ಅಘನಾಶಿನಿ ಹೋರಾಟ: ಜ.೨೮ ರೂಪುರೇಷೆ ಸಭೆ
ಆಪ್ತ ನ್ಯೂಸ್ ಸಿದ್ದಾಪುರ:
ಅಘನಾಶಿನಿ ನದಿ ಜೋಡಣೆ ವಿರೋಧ ಹೋರಾಟದ ರೂಪ ರೇಷೆ ನಿರ್ಧರಿಸುವ ಹಿನ್ನಲೆಯಲ್ಲಿ ಸಿದ್ದಾಪುರ ತಾಲೂಕಿನ ಬಾಲಮಂದಿರಲ್ಲಿ ಜ.೨೮, ಬುಧವಾರ ೧೦ ಗಂಟೆಗೆ ಪ್ರಮುಖರ ಸಭೆಯನ್ನು ಕರೆಯಲಾಗಿದೆ ಎಂದು ಹೋರಾಟಗಾರರ ವೇದಿಕೆಯ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಘನಾಶಿನಿ ವಿರೋಧಿ ಜಾಗೃತೆ ಪಾದಯಾತ್ರೆಯ ಕುರಿತು ಫೇಬ್ರವರಿ .೧ ರಿಂದ ತಾಲೂಕಾದ್ಯಂತ ೧೨೩ ಗ್ರಾಮಗಳಲ್ಲಿ ಜಾಗೃತ ಸಭೆ ಸಂಘಟಿಸಲು ಹಾಗೂ ಫೇಬ್ರವರಿ.೨ ರಂದು ಅಣಲೇಬೈಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಳಿಮಕ್ಕಿಯಲ್ಲಿ ಸಾರ್ವಜನಿಕ ಸಭೆ ಮತ್ತು ಸಭೆಯ ಸ್ಥಳದಿಂದ ಬಾಳೆಕೊಪ್ಪದ ಅಘನಾಶಿನಿ ನದಿಯ ನೀರು ಹರಿಯುವ ಸ್ಥಳವಾದ ಗೆಜಕಟ್ಟದರವರೆಗೆ ತಾತ್ಪೂರ್ತಿಕ ಹೋರಾಟದ ಕಾರ್ಯಕ್ರಮ ನಿರ್ಧರಿಸಲಾಗಿದ್ದು ಇರುತ್ತದೆ.
ವ್ಯವಸ್ಥಿತ ಹೋರಾಟದ ರೂಪು ರೇಷೆ ನಿರ್ಧರಿಸುವ ಸಭೆಯಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಭಾಗವಹಿಸುವ ಸಭೆಯಲ್ಲಿ ಪ್ರಮುಖರು ಸಭೆಗೆ ಆಗಮಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0









