ಹೇಗಿತ್ತು ಗೊತ್ತಾ ಸಂದೇಶಖಾಲಿ ಎಂಬ ನರಕ? ಈ ನರಕಕ್ಕೆ ಸೆಡ್ಡು ಹೊಡೆದ ರೇಖಾ ಪಾತ್ರಳ ಬದುಕು ಹೇಗಿತ್ತು ಗೊತ್ತಾ?

May 15, 2026 - 08:55
 0  108
ಹೇಗಿತ್ತು ಗೊತ್ತಾ ಸಂದೇಶಖಾಲಿ ಎಂಬ ನರಕ? ಈ ನರಕಕ್ಕೆ ಸೆಡ್ಡು ಹೊಡೆದ ರೇಖಾ ಪಾತ್ರಳ ಬದುಕು ಹೇಗಿತ್ತು ಗೊತ್ತಾ?
ಬರಹ : ಸುಧೀರ್ ಸಾಗರ್.

*********************

ಹೆಣ್ಮಕ್ಳೆಲ್ಲಾ ರೆಡಿಯಾಗಿಬಿಡಿ.
ಇವತ್ತು ರಾತ್ರಿ ಪಕ್ಷದ ಮೀಟಿಂಗ್..‌
ಈ ಮಾತು ಕಿವಿಗ್ ಬೀಳ್ತಿದ್ದಂಗೇ ಊರಿಗೂರೇ ನಡುಗಿ ಹೋಗಿಬಿಡ್ತಿತ್ತು.

ಯಾಕೆಂದರೆ...
ಮಧ್ಯರಾತ್ರಿ ಸಮಯದಲ್ಲಿ...

ಮೀಟಿಂಗಿಗೆ ಬನ್ನಿ ಅಂತ ಏರಿಯಾದ(ಯಾವ ಏರಿಯಾ ಮನಸ್ಸಾಗುತ್ತೋ ಆ ಏರಿಯಾದ) ಹೆಣ್ಮಕ್ಳನ್ನೆಲ್ಲಾ ಪಾರ್ಟಿ ಆಫೀಸಿಗ್ ಕರೆದೊಯ್ದು, ಅದರಲ್ಲಿ ಬೇಕಾದವರನ್ನು ಆರಿಸಿ, ಸಂಪೂರ್ಣ ನಗ್ನವಾಗಿಸಿ ಬೆಳಗಿನ ಜಾವದ ವರೆಗೂ ಅವ್ರಿಂದ ನೃತ್ಯ ಮಾಡಿಸಿ, ನಂತರ ಮನಸೋಇಚ್ಛೆ ಸಂ ಭೋಗಿಸಿ ಕಳಿಸ್ತಿದ್ದದ್ದು ಯಾರೋ ಅಲ್ಲ ಖುದ್ದು TMC ಮುಖಂಡರು. ಈ ಕ್ರೂರಮೃಗಗಳ ಗ್ಯಾಂಗ್ ಲೀಡರ್, TMC ಅಧ್ಯಕ್ಷ ಶೇಖ್ ಶಹಜಹಾನ್...

ರಾಜಧಾನಿಯಿಂದ ಕೇವಲ 70km ದೂರದಲ್ಲಿರೋ, ಬಾಂಗ್ಲಾದೇಶಕ್ಕೆ ಅಂಟಿಕೊಂಡಿರೋ ಜಿಲ್ಲೆ ಉತ್ತರ 24 ಪರಗಣ. ಸುಂದರಬಲ‌ ರಾಷ್ಟ್ರೀಯ ಉದ್ಯಾನವನ ಸೇರಿದಂತೆ‌ ಸಂಪೂರ್ಣ ಜೌಗು ಪ್ರದೇಶದ ದ್ವೀಪಗಳಿಂದಲೇ ತುಂಬಿಹೋಗಿರೋ, ರಾಜ್ಯದ ಮಿನುಗಾರಿಕಾ ಹಬ್. ವಾರ್ಷಿಕ ಹತ್ರತ್ರ 10000ಕೋಟಿ ರೂಪಾಯಿಗಳ ವ್ಯವಹಾರ.
ಇದಿಷ್ಟೂ ತನ್ನದಾಗಿಸಿಕೊಳ್ಳಲೇಬೇಕೆಂದು ಜಿದ್ದಿಗೆ ಬಿದ್ದವನು ಸಂದೇಶ್‌ಖಾಲಿಯ ಶೇಖ್ ಶಹಜಹಾನ್...
ಮೊದಲು ಕೈ ಹಾಕಿದ್ದು ಮೀನಿಗೆ...

ಒಂದೊಂದಾಗಿ ಮೀನಿನ ಕೊಳಗಳನ್ನು ತನ್ನ ವಶಕ್ಕೆ ತೆಗೆದುಕೊಂಡವನು, ನಂತರದಲ್ಲಿ ಇಲ್ಲಿರೋವ್ರ ಭೂಮಿಯನ್ನೂ ದೋಚಿ ಅವೆಲ್ಲವನ್ನೂ ಮೀನಿನ ಹೊಂಡ ಮಾಡಿಬಿಟ್ಟ.
ಊರಿನ ಗಂಡಸರನ್ನೆಲ್ಲಾ ಜೀತದಾಳು ಮಾಡಿಕೊಂಡ. ತಿರುಗಿ ಬಿದ್ರೋ, ಒಂದೋ ಪೊಲೀಸ್ ಕೇಸು ಇಲ್ವೋ ಸುಂದರಬನದ ಜೌಗು ಕೆಸರಲ್ಲಿ ಹೆಣವೂ ಸಿಗದಂತೆ ಖಲ್ಲಾಸು‌. ದಶಕದಲ್ಲಿ ಕಾಣೆಯಾದ ಗಂಡಸರ ಪೂರ್ತಿ ಲೆಕ್ಕವೇ ಸಿಕ್ಕಿಲ್ಲ ಇನ್ನೂ‌‌‌‌...
ನಂತರ ಕೈ ಹಾಕಿದ್ದೇ ಹೆಣ್ಮಕ್ಳ ಸೆರಗಿಗೆ...
ಜಿಲ್ಲೆಯ ಕಂದಾಯ, ಮೀನುಗಾರಿಕೆ, ಪಂಚಾಯ್ತಿ, ತಾಲ್ಲೂಕು ಅಫೀಸ್, ಪಂಚಾಯ್ತಿ ಹೀಗೆ ಜಿಲ್ಲೆಯ ಇಡೀ ಸರ್ಕಾರಿ ಯಂತ್ರವನ್ನೇ ತನ್ನ ಕೈವಶ ಮಾಡಿಕೊಳ್ಳಲು ಹೊರಟವನು ಅದಕ್ಕೆ ಬಳಸಿಕೊಂಡಿದ್ದು ತನ್ನ ಪಾರ್ಟಿ ಆಫೀಸನ್ನು. ಮೀಟಿಂಗಿಗೆ ಕರೆಸಿ ಊರಿನ ಹೆಣ್ಮಕ್ಳನ್ನೆಲ್ಲಾ ಸಾಲಾಗಿ ನಿಲ್ಲಿಸಿ, ಯಾರನ್ನು ಬಯಸ್ತಾರೋ ಅವರನ್ನೆಲ್ಲಾ ಸರ್ಕಾರಿ ಯಂತ್ರಗಳಿಗೆ ಒಪ್ಪಿಸಿಬಿಟ್ಟ.
ಇದೂ ಸಾಲದು ಅಂತ...
ರಾಜಧಾನಿಯಿಂದ ಬರೋ ಅಧಿಕಾರಿಗಳು, ಉದ್ಯಮಿಗಳು, ಪಕ್ಷದ ಲೀಡರ್ಸ್ ಹಣವಂತರೆಲ್ಲರಿಗೂ ಸಂದೇಶ್‌ಖಾಲಿಯ TMC ಪಾರ್ಟಿ ಆಫೀಸೇ ಅಕ್ಷರಶಃ ಮಾಂಸದ ಅಡ್ಡೆ, ಬಯಸಿದಾಗೆಲ್ಲಾ ಬಯಸಿದ ಏರಿಯಾದ ಹೆಣ್ಮಕ್ಳೆಲ್ಲಾ ಉಚಿತ ಬಾಡೂಟ.
ಅಕ್ಷರಶಃ ನರಕ ಸೃಷ್ಟಿಸಿಬಿಟ್ಟ.
ಪೊಲೀಸರಿಗಾದ್ರೂ ಹೇಳೋಣ ಅಂದ್ರೆ, ಅವರಿಗೂ ಒಂದೊಂದ್ ವಾರ ಮೀಸಲು ಇರ್ತಿತ್ತು ಇಲ್ಲಿ. ನಮ್ಮನ್ನೇ ಭೋಗಿಸ್ತಿರೋ ಪೊಲೀಸರತ್ರ ಏನಂತ ಕಂಪ್ಲೇಟ್ ಮಾಡೋದು?....
ಆಗಷ್ಟೇ ದೊಡ್ಡವಳಾಗಿದ್ಲು...
ಇನ್ನೂ ಹದಿಮೂರು ವರ್ಷದ ಮಗು ಅಂತಾನೂ ಬಿಡಲಿಲ್ಲ.
ಸೊಸೆಯನ್ನು ಮನೆ ತುಂಬಿಸಿಕೊಂಡು ಜಸ್ಟ್ ಎರಡೇ ದಿನ, ಪ್ರಸ್ತಶಾಸ್ತ್ರವೂ ಆಗಿರಲಿಲ್ಲ ಇನ್ನು, ಅವಳನ್ನೂ ಬಿಡಲಿಲ್ಲ.
ಎಂಟು ತಿಂಗಳ ಹಸಿ ಬಾಣಂತಿಯನ್ನೂ ಬಿಡಲಿಲ್ಲ‌, ಹೊರಗೆ ಮಗು ಕೊಟ್ಟು ಒಳಗೆ ಕುಣಿಯಬೇಕಾಯ್ತು ಅಂದ್ರೆ ಅದ್ಯಾವ ಮಟ್ಟಕ್ಕಿತ್ತೋ ಈ ನರರಾಕ್ಷಸರ ಪೈಶಾಚಿಕತೆ ಜಸ್ಟ್ ಇಮ್ಯಾಜಿನ್...
ವಿರುದ್ಧ ಧ್ವನಿ ಯಾಕೆ ಎತ್ತಲಿಲ್ಲ?...
ಸಂದೇಶಖಾಲಿ, ಹಿಂಗಲಗಂಜ್, ಇವೆಲ್ಲವೂ ಬಾಂಗ್ಲಾ ಗಡಿಯ ನಾರ್ಥ್ 24 ಪರಗಣ ಜಿಲ್ಲೆಯ ಊರುಗಳು. ಊರು ಅನ್ನೋದಕ್ಕಿಂತಲೂ ಜೌಗು ಪ್ರದೇಶದ 60ಕ್ಕೂ ಅಧಿಕ ದ್ವೀಪಗಳ ಸಮೂಹ. ( ಒಂದ್ಸಲ Hingalganj ಅಂತ ಗೂಗಲ್ ಮ್ಯಾಪ್ ಚೆಕ್ ಮಾಡಿ ನಿಮಗೇ ಗೊತ್ತಾಗುತ್ತೆ) ಈ ಊರಿನ ಪಕ್ಕ ಹರಿಯೋ ನದಿಯೇ ಭಾರತ - ಬಾಂಗ್ಲಾ ಗಡಿ ರೇಖೆ. ಇಲ್ಲಿರೋ ಬಹುತೇಕರು ಬಾಂಗ್ಲಾದಿಂದ ಬಂದ ನಿರಾಶ್ರಿತ ದಲಿತ ಮತುವಾ ಹಿಂದೂಗಳು. ಇಲ್ಲಿಯ ಏನೂ ಇಲ್ಲದ ಇವರಿಗೆ ವೋಟರ್ ಐಡಿಯೂ ಇಂತಾ ಪಕ್ಷಗಳ ಕಾಣಿಕೆ. ಬಹುತೇಕರು ಇನ್ನೂ ಅಕ್ರಮ ವಲಸಿಗರ ಹಣೆಪಟ್ಟಿಯಲ್ಲೇ ಇರುವವರು. ಎಲ್ಲಿಂದ ಧೈರ್ಯ ಬರಬೇಕು?
ಅದೂ ಪೊಲೀಸರೂ ಅವನ ಬೂಟು ನೆಕ್ತಿರೋವಾಗ? ಇದಕ್ಕಿಂತಾ ದಾರುಣ ಏನಂದ್ರೆ ಈ ಮತುವಾ ಪಂಗಡದಿಂದ ಇದ್ದ ಇರೋಬರೋ ಲೀಡರ್ಸ್ ಎಲ್ಲರೂ ಇದ್ದಿದ್ದೇ TMCಪಕ್ಷದಲ್ಲಿ, ಮನೆ ನಾಯಿಯೇ ಕೋಳಿ ಹಿಡಿದು ತಿಂತಿದ್ರೆ ಯಾರಿಗ್ ಹೇಳೋದು ಕಂಪ್ಲೇಂಟು? ಇದನ್ನೇ ಬಳಸಿಕೊಂಡು ದಶಕಗಳ ಕಾಲ ಹುರಿದುಮುಕ್ಕಿಬಿಟ್ರು TMCಯ ಕ್ರೂರಮೃಗಗಳು...
ಇಂತಾ ಭಯೋ ತ್ಪಾದಕರ ವಿರುದ್ಧ...
ದಿಟ್ಟೆದೆಯಿಂದ ಸೆಟೆದೆದ್ದು ನಿಂತವಳು ಈ ರೇಖಾ ಪಾತ್ರ...
2024ರ ಜನವರಿಯಲ್ಲಿ,
ಕೇಸ್ ಸಂಬಂಧ ED ಅಧಿಕಾರಿಗಳು ವಿಚಾರಣೆಗಂತ ಬಂದ್ರೆ, ಅವ್ರನ್ನೇ ರೋಡ್ ರೋಡಲ್ಲಿ ಅಟ್ಟಾಡಿಸಿಕೊಂಡು ಥಳಿಸಿಬಿಡ್ತಾರೆ ಶಹಜಹಾನ್ ಕಡೆಯವರು.
ಆಗ ಎಂಟ್ರಿಯಾಗೋ CBI ಈತನ ವಿರುದ್ಧ ಅಷ್ಟೂ ಹಗರಣಗಳನ್ನು ಬಗೆಯಲು ಶುರು ಮಾಡುತ್ತಾದ್ರೂ, ಕೇಸ್ ಮಾಡೋಣ ಅಂದ್ರೆ ಕೇಸ್ ಕೊಡೋವ್ರ್ಯಾರು? ಒಬ್ರೂ ಮುಂದೆಯೇ ಬರಲಿಲ್ಲ.
ಇಂತಾದ್ದೊಂದು ಸಂದಿಗ್ಧ ಸ್ಥಿತಿಯಲ್ಲಿ ಶಹಜಹಾನ್ ಪಟಾಲಮ್ಮಿನ ಲೈಂಗಿಕ ದೌರ್ಜನ್ಯಗಳೂ, ತನ್ನ ಪತಿಯೂ ಸೇರಿದಂತೆ ಊರಿನವರ ಮೇಲಾದ ದಾರುಣ ದೌರ್ಜನ್ಯಗಳ ವಿರುದ್ಧ ಮೊಟ್ಟ ಮೊದಲ ದೂರು ದಾಖಲಿಸಿದವಳೇ ಈ ಗಟ್ಟಿಗತ್ತಿ ಹೆಣ್ಣುಮಗಳು ರೇಖಾ ಪಾತ್ರ...
ಇವಳ ಒಂದು ಕಂಪ್ಲೇಟ್ ಇಂದಾಗಿ...
ಅಷ್ಟೂ ಹೆಣ್ಮಕ್ಳು ಮುಂದೆ ಬರ್ತಾರೆ, ನೂರಕ್ಕೂ ಹೆಚ್ಚು ಕೇಸುಗಳು ದಾಖಲಾಗ್ತವೆ, ಹೆಣ್ಮಕ್ಳೆಲ್ಲಾ ಬೀದಿಗೆ ಬಂದು ಉಗ್ರ ಹೋರಾಟಕ್ಕಿಳೀತಾರೆ‌. ಆಗ ಕೇಂದ್ರ ಮಹಿಳಾ ಆಯೋಗ, ರಾಜ್ಯ ಬಿಜೆಪಿ ಕೈ ಜೋಡಿಸುತ್ತದೆ. ಖುದ್ದು ರಾಜ್ಯಪಾಲರೇ ಇಲ್ಲಿಗಾಗಮಿಸಿ ಧೈರ್ಯ ತುಂಬುತ್ತಾರೆ.
ಅಂತೂ ಕೊನೆಗೂ ಶೇಖ್ ಶಹಜಹಾನ್ ಹಾಗೂ ಆತನ ಇಡೀ ಗ್ಯಾಂಗೇ ಜೈಲುಪಾಲಾಗೋ ಮುಖಾಂತರ ಹದಿನೈದು ವರ್ಷಗಳ ನರಕಯಾತನೆ ಕೊನೆಗೂ ಶಾಪವಿಮುಕ್ತಿಯಾಗಿತ್ತು ಈ ಜಿಲ್ಲೆಗೆ...
ಇದಕ್ಕಿಂತಲೂ ಮಿಗಿಲಾಗಿ...
ಈ ಬಾರಿ ಅಷ್ಟೂ ಮುಸ್ಲಿಂ ಗೂಂಡಾಗಿರಿಯನ್ನೂ ಎದುರಿಸಿ ಹಿಂಗಲಗಂಜ್ ಕ್ಷೇತ್ರದಿಂದ ಚುನಾವಣೆಗೂ ಸ್ಪರ್ಧಿಸಿ ಭರ್ಜರಿ ಜಯ ದಾಖಲಿಸಿದ್ದಾಳೆ ರೇಖಾಪಾತ್ರ.
ಜೊತೆಗೇ ಈಕೆಯಿಂದಾಗಿ,
30+% ಮುಸ್ಲಿಂ ಬಾಹುಳ್ಯವಿದ್ದಾಗ್ಲೂ ಉತ್ತರ 24 ಪರಗಣ ಜಿಲ್ಲೆಯ 33ಕ್ಷೇತ್ರಗಳಲ್ಲಿ ಬರೋಬ್ಬರಿ 22ಕ್ಷೇತ್ರಗಳನ್ನು ಬಿಜೆಪಿ ಗೆದ್ದು ವಿಜಯಪತಾಕೆ ಹಾರಿಸಿಬಿಟ್ಟಿದೆ....
ಮಮತಾ ಬ್ಯಾನರ್ಜಿಯೆಂಬ ರಕ್ತ ಬೀಜಾಸುರರ ಅಂತ್ಯಹಾಡಲೆಂದೇ ಬಂದ ಸಾಕ್ಷಾತ್ ದುರ್ಗೆಯ ಅವತಾರ ಈ ರೇಖಾಪಾತ್ರ...🔥❤

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0