ಗುತ್ತಿಗೆದಾರನ ಮನೆಯ ಮೇಲೆ ಕಳ್ಳರ ಕಣ್ಣು: ನಗದು-ಬಂಗಾರ ಕಳ್ಳರ ಪಾಲು

Oct 5, 2025 - 22:32
 0  45
ಗುತ್ತಿಗೆದಾರನ ಮನೆಯ ಮೇಲೆ ಕಳ್ಳರ ಕಣ್ಣು: ನಗದು-ಬಂಗಾರ ಕಳ್ಳರ ಪಾಲು

ಆಪ್ತ ನ್ಯೂಸ್ ಶಿರಸಿ: 
ಶಿರಸಿ ಲಯನ್ಸ್ ನಗರದಲ್ಲಿ ಮನೆಯೊಂದು ಕಳ್ಳತನ ನಡೆದಿದ್ದು ತಡವಾಗಿ ವರದಿಯಾಗಿದೆ. ಮನೆ ಮಾಲೀಕರು ಭಾನುವಾರ ಸಂಜೆಯ ವೇಳೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಗುತ್ತಿಗೆದಾರ ವೆಂಕಟೇಶ ಕಡೆಮನೆ ಎಂಬುವವರಿಗೆ ಸೇರಿದ ಮನೆಯಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಕಳ್ಳತನ ನಡೆದಿದೆ. 
ಕಳ್ಳರು ನಗದು-ಬಂಗಾರ ದೋಚಿದ್ದಾರೆ ಎನ್ನಲಾಗಿದೆ. ಹೊಸ ಮಾರುಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು,ಪಿಎಸ್ಐ ಬಸವರಾಜ್ ಕನಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0