ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿತನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ
ಆಪ್ತ ನ್ಯೂಸ್ ಯಲ್ಲಾಪುರ:
ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿತನಾದ ಶೇಖರ ಮಾದೇವ ದೇವಾಡಿಗ, ಪ್ರಾಯ: 30 ಮಾವಿನಕಟ್ಟಾ ಕುಂದರಗಿ ಈತನಿಗೆ ಹೆಚ್ಚುವರಿ ಸತ್ರ ಜಿಲ್ಲಾ ನ್ಯಾಯಾಲಯ ಕಠಿಣ ಶಿಕ್ಷೆ ನೀಡಿ ಮಂಗಳವಾರ ತೀರ್ಪು ನೀಡಿದೆ.
ಈತನಿಗೆ ಅಂದಿನ ತನಿಖಾಧಿಕಾರಿ ಸಿಪಿಐ ಸುರೇಶ್ ಎಚ್ ಯಳ್ಳೂರ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ತದನಂತರ ಆರೋಪಿತನ ವಿರುದ್ಧ ದೋಷಾರೋಪಣ ಪತ್ರ ತಯಾರಿಸಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ತ್ವರಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ ನ್ಯಾಯಾಲಯದ ನ್ಯಾಯಾಧೀಶೆ ಪ್ರತಿಭಾ ಬಂಡುರಾವ್ ಕುಲಕರ್ಣಿರವರು ಈ ಪ್ರಕರಣದ ಆರೋಪಿತನಾದ ಶೇಖರ ಮಾದೇವ ದೇವಾಡಿಗ ಈತನು ಅಪರಾಧ ಮಾಡಿದ ಬಗ್ಗೆ ಸಾಕ್ಷಿ ಪುರಾವೆಯಿಂದ ಧೃಡಪಟ್ಟಿದೆ ಎಂದು ತಿರ್ಮಾನಿಸಿ ಮಾ ೧೭ ರಂದು ಆರೋಪಿತನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 1,10,000 ರೂ ದಂಡ ವಿಧಿಸಿದ್ದಲ್ಲದೇ, ಕಾನೂನು ಸೇವೆಗಳ ಪ್ರಾಧಿಕಾರದಿಂದ ನಾಲ್ಕು ಲಕ್ಷ ರೂಪಾಯಿ ನೊಂದವಳಿಗೆ ಪರಿಹಾರ ನೀಡುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.
ಈ ಪ್ರಕರಣದ ವಾದವನ್ನು ಸರಕಾರ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಗುರುಶಾಂತಯ್ಯ ಕೆ ಕುರ್ಡಿಕೇರಿ ವಾದ ಮಂಡಿಸಿ ಶಿಕ್ಷೆ ಕೊಡಿಸುವಲ್ಲಿ ಯಶಶ್ವೀಯಾಗಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಸುರೇಶ್ ಎಚ್ ಯಳ್ಳೂರ ಪಿ.ಐ ರವರು ಮಾಡಿದ್ದು, ತನಿಖಾ ಸಹಾಯಕಾರಿ ಎಎಸ್ಐ ವಿಠಲ್ ಮಲವಾಡಕರ, ಕೋರ್ಟ ಮಾನಿಟರಿಂಗ್ ಸಿಪಿಐ ರಮೇಶ ಹನಾಪೂರ ಮಾಡಿದ್ದು ಠಾಣೆಯ ಸಿಬ್ಬಂದಿಗಳಾದ ಎಎಸೈ ಗಜಾನನ ನಾಯ್ಕ ಹಾಗೂ ಸಿಪಿಸಿ ವೀರೇಶ ಎಂ.ಎಚ್ ಪ್ರಕರಣದ ವಿಚಾರಣೆ ಕಾಲಕ್ಕೆ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರಪಡಿಸುವಲ್ಲಿ ಸಹಕರಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0

