಪುರ ಗಾಯನ ಹಾಗೂ ಭಕ್ತಿಸಂಗೀತ ನಡೆಸಿಕೊಟ್ಟರು.
ಇವರಿಗೆ ಗಣೇಶ ಗುಂಡ್ಕಲ್, ಪ್ರದೀಪ್ ಕೋಟೆಮನೆ ತಬಲಾ ಹಾಗೂ ಗಣಪತಿ ಹೆಗಡೆ , ಸತೀಶ ಹೆಗ್ಗಾರ್ ಹಾರ್ಮೋನಿಯಂ ಸಾಥ್ ನೀಡಿದರು.ಕೆ.ಎಸ್.ಭಟ್ಟ ಸ್ವಾಗತಿಸಿ ನಿರ್ವಹಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0