ಶಿರಸಿ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿನಿಧಿ ಪುರಸ್ಕಾರ ಪ್ರಕಟ; ನಾಲ್ವರು ಸಾಧಕರಿಗೆ ಗೌರವ

Jul 28, 2026 - 14:09
 0  166
ಶಿರಸಿ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿನಿಧಿ ಪುರಸ್ಕಾರ ಪ್ರಕಟ; ನಾಲ್ವರು ಸಾಧಕರಿಗೆ ಗೌರವ

ಆಪ್ತ ನ್ಯೂಸ್ ಶಿರಸಿ:

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವಿವಿಧ ಗಣ್ಯರ ಸ್ಮರಣಾರ್ಥ ನೀಡಲಾಗುವ ಪ್ರತಿಷ್ಠಿತ ದತ್ತಿನಿಧಿ ಪುರಸ್ಕಾರಗಳಿಗೆ ಈ ವರ್ಷದ ಅರ್ಹರನ್ನು ಆಯ್ಕೆ ಮಾಡಲಾಗಿದೆ.

ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಕೆರೆಗದ್ದೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರಿಗೆ ನೀಡಲಾಗುವ ವಿವಿಧ ದತ್ತಿನಿಧಿ ಗೌರವಗಳಿಗೆ ಅಂತಿಮ ಮುದ್ರೆ ಹಾಕಲಾಯಿತು.

ಕಳೆದ ಎರಡು ವರ್ಷಗಳ ಹಿಂದೆ ಆರಂಭಿಸಲಾದ **‘ಗೋಲ್ಡನ್ ಪೆನ್ ಪುರಸ್ಕಾರ’**ಕ್ಕೆ ಲೋಕಧ್ವನಿ ಪತ್ರಿಕೆಯ ಹಿರಿಯ ಉಪಸಂಪಾದಕ ಗಣೇಶ ಮುರೇಗಾರ ಅವರನ್ನು ಆಯ್ಕೆ ಮಾಡಲಾಗಿದೆ.

ಅದೇ ರೀತಿ, ಲೋಕಧ್ವನಿ ಪತ್ರಿಕೆಯ ಸ್ಥಾನಿಕ ಸಂಪಾದಕ ನಾಗರಾಜ ಮತ್ತಿಗಾರ ಅವರು ತಮ್ಮ ತಂದೆಯ ಸ್ಮರಣಾರ್ಥ ನೀಡುತ್ತಿರುವ ದಿ. ಸುಬ್ಬಣ್ಣ ಮತ್ತಿಗಾರ ದತ್ತಿನಿಧಿ ಪುರಸ್ಕಾರಕ್ಕೆ ತತ್ವನಿಷ್ಠ ಪತ್ರಿಕೆಯ ಹಿರಿಯ ಉಪಸಂಪಾದಕ ಯೋಗೀಶ ಹೆಗಡೆ ಆಯ್ಕೆಯಾಗಿದ್ದಾರೆ.

ಪತ್ರಕರ್ತ ಗಿರಿಧರ ಕಬ್ನಳ್ಳಿ ಅವರು ತಮ್ಮ ಪಾಲಕರ ಸ್ಮರಣಾರ್ಥ ನೀಡುತ್ತಿರುವ ಕಬ್ನಳ್ಳಿ ದಿ. ಸರೋಜಾ ಮತ್ತು ಛತ್ರಪತಿ ಹೆಗಡೆ ದತ್ತಿನಿಧಿ ಪುರಸ್ಕಾರಕ್ಕೆ ಮಾರಿಕಾಂಬಾ ವಾಹಿನಿಯ ವರದಿಗಾರ ಮಾದೇವ ನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನು, ಲೋಕಧ್ವನಿ ಸಿಇಒ ಜಯಂತ್ ಭಟ್ ಅವರು ತಮ್ಮ ತಾಯಿ ಸ್ಮರಣಾರ್ಥ ನೀಡುತ್ತಿರುವ ದಿ. ಲಕ್ಷ್ಮೀ ಗೋಪಾಲಕೃಷ್ಣ ಭಟ್ ಬಿಸಲಕೊಪ್ಪ ದತ್ತಿನಿಧಿ ಪುರಸ್ಕಾರಕ್ಕೆ ಹಿರಿಯ ಪತ್ರಿಕಾ ವಿತರಕ ಎಸ್.ಎಸ್. ಧಾರೇಶ್ವರ ಅವರನ್ನು ಆಯ್ಕೆ ಮಾಡಿ ಗೌರವಿಸಲಾಗುತ್ತಿದೆ.

ಆಯ್ಕೆಯಾದ ಎಲ್ಲ ಪುರಸ್ಕೃತರಿಗೆ ಅಭಿನಂದನಾ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಸಂಘದ ವತಿಯಿಂದ ಆಯೋಜಿಸಲಾಗುವ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ ಹಿರೇಕೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0