ಟಿ.ಎಂ.ಎಸ್ ಎದುರು ಇಂದಿನಿಂದ ಆಮರಣಾಂತ ಉಪವಾಸ ಸತ್ಯಾಗ್ರಹ
ಆಪ್ತ ನ್ಯೂಸ್ ಯಲ್ಲಾಪುರ:
ಪಟ್ಟಣದ ಬಸ್ ನಿಲ್ದಾಣ ಸರ್ಕಲ್ ನಲ್ಲಿ ಗುರುವಾರ ನಡೆದ ರಸ್ತೆ ತಡೆ ಚಳುವಳಿಯಲ್ಲಿ ಸಹಕಾರಿ ಸಂಘಗಳ ಹಿರಿಯ ಅಧಿಕಾರಿಗಳು ಆಡಳಿತಾಧಿಕಾರಿಗಳನ್ನು ಸಂಜೆ ಒಳಗೆ ವಾಪಸ್ ಕರೆಸಿಕೊಳ್ಳುವ ಭರವಸೆಯನ್ನು ಸತ್ಯಾಗ್ರಹಿಗಳ ಎದುರು ತಿಳಿಸಿದ್ದರು. ಆದರೆ ತಡರಾತ್ರಿಯವರೆಗೂ ಯಾವುದೇ ಅಧಿಕೃತ ಸೂಚನೆ ಬಾರದ ಹಿನ್ನೆಲೆಯಲ್ಲಿ ಈ ಮೊದಲೇ ಘೋಷಣೆ ಮಾಡಿರುವಂತೆ ಮಾ ೧೩ ಶುಕ್ರವಾರ ಬೆಳಿಗ್ಗೆ ೧೦.೩೦ ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಬಿಸುವುದಾಗಿ ಟಿ.ಎಂ.ಎಸ್ ಉಳಿಸಿ ಹೋರಾಟ ಸಮಿತಿಯ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ತಿಳಿಸಿದ್ದಾರೆ. ತಮ್ಮ ಜೊತೆ ಉಳಿದವರೂ ಪಾಲ್ಗೊಳ್ಳಬಹುದೆಂದು ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

