ಗೋಳಿಯಲ್ಲಿ ಸಡಗರದಿಂದ ನೆರವೇರಿದ ಉದಯವಾಣಿ ಡಿಜಿಟಲ್‌ ಎಡಿಟರ್ ರಾಘವೇಂದ್ರ ಭಟ್ ಪುತ್ರನ ಉಪನಯನ: ಗಣ್ಯರ ಭಾಗಿ

May 14, 2026 - 11:20
 0  154
ಗೋಳಿಯಲ್ಲಿ ಸಡಗರದಿಂದ ನೆರವೇರಿದ ಉದಯವಾಣಿ ಡಿಜಿಟಲ್‌ ಎಡಿಟರ್ ರಾಘವೇಂದ್ರ ಭಟ್ ಪುತ್ರನ ಉಪನಯನ: ಗಣ್ಯರ ಭಾಗಿ

ಆಪ್ತ ನ್ಯೂಸ್ ಶಿರಸಿ:

ತಾಲೂಕಿನ ಪ್ರಸಿದ್ಧ ಗೋಳಿಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಉದಯವಾಣಿ‌ ಡಿಜಿಟಲ್‌ನ ಸೀನಿಯರ್‌ ಕಂಟೆಂಟ್‌ ಎಡಿಟರ್ ರಾಘವೇಂದ್ರ ಭಟ್‌ ಹಾಗೂ ಅರ್ಪಿತಾ ದಂಪತಿಯ ಪುತ್ರ 'ಭಾರ್ಗವ'ನ ಉಪನಯನ ಕಾರ್ಯಕ್ರಮವು ಅತ್ಯಂತ ಸಡಗರ-ಸಂಭ್ರಮ ಹಾಗೂ ಭಕ್ತಿ-ಭಾವದೊಂದಿಗೆ ನೆರವೇರಿತು.

ಈ ಮಂಗಳಕಾರ್ಯದಲ್ಲಿ ರಾಜಕೀಯ, ಆಡಳಿತ ಹಾಗೂ ಮಾಧ್ಯಮ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಿ ವಟುವಿಗೆ ಆಶೀರ್ವದಿಸಿದರು.

ಮಾಜಿ ಸಚಿವರು ಹಾಗೂ ಕಾರ್ಕಳ ಕ್ಷೇತ್ರದ ಶಾಸಕರಾದ ವಿ. ಸುನೀಲ್‌ ಕುಮಾರ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ. ವಿ. ಪ್ರಭಾಕರ್‌ ಮತ್ತು ಶಿರಸಿ ತಹಸೀಲ್ದಾರ್‌ ಪಟ್ಟರಾಜಗೌಡ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಟುವಿಗೆ ಶುಭ ಹಾರೈಸಿದರು.

ರಾಜ್ಯದ ವಿವಿಧ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ಈ ಸಂಭ್ರಮಕ್ಕೆ ಸಾಕ್ಷಿಯಾಗಿ, ತಮ್ಮ ಸಹೋದ್ಯೋಗಿಯ ಸಂತಸದಲ್ಲಿ ಭಾಗಿಯಾದರು.

  • ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಪ್ರಶಾಂತ ನಾಥು

  • ಟಿವಿ-೯ನ ಪ್ರಮೋದ್ ಶಾಸ್ತ್ರಿ

  • ವಿಜಯವಾಣಿ ಮುಖ್ಯ ವರದಿಗಾರ ಶ್ರೀಕಾಂತ ಭಟ್‌

  • ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ನ ಅಶ್ವಿನಿ ಶ್ರೀಪಾದ್

  • ಡೆಕ್ಕನ್‌ ಹೆರಾಲ್ಡ್‌ನ ರಶ್ಮಿ ಬೇಲೂರು

  • ಪ್ರಜಾವಾಣಿಯ ಚಂದ್ರಹಾಸ ಹಿರೇಮಳಲಿ

  • ವಿಜಯಕರ್ನಾಟಕದ ಮುಖ್ಯ ವರದಿಗಾರ ಶಶಿಧರ ನಂದೀಕಲ್‌

  • ಉದಯವಾಣಿಯ ಶೇಷಾದ್ರಿ ಸಾಮಗ

ಇವರೊಂದಿಗೆ ಪ್ರಸಾದ ಹೆಗಡೆ, ಅನಂತಮೂರ್ತಿ ಹೆಗಡೆ, ರಮೇಶ್ ನಾಯ್ಕ್ ಕುಪ್ಪಳ್ಳಿ ಸೇರಿದಂತೆ ಹಲವು ಗಣ್ಯರು, ಕುಟುಂಬಸ್ಥರು ಹಾಗೂ ಆಪ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಕಳೆ ಹೆಚ್ಚಿಸಿದರು. ಪವಿತ್ರ ಸಿದ್ದಿವಿನಾಯಕನ ಸನ್ನಿಧಿಯಲ್ಲಿ, ವೇದಮಂತ್ರಗಳ ಘೋಷದ ನಡುವೆ ನೆರವೇರಿದ ಭಾರ್ಗವನ ಬ್ರಹ್ಮೋಪದೇಶ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0