ಇಂದಿನಿಂದ ಆಗಸ್ಟ್‌ 5ರವರೆಗೆ ಶ್ರೀ ರಾಮನಾಥೇಶ್ವರ ದೇವಸ್ಥಾನದಲ್ಲಿ ಐದು ದಿನಗಳ ವೇದಪಾರಾಯಣ

Aug 1, 2026 - 19:52
 0  66
ಇಂದಿನಿಂದ ಆಗಸ್ಟ್‌ 5ರವರೆಗೆ ಶ್ರೀ ರಾಮನಾಥೇಶ್ವರ ದೇವಸ್ಥಾನದಲ್ಲಿ ಐದು ದಿನಗಳ ವೇದಪಾರಾಯಣ

ಆಪ್ತ ನ್ಯೂಸ್‌ ಯಲ್ಲಾಪುರ:

ತಾಲೂಕಿನ ಯಡಳ್ಳಿ–ಮಂಚಿಕೇರಿಯಲ್ಲಿರುವ ಶ್ರೀ ರಾಮನಾಥೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಐದು ದಿನಗಳ ವೇದಪಾರಾಯಣ ಕಾರ್ಯಕ್ರಮ ಇಂದಿನಿಂದ (ಆಗಸ್ಟ್‌ 1) ಆರಂಭಗೊಂಡಿದ್ದು, ಆಗಸ್ಟ್‌ 5ರವರೆಗೆ ನಡೆಯಲಿದೆ.

ಲೋಕದ ಶಾಂತಿ, ಸಮೃದ್ಧಿ ಹಾಗೂ ಸರ್ವರ ಒಳಿತಿಗಾಗಿ ಆಯೋಜಿಸಲಾಗಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರತಿದಿನ ವೇದಘೋಷದೊಂದಿಗೆ ವಿಶೇಷ ಪೂಜೆ, ವೇದಪಾರಾಯಣ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.

ಈ ಪುಣ್ಯಮಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ರಾಮನಾಥೇಶ್ವರ ದೇವರ ದರ್ಶನ ಪಡೆದು ಆಶೀರ್ವಾದಕ್ಕೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ವ್ಯವಸ್ಥಾಪನಾ ಸಮಿತಿಯವರು ಭಕ್ತರಲ್ಲಿ ಮನವಿ ಮಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0