ಸಾಹಿತ್ಯ ಚಿಂತಕರ ಚಾವಡಿಯಿಂದ  "ಹೂ' ಕುರಿತಾದ ಕವಿಗೋಷ್ಠಿ

Nov 7, 2025 - 16:04
 0  16
ಸಾಹಿತ್ಯ ಚಿಂತಕರ ಚಾವಡಿಯಿಂದ  "ಹೂ' ಕುರಿತಾದ ಕವಿಗೋಷ್ಠಿ


ಆಪ್ತ ನ್ಯೂಸ್‌ ಶಿರಸಿ:

ನವೆಂಬರ್‌ 9, ರವಿವಾರ ಮಧ್ಯಾಹ್ನ 3, ಘಂಟೆ ಗೆ , ಶಿರಸಿಯ ನೆಮ್ಮದಿ ಕುಟೀರದಲ್ಲಿ ಶಿರಸಿಯ ಸಾಹಿತ್ಯ ಚಿಂತಕರ ಚಾವಡಿಯ  ಆಶ್ರಯದಲ್ಲಿ, ಹೂವಿನ ವಿಷಯವನ್ನಾಧರಿದ ಕವಿಗೋಷ್ಟಿಯನ್ನು ಆಯೋಜಿಸಲಾಗಿದೆ.

 ಅ ಬಾ ಸಾ ಪ. ಕೇಂದ್ರ ಕಮಿಟಿ ಸದಸ್ಯರಾದ  ಜಗಧಿಶ ಭಂಡಾರಿಯವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಕವಿಗಳೂ ಹಿರಿಯ ತೋಟಗಾರಿಕಾ ಅಧಿಕಾರಿಗಳಾದ ಸತೀಶ ಹೆಗಡೆಯವರು ಕಾರ್ಯಕ್ರಮ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ದಿವಸ್ಪತಿ ಭಟ್ಟ, ಬೆಂಗಳೂರು, ಎಚ್ ಮಂಜು ಹುಲಿಕೆರೆ, ಸಾಹಿತ್ಯ ಚಿಂತಕರ ಚಾವಡಿಯ ಸಂಸ್ಥಾಪಕರಾದ ಎಸ್ ಎಸ್ ಭಟ್ಟ  ಕವಯತ್ರಿ ರೇವತಿ ಭಟ್ಟ ಹೊಸಕೆರೆ ,  ಚಿಂತಕರ ಚಾವಡಿಯ ಗೌರವಾಧ್ಯಕ್ಷರಾದ ಮಂಜುನಾಥ ಹೆಗಡೆ, ಹೂಡ್ಲಮನೆ  ಇವರುಗಳು ಉಪಸ್ಥಿತರಿರುವರು, ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0