ಸಿದ್ದಾಪುರದಲ್ಲಿ ಮೇ. ೧೫ ರಂದು ಅರಣ್ಯವಾಸಿ ಮತ್ತು ಅಘನಾಶಿನಿ ನದಿ ಜೋಡಣೆ ವಿರೋಧ ಸಭೆ

May 12, 2026 - 08:25
 0  63
ಸಿದ್ದಾಪುರದಲ್ಲಿ ಮೇ. ೧೫ ರಂದು ಅರಣ್ಯವಾಸಿ ಮತ್ತು ಅಘನಾಶಿನಿ ನದಿ ಜೋಡಣೆ ವಿರೋಧ ಸಭೆ

ಆಪ್ತ ನ್ಯೂಸ್ ಸಿದ್ದಾಪುರ:

ಅರಣ್ಯವಾಸಿ ಮತ್ತು ಅಘನಾಶಿನಿ ನದಿ ಜೋಡಣೆ ವಿರೋಧ ಸಭೆಯನ್ನು ಮೇ.೧೫, ಶುಕ್ರವಾರದಂದು  ಸ್ಥಳಿಯ ರಾಘವೇಂದ್ರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ ಎಂದು ಹೋರಟಗಾರರ ವೇದಿಕೆಯ ಪ್ರಧಾನ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಪ್ರಕಟಣೆಯಲ್ಲಿ ತಿಳಿಸದ್ದಾರೆ.
ರಾಜ್ಯ ಸರ್ಕಾರದ ನೀತಿಗೆ ವಿರುದ್ದವಾಗಿ ಅರಣ್ಯ ಅತಿಕ್ರಮಣದಾರರ ಮಹಜರ್ ಜರುಗುತ್ತೀರುವುದು ಮತ್ತು ಅರಣ್ಯವಾಸಿಗಳು ಅತಿಕ್ರಮಿಸಿರುವ ಮೂರು ಎಕರೆ ಸಾಗುವಳಿಗೆ ಆತಂಕ ಮಾಡಬಾರದೆಂಬ ರಾಜ್ಯ ಸರ್ಕಾರದ ಆದೇಶ ರದ್ದಿಗೆ ಹೈ ಕೊರ್ಟ ನಲ್ಲಿ ಪ್ರಕರಣ ದಾಖಲಾಗಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಘನಾಶಿನಿ ನದಿ ಜೋಡಣೆ ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಆಕ್ಷೇಪಣಾ ಪತ್ರದ ಸ್ವೀಕೃತಿ ಪ್ರತಿ ವಿತರಿಸುವ ವಿಧಾನದ ಕುರಿತು ಹಾಗೂ ಯುನಿಸ್ಕೋ ವಿಶ್ವ ಪರಂಪರೆಯ ಕೇಂದ್ರದಿಂದ ಹೋರಾಟಗಾರರ ವೇದಿಕೆಗೆ ಬಂದಿರುವ  ಉತ್ತರದ ಮಾಹಿತಿಯ ವಿಷಯವನ್ನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹೋರಾಟಗಾರರ ವೇದಿಕೆಯ ಜಿಲ್ಲಾದ್ಯಕ್ಷ ರವೀಂದ್ರ ನಾಯ್ಕ ಅಧ್ಯಕ್ಷತೆ ವಹಿಸುವ ಸಭೆಯಲ್ಲಿ ನದಿ ಜೋಡಣೆ ಆಯೋಗಕ್ಕೆ ಸ್ಥಳೀಕರಿಂದ ಆಕ್ಷೇಪಣೆಗೆ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0