ಪೊಲೀಸ್ ಇಲಾಖೆಯಿಂದ ಏಕತಾ ಓಟ

Oct 31, 2025 - 19:05
 0  15
ಪೊಲೀಸ್ ಇಲಾಖೆಯಿಂದ ಏಕತಾ ಓಟ

ಆಪ್ತ ನ್ಯೂಸ್ ಜೋಯಿಡಾ:

ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ 150ನೇ ಜನ್ಮ ದಿನವನ್ನು ತಾಲ್ಲೂಕಿನಲ್ಲಿ ಶಿಸ್ತು ಬದ್ದ ವಾಗಿ ಅಚ್ಚ ಕಟ್ಟಾಗಿ ಆಚರಿಸಲಾಯಿತು, ಮತ್ತು ಪಟೇಲರ ಆದರ್ಶ ಗಳನ್ನು ಸ್ಮರಿಸಲಾಯಿತು. ಆದರೆ ಶುಕ್ರವಾರ ಬೆಳ್ಳಮಬೆಳಿಗ್ಗೆ ಜೋಯಿಡಾದಲ್ಲಿ ಪೊಲೀಸ್ ಇಲಾಖೆ ಏಕತಾ ಓಟವನ್ನು (ಮ್ಯಾರಾಥಾನ) ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು. ತಾಲೂಕಿನ ಜನರ ಸ್ಪಂದನೆಗೆ ಕೂಡಲೇ ನೆರವಾಗುವ ಸಿಪಿಐ, ಚಂದ್ರಶೇಖರ್ ಹರಿಹರ ಪಿಎಸ್ಐ ಮಹೇಶ ಮಾಳಿ ಮತ್ತು ರಾಮನಗರ ಪಿಎಸ್ಐ ಮಹಾಂತೇಶ್ ನಾಯಕ ಇವರ ನೇತೃತ್ವದಲ್ಲಿ ಇಲಾಖೆಯ ಹಿರಿಕಿರಿಯ ಪೊಲೀಸರು ಬೆಳಿಗ್ಗೆ ಏಳು ಗಂಟೆಯಿಂದ ಏಳು ನವವತ್ತರ ವರೆಗೆ ಏಕತಾ ಓಟ ನಡೆಸಿದರು.
ಏಕತಾ ಓಟದ ಮಾರ್ಗ ಜೊಯಿಡಾ ಪೊಲೀಸ್ ಠಾಣೆಯಿಂದ ಜೊಯಿಡಾ ಬಸ್ ನಿಲ್ದಾಣ  ಶಿವಾಜಿ ವೃತ್ತ-  ಅಂಬೇಡ್ಕರ್ ಭವನ ಪೆಟ್ರೋಲ್ ಪಂಪ್ - ಶಿವಾಜಿ ವೃತ್ತ  ಮಾರ್ಗವಾಗಿ ಪೊಲೀಸ್ ಠಾಣೆಗೆ ಸುಮಾರು 4 ಕಿಲೋಮೀಟರ್ ಏಕತಾ ಓಟ ಮಾಡಿದರು ನಂತರ ಜೋಯಿಡಾ ಪೊಲೀಸ್ ವೃತ್ತ  ಕಛೇರಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿ ಏಕತಾ ಓಟಕ್ಕೆ ವಿರಾಮ ನೀಡುವ ಮೂಲಕ ಜಾಗೃತಿ ಮೂಡಿಸಿದರು

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0