ಅಘನಾಶಿನಿ ನದಿ ಜೋಡಣೆ ವಿರೋಧಿ ಬೃಹತ್ ಸಭೆ ಮತ್ತು ಪಾದಯಾತ್ರೆ: ಪೂರ್ವಭಾವಿ ಯೋಜನಾ ವರದಿ ರದ್ದಿಗೆ ತೀವ್ರ ಆಕ್ರೋಶ - ರವೀಂದ್ರ ನಾಯ್ಕ
ಆಪ್ತ ನ್ಯೂಸ್ ಸಿದ್ದಾಪುರ:
ತಾಲೂಕಾದ್ಯಂತ ಹಮ್ಮಿಕೊಂಡ ಅಘನಾಶಿನಿ - ವರದಾ ನದಿ ಜೋಡಣೆಯ ಯೋಜನೆ ವಿರೋಧ ಜಾಗೃತ ಜಾಥಕ್ಕೆ ಬೃಹತ್ ಸಭೆ ಮತ್ತು ಪಾದಯಾತ್ರೆ ಮೂಲಕ ಚಾಲನೆ ದೊರಕಿದವು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಇಂದು ಸಿದ್ದಾಪುರ ತಾಲೂಕಿನ ಅನಲೇಬೈಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಳಿಮಕ್ಕಿಯಲ್ಲಿ ಬೃಹತ್ ಬಹಿರಂಗ ಸಭೆ ಹಾಗೂ ಸಭೆಯ ನಂತರ ಬಾಳೆಕೊಪ್ಪ ಗ್ರಾಮದ ಅಘನಾಶಿನಿ ಹರಿಯುವ ಗೇಜ್‌ಕಟ್ಟ ನದಿಯವರೆಗೆ ಪಾದಯಾತ್ರೆ ಸಂಘಟಿಸಲಾಗಿತ್ತು.
ಅಘನಾಶಿನಿ ನದಿಗೆ ವರದಾ ನದಿ ಜೋಡಣೆ ಮಾಡಲು ರಾಷ್ಟಿçÃಯ ಜಲ ಅಭೀವೃದ್ದಿ ಸಂಸ್ಥೆಯ ಅಘನಾಶಿನಿ - ವರದಾ ನದಿ ಜೋಡಣೆ ಯೋಜನೆಯ ಪೂರ್ವ ಕಾರ್ಯ ಸಾಧ್ಯತಾ ಕರಡು ವರದಿಯಲ್ಲಿ ಪ್ರಸ್ತಾಪಿಸಿರುವ ಹಿನ್ನಲೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನದಿ ಜೋಡಣೆಯ ವಿರೋಧ ಜಾಗೃತೆಯನ್ನು ತಾಲೂಕಿನ ವಿವಿಧ ೧೨೩ ಗ್ರಾಮಗಳಲ್ಲಿ ಕಾರ್ಯಕ್ರಮ ಸಂಘಟಿಸಲು ನಿರ್ಧರಿಸಿದೆ. ಅಘನಾಶಿನಿ ನದಿ ಜೋಡಣೆಯಿಂದ ಮಲೆನಾಡು ಮತ್ತು ಕರಾವಳಿ ಭಾಗದ ನೈಸರ್ಗಿಕ ಜೀವನದ ವ್ಯವಸ್ಥೆ ನಶಿಸುವುದಲ್ಲದೇ, ನದಿ ಜೋಡಣೆಯ ಅವೈಜ್ಞಾನಿಕ ಯೋಜನೆಯೆಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ರಾಷ್ಟಿçÃಯ ಯೋಜನೆಗಳಿಗೆ ಜನ ವಿರೋಧ ವ್ಯಕ್ತಪಡಿಸಿದಾಗಲೂ ಜಿಲ್ಲೆಯಲ್ಲಿ ಯೋಜನೆ ಮತ್ತು ಮೂಲಭೂತ ಸೌಕರ್ಯಗಳಿಗೆ ೬೪,೩೫೪ ಹೇಕ್ಟರ್ ಅರಣ್ಯ ಭೂಮಿ ದಾರಾಳವಾಗಿ ಸರ್ಕಾರ ಒದಗಿಸುತ್ತದೆ. ಆದರೆ, ೮೦ ಸಾವಿರ ಕುಟುಂಬಗಳಿಗೆ ವಾಸ್ತವ್ಯ ಮತ್ತು ಸಾಗುವಳಿಗಾಗಿ ೫೩ ಸಾವಿರ ಎಕರೆ ಸಾಗುವಳಿ ಹಕ್ಕು ನೀಡಲು ಹಿಂಜರಿಯುವ ಕುರಿತು ತೀವ್ರ ಆಕ್ರೋಶ ಸಭೆಯಲ್ಲಿ ವ್ಯಕ್ತವಾದವು.
ಸಭೆಯಲ್ಲಿ ಪ್ರಮುಖರಾದ ನಾಗಪತಿ ಗೌಡ ಹುಕ್ಕಳ್ಳಿ ಪ್ರಸ್ತಾವನೆ ನೇರವೇರಿಸಿದರು. ಸಾರ್ವಜನಿಕ ಸಭೆಯಲ್ಲಿ ಹಿರಿಯ ಚಿಂತಕರಾದ ಎನ್ ವಿ ಹೆಗಡೆ ಮುತ್ತಿಗೆ, ಜಿಲ್ಲಾ ಸಂಚಾಲಕ ಮಹಭಲೇಶ್ವರ ನಾಯ್ಕ ಬೇಡ್ಕಣಿ, ಎಮ್ ಎಲ್ ಭಟ್ ಸೇವಾ ಸಹಕಾರಿ ಸಂಘ ಅಧ್ಯಕ್ಷರು, ಮಹಿಳಾ ಧುರೀಣರಾದ ವೀಣಾ ಗೌಡ ಅನಲೇಬೈಲ್, ಶ್ಯಾಮಲಾ ಗೌಡ ಬಿದ್ರಖಾನ, ಪದ್ಮಾವತಿ ಗೌಡ ತಂಡಾಗುAಡಿ, ಎಸ್ ಆರ್ ಹೆಗಡೆ ಕುಂಬಾರಕುಳಿ,ಅಬ್ದುಲ್ ಶರೀಪ್ ಹೇರೂರು, ಜುಬೇರ್ ಸಾಬ, ರಾಜೇಶ್ ಭಟ್ ಮಕ್ಕಿಗದ್ದೆ, ಪರಿಸರವಾದಿ ಬಾಲಚಂದ್ರ ಹೆಗಡೆ, ರಾಜಾರಾಮ್ ನಾಯ್ಕ ಕಿರಕೋಡ, ಕೆ ಟಿ ನಾಯ್ಕ ಹೆಗ್ಗೇರಿ ಸೀತಾರಾಮ ಗೌಡ ಹುತ್ಗಾರ, ಮಂಜುನಾಥ ಹೆಗಡೆ ಮಾತನಾಡಿದರು.
ಸ್ವಾಗತ ಚಂದ್ರಶೇಖರ ಗೌಡ ದಿಗೋದಿ, ಮಂಜುನಾಥ ನಾಯ್ಕ ಹೊಂಡಗದ್ದೆ ಕಾರ್ಯಕ್ರಮ ನಿರೂಪಿಸಿದರು, ವಂದಾನರ್ಪಣೆ ಕೆ ಟಿ ನಾಯ್ಕ ಕ್ಯಾದಗಿ ನಿರ್ವಹಿಸಿದರು.
ವೇದಿಕೆ ಮೇಲೆ ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ಗೋವಿಂದ ಗೌಡ ಕಿಲವಳ್ಳಿ, ದಿವಾಕರ್ ನಾಯ್ಕ ಬಾಳೆಜಡ್ಡಿ, ಕೆ ಟಿ ನಾಯ್ಕ ಹೇರೂರು, ಆರ್ ಟಿ ನಾಯ್ಕ, ಬಿ ಡಿ ನಾಯ್ಕ ಕುರಗೇತೋಟ, ಸುಬಾನ್ ಸಾಬ ಅರೆಂದೂರು, ದಿನೇಶ್ ನಾಯ್ಕ ಬೇಡ್ಕಣಿ, ಎನ್ ವಿ ಹೆಗಡೆ ಮುತ್ತಿಗೆ, ಸುನೀಲ್ ನಾಯ್ಕ ಸಂಪಖAಡ, ಎಮ್ ಎಸ್ ಭಟ್ ಕೆರೆಹೊಂಡ, ಚಂದ್ರಕಾAತ್ ನಾಯ್ಕ ಗುಲ್ಲುಮನೆ, ಸುಧಾಕರ್ ಮಡಿವಾಳ, ರಾಮಚಂದ್ರ ನಾಯ್ಕ ತ್ಯಾಗಲಿಮನೆ, ಮಂಜುನಾಥ ಹೆಗಡೆ ಗುಂಜಗೋಡ, ರಾಮಕೃಷ್ಣ ನಾಯ್ಕ, ಶುಭಾ ರಮೇಶ್ ಭಟ್, ಶಿವಾನಂದ ನಾಯ್ಕ , ಸುನಿಲ್ ನಾಯ್ಕ, ಸುಬ್ರಾಯ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಒಗ್ಗಟ್ಟಿನ ಹೋರಾಟಕ್ಕೆ ನಿರ್ಧಾರ:
ಜನ ಮತ್ತು ಪರಿಸರ ವಿರೋಧಿ ನದಿ ಜೋಡಣೆಗೆ ಸಾಂಘಿಕ ಮತ್ತು ಕಾನೂನಾತ್ಮಕ ಹೋರಾಟ ಮಾಡಲು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು ಅಲ್ಲದೇ, ಅಘನಾಶಿನಿ ವಿರೋಧ ಹೋರಾಟಕ್ಕೆ ಪ್ರಾಣ ತ್ಯಾಗಕ್ಕು ಸಿದ್ದ, ನದಿ ಜೋಡಣೆ ಮಾಡಲು ಬಿಡೆವು ಎಂಬ ಆಕ್ರೋಶ ಭರಿತ ಮಾತುಗಳು ಕೇಳಿಬಂದವು. ಹಳ್ಳಿ ಹಳ್ಳಿಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಹಿರಿಯರು, ಮಹಿಳೆಯರು, ಭಾಗವಹಿಸಿ ಹೋರಾಟದ ಕಿಚ್ಚನ್ನು ಹೆಚ್ಚಿಸಿದರು.
ಘೋಷಣೆಯೊಂದಿಗೆ ಪಾದಯಾತ್ರೆ:
ಅಘನಾಶಿನಿ ನದಿ ಜೋಡಣೆಗೆ ತೀವ್ರ ಆಕ್ರೋಶದ ಘೋಷಣೆಗಳೊಂದಿಗೆ ಬೃಹತ್ ಪಾದಯಾತ್ರೆಯು ಗೊಳಿಮಕ್ಕಿ ಮಾರ್ಗವಾಗಿ ಬಾಳೆಕೊಪ್ಪ ಗ್ರಾಮದ ಗೇಜಕಟ್ಟ ಅಘನಾಶಿನಿ ನದಿವರೆಗೂ ಹೋರಾಟಗಾರರು ಹೋರಾಟದ ಭಾವುಟ ಪ್ರದರ್ಶಿಸುತ್ತಾ ಪಾದಯಾತ್ರೆ ಮೂಲಕ ಸಂಚರಿಸಿದರು. ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿರುವುದು ಹೋರಾಟದ ಪ್ರಾಮುಖ್ಯತೆ ಹೆಚ್ಚಿಸಿತು. ಪಾದಯಾತ್ರೆಯ ನೇತೃತ್ವವನ್ನ ಹರಿಹರ ನಾಯ್ಕ ಓಂಕಾರ, ಸೀತಾರಾಮ ಹುಕ್ಕಳ್ಳಿ, ಪರಮ್ ಗೌಡ ಹೆಗ್ನೂರು, ಗನಿ ಸಾಬ ಹೆಗ್ಗರಣೆ, ದಯಾನಂದ ಗೌಡ, ಸುಬ್ರಾಯ ನಾಯ್ಕ, ಮಂಜುನಾಥ ನಾಯ್ಕ ಹೊಂಡಗದ್ದೆ, ಲಿಂಗ ಗೌಡ ನೀರಗಾನ, ಅಜೀತ್ ಮಡಿವಾಳ, ಈಶ್ವರ ನಾಯ್ಕ, ಶಿವಾನಂದ ನಾಯ್ಕ ನೀರಗಾನ, ಮಹೇಶ್ ನಾಯ್ಕ, ವಿನಾಯಕ ಜೋಗನಮನೆ, ಭದ್ರ ಗೌಡ ಹೆಗ್ಗರಣೆ, ಎಮ್ ಎಸ್ ನಾಯ್ಕ ಬಿದ್ರಕಾನ, ವಿನಾಯಕ ನಾಯ್ಕ ಹಲಸಿನಮನೆ, ಸಂಕೇತ ನಾಯ್ಕ ವಹಿಸಿದರು.
ಅಘನಾಶಿನಿ ನದಿಯಲ್ಲಿ ಪ್ರಾರ್ಥನೆ:
ಅಘನಾಶಿನಿ ನದಿಯನ್ನು ಯೋಜನೆಗೆ ಬಿಡೆವು, ಹೋರಾಟ ಮಾಡಿ ನದಿ ಉಳಿಸಿಕೊಳ್ಳುವೆವು ಎಂದು ನದಿ ನೀರಿಗೆ ಇಳಿದು ಸಹಸ್ರಾರು ಸಂಖ್ಯೆಯಲ್ಲಿ ಹೋರಾಟಗಾರರು ಪ್ರತಿಜ್ಞೇ ಮಾಡಿ ಮುಂದಿನ ದಿನಗಳಲ್ಲಿ ದಿಟ್ಟ ಹೋರಾಟ ಮಾಡುವುದಾಗಿ ಘೋಷಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0











