ನದಿ ತಿರುವು ವಿರೋಧಿಸಿ ಯಲ್ಲಾಪುರ ತಾಲೂಕಿನಾದ್ಯಂತ ಭಜನಾ ಕಾರ್ಯಕ್ರಮ

Mar 25, 2026 - 08:46
 0  168
ನದಿ ತಿರುವು ವಿರೋಧಿಸಿ ಯಲ್ಲಾಪುರ ತಾಲೂಕಿನಾದ್ಯಂತ ಭಜನಾ ಕಾರ್ಯಕ್ರಮ

ಆಪ್ತ ನ್ಯೂಸ್‌ ಯಲ್ಲಾಪುರ:

ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ರವರ ಆದೇಶದಂತೇ ಯುಗಾದಿ ಪಾಢ್ಯ ದಿಂದ ರಾಮನವಮಿಯವರೆಗೆ  9 ದಿನಗಳ ಕಾಲ  ನದಿ ತಿರುವು ಯೋಜನೆ ವಿರೋಧಿಸಿ ಭಜನಾ ಜಾಗ್ರತಿ ಅಭಿಯಾನ ತಾಲೂಕಿನ ಬಹುತೇಕ ದೇವಸ್ಥಾನಗಳಲ್ಲಿ ಆರಂಭಗೊಂಡಿದೆ.


ನದಿ ತಿರುವು ಯೋಜನೆ ವಿರೋಧಿಸಿ ಜನಾ ಜಾಗ್ರತಿ ಅಭಿಯಾನ ದ ನಿಮಿತ್ತ  ಹೆಗ್ಗಾರಿನ ಬಲಮುರಿ ಗಣಪತಿ ದೇವಸ್ಥಾನದಲ್ಲಿ,ಹುತ್ಕಂಡದ ರಾಮಲಿಂಗೇಶ್ವರ, ಆನಗೋಡಿನ ಗೋಪಾಲಕೃಷ್ಣ, ಶಿಸ್ತಮುಡಿಯ ಗಣಪತಿ ಕಟ್ಟೆಯ ದೇವಸ್ಥಾನ, ಕುಂಭತ್ತಿ ದುರ್ಗಾದೇವಿ ದೇವಸ್ಥಾನ, ಕೊಡ್ಲಗದ್ದೆ ಲಕ್ಷ್ಮೀ ನೃಸಿಂಹ ದೇವಸ್ಥಾನ, ಬಿದ್ರಳ್ಳಿ ರಾಮನಾಥೇಶ್ವರ ದೇವಸ್ಥಾನ,ಕುಂದರಗಿಯ ಉಮಾಮಹೇಶ್ವರ ದೇವಾಲಯ,ಕಟ್ಟಿಗೆಯ ಗಣೇಶಗುಡಿ ದೇವಸ್ಥಾನ, ಶೇವ್ಕಾರ ಈಶ್ವರ ದೇವಸ್ಥಾನ  ಸೇರಿದಂತೆ ಹಲವು ದೇವಾಲಯಗಳಲ್ಲಿ ಭಜನಾ ಸಪ್ತಾಹ ಆರಂಭಿಸಿದ್ದಾರೆ.ಕೆಲವಡೆ ಮಾತೃಮಂಡಳಿಯವರು, ಇನ್ನು ಕೆಲವೆಡೆ ಭಜನಾ ತಂಡದವರ ನೇತೃತ್ವದಲ್ಲಿ ನಡೆಯುತ್ತಿದೆ.ಕಟ್ಟಿಗೆಯ ಗಣೇಶಗುಡಿ ದೇವಾಲಯದಲ್ಲಿ ಕುಣಬಿ ಜನಾಂಗದವರಿಂದಲೂ ಭಜನೆ ನಡೆಯುತ್ತಿದ್ದು ಗಮನ ಸೆಳೆದಿದೆ.ಚಂದ್ಗುಳಿ ನಂದುಳ್ಳಿ ವ್ಯಾಪ್ತಿತ  ಚಂದ್ಗುಳಿ ಘಂಟೆ ಗಣಪತಿ, ಮತ್ತಿಮಠ, ಕುಂಬತ್ತಿ, ರಾಮಲಿಂಮಗೇಶ್ವರ ಸೇರಿದಂತೆ ಎಲ್ಲಾ ದೇವಾಲಯದಲ್ಲೂ ಭಜನಾ ತಂಡಗಳಿಂದ ಭಜನೆ ಪ್ರಾರಂಭಿಸಿದ್ದಾರೆ. ಕುಳಿನಾಡು ಸೀಮೆಯ ಕೆಳತರ್ಪಿನ ಬಹುತೇಕ ದೇವಾಲಯಗಳಲ್ಲಿ ಭಜನೆ ನಡೆಯುತ್ತಿದೆ  
ನದಿ ತಿರುವು ಬೇಡ್ತಿ ಅಘನಾಶಿನಿ ಗೆ ಕಾಡಿರುವ ಯೋಜನೆ ವಿರೋಧಿಸಿ ಸಂಕಲ್ಪಿಸಿ ಎರಡು ತಾಸುಗಳ ಭಜನೆ ನಡೆಯುತ್ತಿದೆ.ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ‌ಪಾಲ್ಗೊಂಡಿರುವದು ಕಂಡುಬಂದಿದೆ.ಅಭಿಯಾನವಾಗಿ ಈ ತರಹ ಭಜನೆ ನಡೆಯುತ್ತಿರುವುದರಿಂದ ದಿನದಿಂದ ದಿನಕ್ಕೆ ಭಜನೆಯಲ್ಲಿ ಪಾಲ್ಗೊಳ್ಳುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0