ಹಾದಿ ತಪ್ಪಿ ಇಳಿಜಾರಿಗೆ ಉರುಳಿದ ಕಳಚೆ ಬಸ್
ಆಪ್ತ ನ್ಯೂಸ್ ಯಲ್ಲಾಪುರ:
ಯಲ್ಲಾಪುರದಿಂದ ಕಳಚೆಗೆ ಹೊರಟಿದ್ದ ಬಸ್ಸು ಕಳಚೆ ಸಮೀಪದ ಅಪಾಯಕಾರಿ ಇಳಿಜಾರು ತಿರುವಿರುವ ಹೆಬ್ವಾರಕುಂಬ್ರಿ ಚಿಟ್ಟಾಲ್ ಮುರಿ ಬಳಿ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಅಪಾಯಕಾರಿ ಇಳಿಜಾರಿಗೆ ಇಳಿದಿದೆ.
ಮಣ್ಣಿನ ದಿಬ್ಬ ಇರುವುದರಿಂದ ಮುಂದೆ ಬಸ್ಸು ಹೋಗದೇ ಇದ್ದುದರಿಂದಾಗ ಆಗಬಹುದಾದ ಭಾರೀ ಅನಾಹುತ ತಪ್ಪಿದೆ.ಈ ಮಣ್ಣಿನ ದಿಬ್ಬ ಹತ್ತಿದ್ದರೆ ಮುಂದೆ ಕಳಚೆಯ ತಗ್ಗು ಪ್ರದೇಶಕ್ಕೆ ಬಸ್ಸು ಇಳಿಯುತ್ತಿತ್ತು.ಬಸ್ಸಿನಲ್ಲಿ ೧೯ ಜನ ಪ್ರಯಾಣಿಕರು ಇದ್ದು ಚಾಲಕ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
2
Wow
0

