ಡೋಂಗ್ರಿ ಗ್ರಾ,ಪಂ ಮಾಜಿ ಉಪಾಧ್ಯಕ್ಷ ಗಾದೆ ಯಂಕಣ್ಣ ಇನ್ನು ನೆನಪು ಮಾತ್ರ.

Oct 16, 2025 - 10:24
 0  86
ಡೋಂಗ್ರಿ ಗ್ರಾ,ಪಂ ಮಾಜಿ ಉಪಾಧ್ಯಕ್ಷ ಗಾದೆ ಯಂಕಣ್ಣ ಇನ್ನು ನೆನಪು ಮಾತ್ರ.

ಆಪ್ತ ನ್ಯೂಸ್ ರಾಮನಗುಳಿ:

ಅಂಕೋಲಾ ತಾಲೂಕಿನ ಡೋಂಗ್ರಿ ಪಂಚಾಯತದ ಮಾಜಿ ಉಪಾಧ್ಯಕ್ಷರು, ಸಾಮಾಜಿಕ ಕೆಲಸಗಳಲ್ಲಿ ಸದಾ ಮುಂದಿದ್ದ, ಎಲ್ಲರೊಂದಿಗೆ ಸ್ನೇಹಸಂಪಾದಿಸಿದ್ದ,ಬಡವರ ಬಂದು ,ಮಾತಿನೊಂದಿಗೆ ಗಾದೆಗಳನ್ನು ಪೋಣಿಸಿ ಗಾದೆ ಯಂಕಣ್ಣ ಎಂದೆ ಎಲ್ಲರಿಗೂ ಪರಿಚಿತರಾಗಿದ್ದ ವೆಂಕಟರಮಣ ವೈದ್ಯ ಹೆಗ್ಗಾರ  ಇವರು ಇಹಲೊಕ ತ್ಯಜಿಸಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಇವರು ಪತ್ನಿ, ಹಿರಿಯ ಪುತ್ರ ಪತ್ರಕರ್ತ ಎನ್ ವಿ ವೈದ್ಯ ಹೆಗ್ಗಾರ, ಸೊಸೆ ಬರಹಗಾರ್ತಿ ಚೈತ್ರಿಕಾ ವೈದ್ಯ, ಕಿರಿಯ ಮಗ ವಿನೋದ್ ವೈದ್ಯ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಮಾಜಿ ಶಾಸಕರು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ನಾಯ್ಕ, ಭಾಜಪ ಅಂಕೋಲಾ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ,ಡೋಂಗ್ರಿ ಗ್ರಾಮ ಪಂಚಾಯತ ಅಧ್ಯಕ್ಷ ವಿನೋದ್ ಭಟ್ಟ, ಸದಸ್ಯರಾದ ನಿತ್ಯಾನಂದ ಭಟ್ಟ ,ನಾರಾಯಣ ಭಟ್ಟ, ಮುಖಂಡರಾದ ನಾರಾಯಣ ಹೆಗಡೆ, ವಿ ಎಸ್ ಭಟ್ಟ ಕಂಬನಿ ಮಿಡಿದ್ದಾರೆ

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0