ಆಕ್ಷೇಪಣಾ ಪತ್ರ ಬಿಡುಗಡೆ: ಅಘನಾಶಿನಿ ವರದಾ ನದಿ ಜೋಡಣೆಯ ವರದಿಗೆ ೨೫ ಸಾವಿರ ಲಿಖಿತ ಆಕ್ಷೇಪಣೆಗೆ ಸಜ್ಜು - ರವೀಂದ್ರ ನಾಯ್ಕ

Feb 4, 2026 - 15:18
 0  94
ಆಕ್ಷೇಪಣಾ ಪತ್ರ ಬಿಡುಗಡೆ: ಅಘನಾಶಿನಿ ವರದಾ ನದಿ ಜೋಡಣೆಯ ವರದಿಗೆ ೨೫ ಸಾವಿರ ಲಿಖಿತ ಆಕ್ಷೇಪಣೆಗೆ ಸಜ್ಜು - ರವೀಂದ್ರ ನಾಯ್ಕ
ಆಪ್ತ ನ್ಯೂಸ್‌ ಸಿದ್ದಾಪುರ:
ಪಶ್ಚಿಮ ಘಟ್ಟ ಪ್ರದೇಶದ ೬೪,೩೬೫ ಹೇಕ್ಟರ್ ಅರಣ್ಯ ಪ್ರದೇಶವನ್ನು ಅರಣ್ಯೇತರ ಚಟುವಟಿಕೆಗೆ ನೀಡಲಾಗಿದೆ. ಜಿಲ್ಲೆಯ ಸಾಂದ್ರತೆ ಅನುಗುಣವಾಗಿ ಹೆಚ್ಚಿನ ಒತ್ತಡವನ್ನು ಭರಿಸಲು ಸಾಧ್ಯತೆಗಳಿಲ್ಲ. ಕಾರಣ, ಕರ್ನಾಟಕ ರಾಜ್ಯದ ಉತ್ತರಕನ್ನಡ ಜಿಲ್ಲೆಯಲ್ಲಿನ ಸಿದ್ದಾಪುರದಲ್ಲಿ ನಿಯೋಜಿಸಲಾಗುವ ಅಘನಾಶಿನಿ - ವರದ ನದಿ ಜೋಡಣೆಯ ಯೋಜನೆಯು ಜನ ಮತ್ತು ಪರಿಸರ ವಿರೋಧಿ ಯೋಜನೆಯೆಂದು ಆಕ್ಷೇಪ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
    ಸಿದ್ದಾಪುರ ತಾಲೂಕಿನ ಕ್ಯಾದಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಣಪತಿ ದೇವಾಲಯದ ಆವರಣದಲ್ಲಿ ಫೇ. ೧೧ ರಂದು ೨೫ ಸಾವಿರಕ್ಕೂ ಮಿಕ್ಕಿ ರಾಷ್ಟಿçÃಯ ಜಲಾಭಿವೃದ್ದಿ ಸಂಸ್ಥೆಯ ಯೋಜನಾ ಪೂರ್ವ ಕಾರ್ಯ ಸಾಧ್ಯತ ಕರಡು ವರದಿ ಅಕ್ಟೋಬರ್ ೨೦೨೫ ರಂದು ಸಲ್ಲಿಸಿರುವ ಹಿನ್ನಲೆಯಲ್ಲಿ, ಆಕ್ಷೇಪಿಸುವ ಉದ್ದೇಶದಿಂದ ಕೇಂದ್ರ ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವರಾದ ಭೂಪೇಂದ್ರ ಯಾದವ್ ಅವರಿಗೆ ಜಿಲ್ಲಾಡಳಿತದ ಮೂಲಕ ಸಲ್ಲಿಸಲಿರುವ ಕನ್ನಡದಲ್ಲಿ ಬರೆಯಲಾದ  ಆಕ್ಷೇಪ ಪತ್ರವನ್ನು ಬಿಡುಗಡೆಗೊಳಿಸುತ್ತಾ ಮೇಲಿನಂತೆ ಹೇಳಿದರು.
      ಪಶ್ಚಿಮಘಟ್ಟಗಳು ಕೇವಲ ಪ್ರಾದೇಶಿಕ ಪರಿಸರ ಸಂಪತ್ತು ಅಲ್ಲ. ಹವಮಾನ ಭದ್ರತೆ ವ್ಯವಸ್ಥೆಯ ಅವಿಭಾಜ್ಯ ಅಂಗ. ಇಂತಹ ಸೂಕ್ಷö್ಮ ಪರಿಸರ ಪ್ರದೇಶದಲ್ಲಿ ನದಿಯ ನೀರನ್ನು ತಿರುಗಿಸುವುದು, ಸುರಂಗ ನಿರ್ಮಾಣ ಮತ್ತು ಆಣೆ ಕಟ್ಟುಗಳಂತ ಕಾಮಗಾರಿಗಳನ್ನ ಜರುಗಿಸುವುದು  ಆತಂಕಕಾರಿ. ಅರಣ್ಯ ನಾಶ, ಭೂ ಕುಸಿತ ಅಸ್ಥಿರತೆ, ಜೀವ ವೈವಿದ್ಯ ಹಾನಿ, ಹವಮಾನದ ವ್ಯತಿರಿಕ್ತತೆ ಮೇಲೆ ಪರಿಣಾಮ ಬೀರುವುದೆಂಬುದು ಅಧ್ಯಯನದಿಂದ ತಿಳಿದು ಬಂದಿರುವುದರಿಂದ ನಿಯೋಜಿತ ಯೋಜನೆಯು ಅವೈಜ್ಞಾನಿಕವೆಂದು ಎಂದು ಆಕ್ಷೇಪಣೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.
     

ವಿಶ್ವ ಪರಂಪರೆಯ ತಾಣ:
ಉತ್ತರ ಕನ್ನಡದ ಪಶ್ಚಿಮ ಘಟ್ಟಗಳು ಜೀವ ವೈವಿದ್ಯದ ತಾಣ. ಪ್ರಮುಖ ನದಿಗಳ ಉಗಮ ಸ್ಥಾನ ಮತ್ತು ಮಳೆಮಾರುತಗಳ ನಿಯಂತ್ರಕವಾಗಿ ಮಹತ್ವ ಪಡೆದಿವೆ. ಇದು ಕನಾಟಕದ ಪರಿಸರ ಮತ್ತು ಆರ್ಥಿಕತೆಗೆ ನಿರ್ಣಾಯಕವಾಗಿದೆ. ಈ ಭಾಗವು ದಟ್ಟ ಕಾಡುಗಳು, ಸುಂದರ ಜಲಪಾತಗಳು ಮತ್ತು ವಿಶಿಷ್ಟ ಸಸ್ಯ ಹಾಗೂ ಪ್ರಾಣಿ ಸಂಕುಲಗಳ ತವರಾಗಿದೆ. ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಿದೆ. ಪಶ್ಚಿಮ ಘಟ್ಟಗಳು ವಿಶ್ವದ ೮ ಪ್ರಮುಖ ಜೈವಿಕ ವೈವಿದ್ಯತೆಯ ಹಾಟ್ ಸ್ಪಾಟ್‌ಗಳಲ್ಲಿ ಒಂದಾಗಿದೆ. ಇಲ್ಲಿ ಅಪಾರ ಸಂಖ್ಯೆಯ ಸ್ಥಳೀಯ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳಿವೆ. ಇದು ವೈಜ್ಞಾನಿಕ ಸಂಶೋಧನೆಯಿAದ ಕಂಡುಬAದಿದೆ. ಇಂತಹ ಅಭಿಯಾರಣ್ಯ ಪ್ರದೇಶವೆಂದು ಘೋಷಿಸಿದ ಸೂಕ್ಷö್ಮ ಪ್ರದೇಶದಲ್ಲಿ ಯೋಜನೆಯೂ ಪರಿಸರಕ್ಕೆ ಮಾರಕವಾಗುದೆಂಬುದನ್ನು ಆಕ್ಷೇಪಣೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅರಣ್ಯ ಪ್ರಮಾಣ ಕುಸಿತ:
ಸಂಕ್ಷೀಪ್ತವಾಗಿ ಹೇಳುವುದಾದರೆ, ಉತ್ತರ ಕನ್ನಡದ ಪಶ್ಚಿಮ ಘಟ್ಟಗಳು ಪರಿಸರ ಸಮತೋಲನ, ಜಲ ಸಂಪನ್ಮೂಲ ಮತ್ತು ಜೈವಿಕ ವೈವಿಧ್ಯತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಪ್ರಾಕೃತಿಕ ಸಂಪತ್ತಾಗಿದೆ. ದಾರಾಳವಾಗಿ ಜಿಲ್ಲೆಯ ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗೆ ನೀಡಿರುವುದರಿಂದ ೧೯೭೩ ರಲ್ಲಿ ಇರುವಂತ ಅರಣ್ಯ ಪ್ರಮಾಣ ಶೇ.೭೨.೨೬ ರಿಂದ ೨೦೧೩ ರಲ್ಲಿ ಜಿಲ್ಲೆಯ ಅರಣ್ಯ ಪ್ರಮಾಣ ಶೇ.೫೯.೭೦ ರಷ್ಟು ಕುಸಿತವಾಗಿರುವ ಅಂಶವನ್ನು ಆಕ್ಷೇಪಣೆಯಲ್ಲಿ ಪ್ರಸ್ತಾಪಿಸಿರುವುದು ಗಮನಾರ್ಹ ಅಂಶವೆAದು ಅವರು ತಿಳಿಸಿದರು.

ಆಕ್ಷೇಪಣಾ ಪತ್ರ ಬಿಡುಗಡೆಯ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕರಾದ ಮಹಾಭಲೇಶ್ವರ ನಾಯ್ಕ ಬೇಡ್ಕಣಿ ಹಾಗೂ ಆರ್,ಟಿ,ಹೆಗಡೆ ಐಯನಕೈ, ರಾಜೇಶ ಭಟ್ಟ ಮಕ್ಕಿಗದ್ದೆ, ಕೆ ಟಿ ನಾಯ್ಕ, ಬಿ ಡಿ ನಾಯ್ಕ ಕುರ್ಗೆತೋಟ, ದಿವಾಕರ ನಾಯ್ಕ ಕ್ಯಾದಗಿ, ಹೇಮಂತ ನಾಯ್ಕ ದೊಡ್ಮನೆ ಇವರುಗಳು ಮಾತನಾಡಿದರು. ಶಿವಾನಂದ ಜಿ ನಾಯ್ಕ ಮತ್ತು ಸಂತೋಷ ಎನ್ ಮಡಿವಾಳ ಸೋವಿನಕೊಪ್ಪ, ಮಂಜುನಾಥ ಮಡಿವಾಳ ಹಾರ್ಸಿಕಟ್ಟಾ, ದಿನೇಶ ನಾಯ್ಕ ಹಾರ್ಸಿಕಟ್ಟಾ, ಕೆ ಬಿ ನಾಯ್ಕ ಸುತ್ತಲಮನೆ, ಆರ್ ಟಿ ನಾಯ್ಕ ಅರಶಿನಗೋಡ, ಚಂದ್ರಕಾAತ ನಾಯ್ಕ ಇಟಗಿ, ಲಕ್ಷö್ಮಣ ನಾಯ್ಕ ಐಗೋಡ, ದಿನೇಶ ನಾಯ್ಕ ಬಾನಕುಳಿ,  ಸುರೇಶ ಭಟ್ಟ ವಾಜಗೋಡ, ಸುರೇಶ ಜಿ ಗೌಡ ಇಟಗಿ. ತಿಮ್ಮಪ್ಪ ನಾಯ್ಕ ವಾಟಗಾರ, ರಾಮಕೃಷ್ಣ ನಾಯ್ಕ ಶೀರೂರು, ರಾಜು ನಾಯ್ಕ ಕಿರೆಕೋಡ, ರವಿ ನಾಯ್ಕ ಅರ್ಳಿಮಕ್ಕಿ, ಕೆ ಟಿ ಗೌಡ ಮಾದ್ಲಮನೆ, ಶ್ರೀಪಾದ ನಾಯ್ಕ ಶೀಲೂರು ಹಾಗೂ ಮುಂತಾದವರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0