ನದಿ ತಿರುವು ವಿರೋಧಿಸಿ ಗಂಗಾಪುಜೆ - ಗಂಗಾ ಆರತಿ- ನೂರಾರು ಜನರೊಂದಿಗೆ ಶಾಸಕ ಹೆಬ್ಬಾರ ಭಾಗಿ. 

Feb 16, 2026 - 17:37
 0  126
ನದಿ ತಿರುವು ವಿರೋಧಿಸಿ ಗಂಗಾಪುಜೆ - ಗಂಗಾ ಆರತಿ- ನೂರಾರು ಜನರೊಂದಿಗೆ ಶಾಸಕ ಹೆಬ್ಬಾರ ಭಾಗಿ. 

ಆಪ್ತ ನ್ಯೂಸ್‌ ಹೆಗ್ಗಾರ (ಅಂಕೋಲಾ)

ಯಲ್ಲಾಪುರ ಹಾಗೂ ಅಂಕೋಲಾ ತಾಲುಕಾ ಗಡಿ ಭಾಗ ಹೆಗ್ಗಾರ- ಗುಳ್ಳಾಪುರ ಸೆತುವೆ ಹತ್ತಿರ ಗಂಗಾವಳಿ ನದಿಯಲ್ಲಿ ಶ್ರೀಗಳ ಸೂಚನೆಯಂತೆ ಶಿವರಾತ್ರಿಯ ದಿನವಾದ ರವಿವಾರ ಸಂಜೆ ಗಂಗಾಪೂಜೆ ,ಗಂಗಾ ಆರತಿ ಬಹು ವಿಜ್ರಂಬಣೆಯಿಂದ ನಡೆಸಲಾಯಿತು.

ಶ್ರೀಮಠದ ಸುಪರ್ಧಿಯ  ಕುಳಿನಾಡು ಹಾಗೂ ಚಿನ್ನಾಪುರ ಸೀಮೆಯ ಗಂಗಾವಳಿ ನದಿ ತಟದ,ಆಸು ಪಾಸಿನ  ಸಮಸ್ತ ನಾಗರಿಕರು ಗಂಗಾ ಆರತಿ ಹಾಗೂ ಗಂಗಾಪೂಜೆಯಲ್ಲಿ ಭಾಗವಹಿಸಿದ್ದರು. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ರವರು ಗಂಗಾಪೂಜೆಯಲ್ಲಿ ಭಾಗವಹಿಸಿ ನಮ್ಮ ನದಿ- ನಮ್ಮ ನೀರನ್ನು ನಾವು ರಕ್ಷಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

ವೇದಮೂರ್ತಿ ಗಣಪತಿ ಭಟ್ಟ ಅರಬೈಲ್ ರವರು ನದೀ ಪೂಜೆ‌ನೆರವೇರಿಸಿಕೊಟ್ಟು ನಮ್ಮ ನದಿ, ನಮ್ಮ ನೀರು ನಮ್ಮದಾಗಿಯೆ ಉಳಿಯಲಿ, ಗಂಗಾವಳಿ- ಬೇಡ್ತಿ ನದಿಗೆ ,ನದಿ ಹರಿವಿಗೆ ಯಾವುದೇ ಕಂಟಕ ಬಾರದೇ ಇರಲಿ ಎಂದು ಗಂಗಾ ಮಾತೆಯಲ್ಲಿ ಪ್ರಾರ್ಥಿಸಿಕೊಂಡರು. ನೆರೆದಿದ್ದ ನೂರಾರು ಮಾತೆಯರು ಭಗವದ್ಗೀತೆ ಪಠಣ ಮಾಡಿದರು. ಶಾಸಕ ಹೆಬ್ಬಾರ ರವರು ಪತ್ನಿ ಸಮೇತ ಗಂಗಾ ಆರತಿ ನೆರವೇರಿಸಿದರು.

ನೆರೆದಿದ್ದ ನೂರಾರು ನಾಗರಿಕರು ಗಂಗಾವಳಿ ತಟದಲ್ಲಿ ನಿಂತು ಗಂಗಾ ಮಾತೆಗೆ ಆರತಿ ಬೆಳಗಿ ಪುನೀತರಾದರು. ಗಂಗಾ ಆರತಿಯ ಸಂದರ್ಭದಲ್ಲಿ ಮಾತೆಯರೆಲ್ಲ ಸೇರಿ ಭಗವದ್ಗೀತಾ ಆರತಿ ಪಠಿಸುತ್ತ ಆರತಿ ಮಾಡಿದರು. ಶಾಸಕ ಹೆಬ್ಬಾರರು ದಂಪತಿ ಸಮೇತರಾಗಿ  ಗಂಗಾವಳಿ‌ ನದಿಗೆ ಬಾಗಿನ‌ ಅರ್ಪಿಸಿದರು. ನಾಗರಿಕರು ಗಂಗಾವಳಿ ನದಿಗೆ ಪುಷ್ಪಾರ್ಚನೆ, ಕ್ಷೀರಾಭಿಷೇಕ , ಆರತಿ ನಡೆಸಿದ ದೃಶ್ಯ, ದೀಪಗಳನ್ನು ಬೆಳಗಿಸಿ ನದಿಯಲ್ಲಿ ಬಿಟ್ಟ ಪರಿ ಮನ ಮೋಹಕವಾಗಿತ್ತು. ಸಾರ್ವಜನಿಕರೆಲ್ಲರಿಗೂ ಪೂಜಾ ಪ್ರಸಾದವನ್ನು ಸಂಚಾಲಕರು ವಿತರಿಸಿದರು

ಸ್ಥಳೀಯ ಪ್ರಮುಖರಾದ  ನಾಗಪತಿ ಹೆಗಡೆ ಕಾಗೇರಿ,  ಶ್ರೀಕಾಂತ ಶೆಟ್ಟಿ, ಆರ್ ಸಿ ಹೆಗಡೆ, ಮಾಚಣ್ಣ ಗುಳ್ಳಾಪುರ ನಾರಾಯಣ ಭಟ್ಟ  ಬಟ್ಲಗುಂಡಿ, ಗಿರೀಶ ಭಟ್ಟ ಕೋನಾಳ,ಸದಾನಂದ ಭಟ್ಟ ಹಲವಳ್ಳಿ, ವಿ.ಎನ್.ಭಟ್ಟ ಹೆಗ್ಗಾರ್, ನಾರಾಯಣ ಜಾಯಿಕಾಯಿಮನೆ, ಸುಧಾಕರ ಗುಡ್ಡೆ,ಆನಂದ್ ನಾಯ್ಕ, ಸತೀಶ್ ನಾಯ್ಕ, ದತ್ತಾತ್ರಯ ಹೆಗಡೆ ಕಣ್ಣಿಪಾಲ್, ರಾಜೇಶ್ ಹೆಗಡೆ ಕೈಗಡಿ, ಶಿವರಾಮ ಗುಡ್ಡೆಮನೆ,ರಾಘವೇಂದ್ರ ಶೆಟ್ಟಿ, ಜಿ ಆರ್ ಭಟ್ಟ ಗುಳ್ಳಾಪುರ,ಪುಟ್ಟು ಕನಕನಹಳ್ಳಿ, ಶಿವರಾಮ ಗಾಂವ್ಕಾರ್ ಕನಕನಹಳ್ಳಿ,  ಪ್ರಶಾಂತ ಗುಡ್ಡೆ ಉಪಸ್ಥಿತರಿದ್ದರು. ಅರಬೈಲ್,ಗುಳ್ಳಾಪುರ, ಕೊಡ್ಲಗದ್ದೆ, ಹೆಗ್ಗಾರ, ಹಳವಳ್ಳಿ, ಶೇವಕಾರ,ಕೈಗಡಿ, ಕಲ್ಲೇಶ್ವರ ಭಾಗದ ಎರಡನೂರರಷ್ಟು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0