ತಳ್ಳು ಗಾಡಿ ಐಸಾ! ಇನ್ನೂ ಸ್ವಲ್ಪ ಐಸಾ!!! ಛೇ ಇದೇನಿದು ಅವಸ್ಥೆ! ಬುದ್ಧಿವಂತರ ನಾಡನ್ನು ಯಾವ ಹಂತಕ್ಕೆ ತಂದಿಟ್ಟರು ಇವರು ನೋಡಿ!

Apr 26, 2026 - 09:58
 0  136

ಆಪ್ತ ನ್ಯೂಸ್‌ ಶಿರಸಿ:

ಶಿರಸಿ-ಹಾವೇರಿ ರಸ್ತೆಯ ಅವ್ಯವಸ್ಥೆ ಒಂದೆರಡಲ್ಲ! ಗುತ್ತಿಗೆದಾರನ ಬೇಜವಾಬ್ದಾರಿಯಿಂದ ನಿತ್ಯ ಸಾವಿರಾರು ಜನರು ನರಕ ಅನುಭವಿಸುತ್ತಿದ್ದಾರೆ. ಈ ರಸ್ತೆಯನ್ನು ಪುರಾತನ ಕಾಲಕ್ಕೆ ಒಯ್ದ ಕೀರ್ತಿ ಈ ಗುತ್ತಿಗೆದಾರನದ್ದು!
ಈ ವೀಡಿಯೋ ನೋಡಿ, ಇಲ್ಲಿ ಮಳೆ ಬಂದು ಬಸ್‌ ಮುಂದಕ್ಕೆ ಚಲಿಸಲಾಗದೇ ಪ್ರಯಾಣಿಕರು ತಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನಕ್ರೆಡಿಬಲ್‌ ಶಿರಸಿ ಎನ್ನುವ ಇನ್ಸ್‌ಸ್ಟಾಗ್ರಾಮ್‌ ಪುಟದಲ್ಲಿ ಈ ವೈರಲ್‌ ವೀಡಿಯೋ ಪೋಸ್ಟ್‌ ಆಗಿದ್ದು ಸಾಕಷ್ಟು ವೈರಲ್‌ ಆಗುತ್ತಿದೆ. 
ಎರಡು-ಮೂರು ದಶಕಗಳ ಹಿಂದೆ ಶಿರಸಿ ಸೇರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಈರೀತಿಯ ರಸ್ತೆಗಳಿದ್ದವು ಎನ್ನುವುದನ್ನು ನಾವು ಕೇಳಿ ತಿಳಿದಿದ್ದೆವು. ಆದರೆ ಅಂತಹ ಪರಿಸ್ಥಿತಿಯನ್ನು ಮತ್ತೊಮ್ಮೆ ತೋರಿಸುತ್ತಿರುವ ಅಧಿಕಾರಿಗಳು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರಿಗೆ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ಗುತ್ತಿಗೆದಾರನಿಗಂತೂ ಹಿಡಿಶಾಪಗಳ ಮಂತ್ರಾಕ್ಷತೆಯೇ ನಡೆಯುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ!

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 1
Wow Wow 0